108 ಆ್ಯಂಬುಲೆನ್ಸ್​ ಸಿಬ್ಬಂದಿಗೆ ಪಾವತಿಯಾಗದ ವೇತನ; ಮತ್ತೆ ಹೋರಾಟದ ಎಚ್ಚರಿಕೆ ಕೊಟ್ಟ ನೌಕರರು

108 ambulance
Published on

ಬೆಂಗಳೂರು: ಆರೋಗ್ಯ ಕವಚ 108 ಆ್ಯಂಬುಲೆನ್ಸ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಇದನ್ನು ವಿರೋಧಿಸಿ ಮತ್ತೆ ಹೋರಾಟ ನಡೆಸಲು ನೌಕರರು ಮುಂದಾಗಿದ್ದಾರೆ.

ಸರಿಯಾಗಿ ವೇತನ ಆಗದೆ ಸಮಸ್ಯೆ ಅನುಭವಿಸುವಂತಾಗಿದೆ. ಕುಟುಂಬ ನಿರ್ವಹಣೆ ಮಾಡಲು ನೌಕರರು ಪರದಾಡಬೇಕಾದ ಪರಿಸ್ಥಿತಿ ಬಂದೊಗಿದೆ. ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಬಾಕಿ ಇರುವ ನಾಲ್ಕು ತಿಂಗಳ ಸಂಬಳವನ್ನು ಕೂಡಲೇ ಪಾವತಿಸಬೇಕು ಎಂದು 108 ಆ್ಯಂಬುಲೆನ್ಸ್ ನೌಕರರ ಸಂಘ ಒತ್ತಾಯಿಸಿದೆ.

ಜುಲೈ 7 ಡೆಡ್ಲೈನ್!

ಕಳೆದ ನಾಲ್ಕು ತಿಂಗಳಿನಿಂದ ವೇತನವಾಗದೆ ಸಮಸ್ಯೆ ಅನುಭವಿಸುತ್ತಿದ್ದೇವೆ. ಜುಲೈ 7ರ ಒಳಗಾಗಿ ಸಂಬಂಧಪಟ್ಟ ಸಂಸ್ಥೆ ಸಂಬಳ ಪಾವತಿ ಮಾಡಬೇಕು. ಇಲ್ಲದೇ ಹೋದಲ್ಲಿ ಜುಲೈ 8ರಿಂದ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು 108 ಆ್ಯಂಬುಲೆನ್ಸ್ ನೌಕರರು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net