ಕರೊನಾ ಮದ್ದು ನಾಳೆ ಬಿಡುಗಡೆ: ಕೆಲವು ಆಸ್ಪತ್ರೆಗಳಿಗೆ ಒಮ್ಮೆಗೆ 10 ಸಾವಿರ ಪ್ಯಾಕೆಟ್​ ವಿತರಣೆ

Untitled-1
Published on

ನವದೆಹಲಿ: ಮದ್ದೇ ಇಲ್ಲದ ರೋಗ ಎನ್ನಲಾಗಿರುವ ಕರೊನಾಗೆ ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮದ್ದು ಕಂಡು ಹಿಡಿದಿದ್ದು, ಅದು ನಾಳೆಯೇ ಲೋಕಾರ್ಪಣೆ ಆಗಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಾಳೆ ರಾಷ್ಟ್ರ ರಾಜಧಾನಿಯಲ್ಲಿ ಈ ಔಷಧದ ಹತ್ತು ಸಾವಿರ ಪ್ಯಾಕೆಟ್​ಗಳನ್ನು ಕೆಲವು ಆಸ್ಪತ್ರೆಗಳಿಗೆ ನೀಡಲಿದ್ದಾರೆ.

ಒ2 ಡಿಜೆ ಎಂಬ ಹೆಸರಿನ ಈ ಔಷಧವು ದೇಹವನ್ನು ಸೇರಿಕೊಂಡ ವೈರಾಣುಗಳ ಬಲವನ್ನು ಕುಂದಿಸಿ, ಸೋಂಕು ಇತರ ಭಾಗಗಳಿಗೆ ಹರಡದಂತೆ ರಕ್ಷಾಕವಚ ನಿರ್ವಿುಸುತ್ತದೆ. ಈ ಔಷಧ ಬಳಸಿದ ಮೂರೇ ದಿನಗಳಲ್ಲಿ ಸೋಂಕಿತರು ಚೇತರಿಸಿಕೊಳ್ಳುವಂತೆ ಮಾಡುವ ಸಾಮರ್ಥ್ಯ ಇದಕ್ಕಿರುವುದು ಕ್ಲಿನಿಕಲ್ ಟ್ರಯಲ್​ನಲ್ಲಿ ಇದು ಸಾಬೀತಾಗಿದೆ ಎಂದು ಡಿಆರ್​ಡಿಒ ತಿಳಿಸಿದೆ.

ಒ2 ಡಿಜೆ ರೂಪ ಯಾವುದು?: ಪುಡಿಯ ರೂಪದಲ್ಲಿರುವ ಈ ಔಷಧವನ್ನು ಸೋಂಕಿತರು ಯಾವುದೇ ಭಯವಿಲ್ಲದೆ ನೀರಿನಲ್ಲಿ ಬೆರೆಸಿ ಕುಡಿಯಬಹುದು. ಇದು ಕೋವಿಡ್ ರೋಗಿಗಳು ಗುಣಮುಖರಾಗಿ ಶೀಘ್ರ ಆಸ್ಪತ್ರೆಯಿಂದ ಹೊರಬರಲು ನೆರವಾಗುತ್ತಿದೆ.

ಲಾಭಗಳೇನು?: ಈ ಔಷಧದಿಂದ ಜೀವಹಾನಿ ತಗ್ಗಲಿದೆ. ಸೋಂಕಿತರು ಮೂರೇ ದಿನದಲ್ಲಿ ಚೇತರಿಸಿಕೊಂಡರೆ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಕಾಡುತ್ತಿರುವ ಹಾಸಿಗೆಗಳ ಕೊರತೆ ಸಮಸ್ಯೆ ಬಗೆಹರಿಯಲಿದೆ. ಎಲ್ಲ ಸೋಂಕಿತರಿಗೂ ಬೆಡ್ ಸೌಲಭ್ಯ ಸಿಗಲಿದೆ. ಆಮ್ಲಜನಕದ ಕೊರತೆ ತಗ್ಗಿ ರೋಗಿಗಳ ಚೇತರಿಕೆಗೆ ನೆರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net