ನವಜಾತ ಶಿಶುಗಳಲ್ಲಿಯೇ ಏಕೆ ಅಧಿಕವಾಗಿ ಕಾಮಾಲೆ ಕಾಣಿಸಿಕೊಳ್ಳುತ್ತದೆ?: ತಜ್ಞರು ಹೇಳೊದೇನು ಗೊತ್ತೆ? | Jaundice

dk - 2025-02-18T164934.609
Published on

Jaundice;ಹೆಚ್ಚಿನ ನವಜಾತ ಶಿಶುಗಳಲ್ಲಿ ಜನನದ ನಂತರ ಕಾಮಾಲೆ(ಜಾಂಡಿಸ್​) ಕಾಣಿಸಿಕೊಳ್ಳುತ್ತದೆ. ಕೆಲ ಮಕ್ಕಳು ಹುಟ್ಟಿದಾಗಿನಿಂದಗಿನಿಂದ ಕಾಮಾಲೆಯಿಂದ ಬಳಲುತ್ತಾರೆ. ನವಜಾತ ಶಿಶುಗಳಲ್ಲಿ ಜಾಂಡಿಸ್​ ಎನ್ನುವುದು ಸಾಮಾನ್ಯವಾಗದೆ. ಒಂದು ಅಂದಾಜಿ ಪ್ರಕಾರ, ಹುಟ್ಟುವ 20 ಶಿಶುಗಳಲ್ಲಿ ಸುಮಾರು 16 ಮಕ್ಕಳು ಜಾಂಡಿಸ್​ ಕಾಯಿಲೆಗೆ ತುತ್ತಾಗುತ್ತಾರೆ ಎಂದು ವೈದ್ಯರು ಹೇಳುತ್ತಾರೆ. ಆದ್ರೆ, ಜಾಂಡಿಸ್​ ಬಂದ ಎರಡ್ಮೂರು ವಾರಗಳಲ್ಲಿ ಮಕ್ಕಳು ತಾನಾಗಿಯೇ ಚೇತರಿಸಿಕೊಳ್ಳುತ್ತಾರೆ. ಆದರೂ ನಿರ್ಲಕ್ಷ್ಯ ಮಾಡದೇ ವೈದ್ಯರ ಬಳಿ ತಪಾಸಣೆಗೆ ಒಳಪಡಬೇಕು.

ಕೆಲ ಮಕ್ಕಳಿಗೆ ಮಾತ್ರ ಚಿಕಿತ್ಸೆಗೆ ಮಾತ್ರ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಅದರ ಲಕ್ಷಣಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ, ನವಜಾತ ಶಿಶುಗಳಲ್ಲಿ ಅಧಿಕ ಜಾಂಡಿಸ್​ ರೋಗ ಬರಲು ಕಾರಣ ಏನೆಂಬುವುದನ್ನು ತಿಳಿಯೋಣ.

ಕಾಮಾಲೆ ಯಾವ ರೋಗ?

ಕಾಮಾಲೆ ರೋಗವು ಯಕೃತ್ತಿಗೆ ಸಂಬಂಧಿಸಿದ್ದಾಗಿದೆ. ಇದು ಜಾಂಡಿಸ್​ ಎಂಬ ವೈರಸ್​ನಿಂದ ಉಂಟಾಗುತ್ತದೆ. ಕಾಮಾಲೆ ಬಂದಾಗ ಕಣ್ಣುಗಳು ಮತ್ತು ಉಗುರುಗಳು ಹಳದಿ ಬಣ್ಣಕ್ಕೆ ತಿರುತ್ತದೆ. ಚಿಕ್ಕ ಮಕ್ಕಳಿಗೆ ಈ ಸಮಸ್ಯೆ ಅಧಿಕವಾಗಿ ಕಂಡುಬರುತ್ತದೆ.

ನವಜಾತ ಶಿಶುವಿನಲ್ಲಿನ ಲಕ್ಷಣಗಳು

*ಮಕ್ಕಳು ವಾಂತಿ ಮತ್ತು ಅತಿಸಾರದಿಂದ ಬಳಲುತ್ತಾರೆ.

*100 ಡಿಗ್ರಿ ಜ್ವರ ಇರುವುದು.

*ಹಳದಿ ಮೂತ್ರ ಬರುವುದು.

*ಮುಖ ಮತ್ತು ಕಣ್ಣು ಹಳದಿ ಬಣ್ಣಕ್ಕೆ ತಿರುಗುವುದು.

ಅಧಿಕವಾಗಿ ಮಕ್ಕಳಲ್ಲಿ ಕಾಮಾಲೆ ಬರಲು ಕಾರಣ..?

ವೈದ್ಯರ ಪ್ರಕಾರ, ಮಕ್ಕಳಲ್ಲಿ ಜಾಂಡಿಸ್​ ಅಧಿಕವಾಗಿ ಕಾಣಸಿಕೊಳ್ಳಲು ಪ್ರಮುಖ ಕಾರಣ ಯಕೃತ್ತಿ(ಲಿವರ್​) ವೃದ್ಧಿಯಾಗಿರಲ್ಲ.ಲಿವರ್​ ರಕ್ತದಿಂದ ಬಿರುಲಿನ್ ಅನ್ನು ತೆರುವುಗೊಳಿಸುತ್ತದೆ. ಆದರೆ, ಯಕೃತ್ತಿ ಸರಿಯಾದ ಅಭಿವೃದ್ಧಿಯಾದಗ ಕಾರಣ, ಬಿರುಲಿನ್​ ಅನ್ನು ಫಿಲ್ಟರ್​ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ದೇಹಗಳಲ್ಲಿ ಬಿರುಲಿನ್​ ಪ್ರಮಾಣ ಜಾಸ್ತಿಯಾಗಿ ಕಾಮಾಲೆಗೆ ಕಾರಣವಾಗುತ್ತದೆ.

ಇದನ್ನೂ ಓದಿ:Keshus Corner | ದೇಶಿ ಶೈಲಿ ಆಹಾರಕ್ಕೆ ಹೆಸರುವಾಸಿ ಕೇಶೂಸ್​​ ಕಾರ್ನರ್ಮಕ್ಕಳಲ್ಲಿ ಕಾಮಾಲೆ ಚಿಕಿತ್ಸೆ: ಮಕ್ಕಳಲ್ಲಿ ಕಾಮಾಲೆಯ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯಕೀಯ ಸಲಹೆ ಪಡೆಯಬೇಕು. ವೈದ್ಯರ ಸಲಹೆಯ ಮೇರೆಗೆ ಮಾತ್ರ ಔಷಧಿಗಳನ್ನು ನೀಡಬೇಕು.(ಏಜೆನ್ಸೀಸ್​) ​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net