ಚಿರತೆ ದಾಳಿಗೆ 17 ಕುರಿಗಳು ಬಲಿ

Published on

ಚನ್ನಪಟ್ಟಣ : ತಾಲೂಕಿನ ಮುದಗೆರೆ ಗ್ರಾಮದಲ್ಲಿ ಬೆಳಗಾಗುವುದರೊಳಗೆ ರೈತನೊರ್ವನ ಕೊಟ್ಟಿಗೆಯಲ್ಲಿದ್ದ 17 ಕುರಿಗಳು ಚಿರತೆ ದಾಳಿಗೆ ಬಲಿಯಾಗಿವೆ. ಗ್ರಾಮದ ಚಂದ್ರು ಎಂಬುವವರು ಮನೆಯ ಪಕ್ಕದ ಶೆಡ್ಡಿನಲ್ಲಿ ಕುರಿಗಳ ಸಾಕಣೆ ಮಾಡುತ್ತಿದ್ದರು. ಶನಿವಾರ ಮುಂಜಾನೆ ಶೆಡ್ಡಿಗೆ ಲಗ್ಗೆಯಿಟ್ಟಿರುವ ಚಿರತೆಯೊಂದು ಕುರಿಗಳನ್ನು ಸಾಯಿಸಿದೆ. ಚಿರತೆ ದಾಳಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಮಲ್ಲೇಶ್ ಭೇಟಿ ನೀಡಿ ಪರಿಶೀಲಿಸಿದರು. ಬೋನು ಇಟ್ಟು ಚಿರತೆ ಸೆರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಗ್ರಾಮದಲ್ಲಿ ಪದೇಪದೆ ಚಿರತೆ ದಾಳಿ ನಡೆಯುತ್ತಿದೆ. ಗ್ರಾಮದ ಒಳಗೆ ಚಿರತೆ ಓಡಾಟ ನಡೆಸುತ್ತಿದ್ದು, ಗ್ರಾಮಸ್ಥರು ಆತಂಕದಲ್ಲಿ ದಿನದೂಡುವಂತಾಗಿದೆ. ಸಮಸ್ಯೆ ಇದ್ದರೂ ಗಮನಹರಿಸದಿರುವ ಇಲಾಖೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net