

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ವಿಶೇಷ ಕಾರ್ಯಾಚರಣೆ ನಡೆಸಿ 1980 ಪ್ರಕರಣ ದಾಖಲಿಸಿ ಸಂಚಾರ ಪೊಲೀಸರು 9.96 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.
ಬುಧವಾರ ಬೆಳಗ್ಗೆ 11 ರಿಂದ ಸಂಜೆ 4 ಗಂಟೆ ವರೆಗೂ ನಗರದ ಎಲ್ಲೆಡೆ ಸಂಚಾರ ಪೊಲೀಸರು ನಿಯಮ ಉಲ್ಲಂಸುವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದರು.
ಪ್ರವೇಶ ನಿಷಿದ್ಧ 471, ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ 352, ತ್ರಿಬಲ್ ರೈಡಿಂಗ್ 60, ನೋ ಪಾರ್ಕಿಂಗ್ 178, ುಟ್‌ಪಾತ್ ಪಾರ್ಕಿಂಗ್ 106, ಶಿರಸಾಣ ಧರಿಸದೆ ವಾಹನ ಚಾಲನೆ 813 ಪ್ರಕರಣ ದಾಖಲಿಸಿ 9,96,500 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.