ಬೆಂಗಳೂರು: ಸಚಿವ ಕೆ.ಎನ್.ರಾಜಣ್ಣ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ಪಕ್ಷದ ಹೈಕಮಾಂಡ್ನ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು CM ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ:ಇದು ಕಾನೂನಿನ ದುರುಪಯೋಗ; ಸುಕೇಶ್ ಚಂದ್ರಶೇಖರ್ಗೆ ಛೀಮಾರಿ ಹಾಕಿದ ಸುಪ್ರೀಂಕೋರ್ಟ್ | Supreme Court
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಡಿಸಿಎಂ ರಾಜಣ್ಣರವರ ನಡುವೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವ ಬಗ್ಗೆ ನಡೆಯುತ್ತಿರುವ ವಾದದ ಕುರಿತು ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ:ನವಜಾತ ಶಿಶುಗಳಲ್ಲಿಯೇ ಏಕೆ ಅಧಿಕವಾಗಿ ಕಾಮಾಲೆ ಕಾಣಿಸಿಕೊಳ್ಳುತ್ತದೆ?: ತಜ್ಞರು ಹೇಳೊದೇನು ಗೊತ್ತೆ? | Jaundice
ದಲಿತ ಮುಖಂಡರೊಂದಿಗೆ ಸಭೆ
ದಲಿತ ಮುಖಂಡರೊದಂದಿಗಿನ ಬಜೆಟ್ ಪೂರ್ವ ಸಭೆಯ ಬಗ್ಗೆ ಉತ್ತರಿಸಿ, ಇಂದು ದಲಿತ ಮುಖಂಡರೊಂದಿಗೆ ಸಭೆ ನಡೆಸಿ ಅವರ ಸಲಹೆ ಅಭಿಪ್ರಾಯಗಳನ್ನು ಪಡೆಯಲಾಗಿದೆ ಎಂದರು. ವಿಧಾನಪರಿಷತ್ತಿನ ಸದಸ್ಯರ ನಾಮನಿರ್ದೇಶನ ಕುರಿತು ಚರ್ಚೆಯನ್ನು ತನ್ನ ಅನಾರೋಗ್ಯದ ನಿಮಿತ್ತ ನಡೆಸಲು ಸಾಧ್ಯವಾಗಿಲ್ಲ, ಮುಂದೆ ಈ ಕುರಿತು ನವದೆಹಲಿಗೆ ಹೋಗುವ ಸಾಧ್ಯತೆಯಿದೆಯೆಂದು ಸಿಎಂ ತಿಳಿಸಿದರು.
ಸರ್ಕಾರಕ್ಕೆ ಹಣದ ಸಮಸ್ಯೆ ಇಲ್ಲ; ಜನರಿಗೆ ನಮ್ಮೇಲೆ ನಂಬಿಕೆ ಇದೆ: DK ಶಿವಕುಮಾರ್