ಚಾಕೊಲೇಟ್​ ಕದ್ದಿದ್ದಕ್ಕೆ 13ರ ಬಾಲಕಿ ಕೊಲೆ!: ಚಿತ್ರಹಿಂಸಿ ಕೊಟ್ಟು ಕ್ರೂರವಾಗಿ ಕೊಂದ ಕಿರಾತಕರು; ಘಟನೆಗೆ ವ್ಯಾಪಕ ಆಕ್ರೋಶ | Chocolate

dk - 2025-02-18T174738.023
Published on

Chocolate:ಮನೆ ಕೆಲಸ ಮಾಡುವ ವೇಳೆ ಚಾಕೊಲೇಟ್​ ಕದ್ದಿದ್ದಾಳೆ ಎಂಬ ಕಾರಣಕ್ಕಾಗಿ 13 ವರ್ಷದ ಬಾಲಕಿಯನ್ನು ಮನೆಯ ಮಾಲೀಕರು ಕೊಂದಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಸೋಮವಾರ ನಡೆದಿದೆ.

ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಚಾಕೊಲೇಟ್ ಕದ್ದಿದ್ದಾಳೆ ಎಂದು ಆರೋಪಿಸಿ ಚಿತ್ರಹಿಂಸೆ ಕೊಟ್ಟು ಸಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮನೆ ಮಾಲೀಕರಾದ ಶಿಕ್ಷಕಿ ರಶೀದ್​ ಸಫೀಕ್​​ ಮತ್ತು ಪತ್ನಿ ಸನಾ ಆರೋಪಿಗಳನ್ನು ಬಂಧಿಸಲಾಗಿದೆ.

ಇನ್ನು ಮೃತ ಬಾಲಕಿ ಅನಾಥೆಯಾಗಿದ್ದು, ಆಕೆಗೆ ಪಾಲಕರಿಲ್ಲ. ಹೀಗಾಗಿ, ಮನೆಯಲ್ಲಿ ಕೆಲಸಕ್ಕೆ ಇಟ್ಟುಕೊಳ್ಳಲಾಗಿತ್ತು ಎಂದು ವರದಿ ಉಲ್ಲೇಖಿಸಿದೆ. ಈ ಘಟನೆಯು ಪಾಕಿಸ್ತಾನದ್ಯಾಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, #JusticeforIqra ಎಂಬ ಹ್ಯಾಶ್‌ಟ್ಯಾಗ್ ಹತ್ತಾರು ಸಾವಿರ ವೀಕ್ಷಣೆಗಳನ್ನು ಗಳಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net