

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನ (ಪಿಎಂಬಿಜೆಪಿ)ಯಿಂದ ಕಳೆದ 8 ವರ್ಷದಲ್ಲಿ ಜನರು ಔಷಧಕ್ಕಾಗಿ ಮಾಡುವ ವೆಚ್ಚದಲ್ಲಿ 18 ಸಾವಿರ ಕೋಟಿ ರೂ. ಉಳಿತಾಯ ಆಗಿದೆ. 2022ರಲ್ಲಿ 9 ಸಾವಿರ ಹೊಸ ಮಳಿಗೆ ತೆರೆಯಲಾಗಿದ್ದು, 766 ಜಿಲ್ಲೆಗಳ ಪೈಕಿ 743ರಲ್ಲಿ ಮಳಿಗೆಗಳು ಕಾರ್ಯಾರಂಭ ಮಾಡಿವೆ ಎಂದು ಸರ್ಕಾರ ತಿಳಿಸಿದೆ.