10 ಕೋಟಿ ರೂ. ಕೊಡಿ, ಇಲ್ಲವಾದ್ರೆ ನಿಮ್ಮ ಮಗನ ಕೊಲೆ.. BJP ಸಂಸದರಿಗೆ ಬೆದರಿಕೆ ಕರೆ!

Bbau (71)
Published on

ಬಿಹಾರ: ಬಿಹಾರ ವಿಧಾನಸಭಾ ಚುನಾವಣೆಯ ನಡುವೆ, ಹಿರಿಯ BJP ಸಂಸದ ಸಂಜಯ್ ಜೈಸ್ವಾಲ್ ಅವರಿಗೆ 10 ಕೋಟಿ ರೂ. ಸುಲಿಗೆ ಬೇಡಿಕೆ ಇಟ್ಟಿರುವ ಮತ್ತು ಬೇಡಿಕೆ ಈಡೇರಿಸದಿದ್ದರೆ ತಮ್ಮ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುವ ಕರೆ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಪ್ರಸ್ತುತ ಲೋಕಸಭೆಯಲ್ಲಿ ಮುಖ್ಯ ಸಚೇತಕರಾಗಿರುವ ಸಂಜಯ್ ಜೈಸ್ವಾಲ್​ಗೆ ಶುಕ್ರವಾರ ಕರೆ ಬಂದಿದೆ. "ಶುಕ್ರವಾರ ಮಧ್ಯಾಹ್ನ ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಫೋನ್ ಕರೆಗಳು ಬಂದಿವೆ ಎಂದು ಸಂಸದರು ನಿನ್ನೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕರೆ ಮಾಡಿದವರು 10 ಕೋಟಿ ರೂ. ಪಾವತಿಸಲು ಕೇಳಿದ್ದರು, ಇಲ್ಲದಿದ್ದರೆ ಅವರು ತಮ್ಮ ಮಗನನ್ನು ಕೊಲ್ಲುತ್ತಾರೆ" ಎಂದು ಎಸ್‌ಡಿಪಿಒ (ಬೆಟ್ಟಿಯಾ ಪಟ್ಟಣ) ವಿವೇಕ್ ದೀಪ್ ಹೇಳಿದ್ದಾರೆ.

"ಬೆದರಿಕೆ ಕಾಲ್​ ಮಾಡಿದವನ ವಿರುದ್ಧ ಬೆಟ್ಟಿಯಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಕರೆ ಮಾಡಿದವರನ್ನು ಪತ್ತೆ ಮಾಡುತ್ತಿದ್ದೇವೆ" ಎಂದು ಅವರು ಹೇಳಿದರು.

ಸಂಜಯ್ ಜೈಸ್ವಾಲ್ ಬಿಹಾರದ ಬಿಜೆಪಿಯ ಪ್ರಮುಖ ನಾಯಕರಾಗಿದ್ದು, ಪಶ್ಚಿಮ ಚಂಪಾರಣ್ ಕ್ಷೇತ್ರವನ್ನು ಸಂಸತ್ ಸದಸ್ಯರಾಗಿ (ಸಂಸದ) ಪ್ರತಿನಿಧಿಸುತ್ತಿದ್ದಾರೆ. ಅವರು ಬಿಹಾರ ಬಿಜೆಪಿ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net