

ನವದೆಹಲಿ: ಇಸ್ಲಾಂ ಧರ್ಮದಲ್ಲಿ ಮಹತ್ವದ ತಿಂಗಳು ಎಂದರೆ ಅದು ರಂಜಾನ್ ಎಂದು ಹೇಳಬಹುದಾಗಿದೆ. ಮುಸ್ಲಿಂ ಭಾಂದವರು ಭಕ್ತಿ ಮತ್ತು ಸಮರ್ಪಣಾ ಭಾವದಿಂದ ಪ್ರಾರ್ಥನೆ ಸಲ್ಲಿಸಿ ದಾನ ಅಥವಾ ಅಗತ್ಯವಿರುವವರಿಗೆ ಸಹಾಯ ಮಾಡುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ರಂಜಾನ್ ಸಮಯದಲ್ಲಿ ಅಪ್ಪಿತಪ್ಪಿಯೂ ಯಾವುದೇ ರೀತಿಯ ತಪ್ಪಾಗದಂತೆ ಎಚ್ಚರವಹಿಸುತ್ತಾರೆ. ಆದರೆ ಪವಿತ್ರ ರಂಜಾನ್ ಸಮಯದಲ್ಲೇ ಮಸೀದಿಯಲ್ಲೊಂದು ಭಯಾನಕ ಘಟನೆ ನಡೆದಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
ಘಟನೆಯೂ ಪಾಕಿಸ್ತಾನದ ಮುಜಾಫರ್‌ಗಢದ ಕೋಟ್ ಅಡ್ಡಸ್ ನಗರದ ಸನಾವನ್ ಬುಖಿ ಚೌಕ್‌ನಲ್ಲಿರುವ ಮಸೀದಿಯೊಳಗೆ ನಡೆದಿದ್ದು, ಇಡೀ ಮುಸ್ಲಿಂ ಸಮುದಾಯವನ್ನು ತಲೆ ತಗ್ಗಿಸುವಂತೆ ಮಾಡಿದೆ. ಘಟನೆ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಸಂತ್ರಸ್ತ ಬಾಲಕ ರಂಜಾನ್ ಪ್ರಯುಕ್ತ ಇತಿಹಾಫ್ ಆಚರಿಸುತ್ತಿದ್ದ. ಇತಿಕಾಫ್ ಎಂದರೆ ಏಕಾಂತದಲ್ಲಿ ಅಲ್ಲಾಹನನ್ನು ಆರಾಧಿಸುವುದು. ರಂಜಾನ್ನ ತಿಂಗಳ ಕೊನೆಯ 10 ದಿನಗಳಲ್ಲಿ ಮುಸ್ಲಿಮರು ಮಸೀದಿಯ ಒಂದೊಂದು ಬದಿ ಅಥವಾ ಮೂಲೆಯಲ್ಲಿ ಕೂತು ಅಲ್ಲಾನನ್ನು ಆರಾಧಿಸುತ್ತಾರೆ. ಈ ವೇಳೆ ಮಸೀದಿ ಪ್ರವೇಶಿಸಿದ ಆರೋಪಿ ಯಾರು ಇಲ್ಲದೇ ಇರುವುದನ್ನು ನೋಡಿಕೊಂಡು ಬಾಲಕನ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಆರೋಪಿ ಬಾಲಕನ ಮೇಲೆ ಅತ್ಯಾಚಾರವೆಸಗುತ್ತಿದ್ದಾಗ ಮಸೀದಿಯ ಮೌಲ್ವಿ ಆತನನ್ನು ಹಿಡಿದಿದ್ದಾರೆ. ಕೂಡಲೇ ಆರೋಪಿ ತಪ್ಪಿಸಿಕೊಂಡಿದ್ದು, ಮೌಲ್ವಿ ಹಾಗೂ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.