

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 14,313 ಹೊಸ ಕರೊನಾ ಪ್ರಕರಣಗಳು ದಾಖಲಾಗಿದ್ದು, ಇದು ಈ ವರ್ಷದ ಮಾರ್ಚ್ನಿಂದ ವರದಿಯಾಗಿರುವ ಅತಿ ಕಡಿಮೆ ನಿತ್ಯಪ್ರಕರಣಗಳ ಸಂಖ್ಯೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಬೆಳಗಿನ ವರದಿ ತಿಳಿಸಿದೆ.
24 ಗಂಟೆಗಳಲ್ಲಿ ಇನ್ನೂ 181 ಜನರು ಕರೊನಾಗೆ ಬಲಿಯಾಗಿದ್ದು, ಈವರೆಗೆ ದೇಶದಲ್ಲಿ ಕರೊನಾದಿಂದ ಮೃತರಾದವರ ಸಂಖ್ಯೆ 4,50,963ಕ್ಕೆ ಏರಿದೆ. ದೇಶಾದ್ಯಂತ ಸಕ್ರಿಯ ಕರೊನಾ ಪ್ರಕರಣಗಳ ಸಂಖ್ಯೆ 2,14,900 ಆಗಿದ್ದು, ಇದು ಕಳೆದ 212 ದಿನಗಳಿಗೆ ಹೋಲಿಸಿದರೆ ಅತಿಕಡಿಮೆ ಮಟ್ಟದಲ್ಲಿದೆ. ಕರೊನಾದ ಸಾಪ್ತಾಹಿಕ ಪಾಸಿಟಿವಿಟಿ ದರವು ಶೇಕಡ 1.48 ರಷ್ಟಿದ್ದು, ಈ ದರವು ಕಳೆದ 109 ದಿನಗಳಿಂದ ಶೇ. 3 ಕ್ಕಿಂತ ಕಡಿಮೆ ಇದೆ. ದೈನಿಕ ಪಾಸಿಟಿವಿಟಿ ದರ 1.21 ರಷ್ಟಿದೆ. (ಏಜೆನ್ಸೀಸ್)