ತೆಂಗಿನಕಾಯಿ ಕಾರ್ಖಾನೆ ಮೇಲೆ ದಾಳಿ; 10ಕ್ಕೂ ಹೆಚ್ಚು ಬಾಲಕಾರ್ಮಿಕರ ರಕ್ಷಣೆ

child labour
Published on

ತುಮಕೂರು: ತೆಂಗಿನಕಾಯಿ ಇಂಡಸ್ಟ್ರಿಗಳ ಮೇಲೆ ದಿಢೀರ್ ಆಗಿ ಕರ್ನಾಟಕ ಮಕ್ಕಳ ರಕ್ಷಣಾ ಆಯೋಗದಿಂದ ದಾಳಿ‌ ನಡೆಸಲಾಗಿದ್ದು 10ಕ್ಕೂ ಹೆಚ್ಚು ಬಾಲಕಾರ್ಮಿಕರ ರಕ್ಷಣೆ ಮಾಡಲಾಗಿದೆ. ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.

ಈ ಕಾರ್ಖಾನೆಗಳು ತುಮಕೂರು ಜಿಲ್ಲೆ, ತಿಪಟೂರು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದು ಹೊಸಪಾಳ್ಯ, ಮಂಜುನಾಥನಗರ, ಆಲೂರು ಗೇಟ್​ಗಳಲ್ಲಿರುವ ಕಾರ್ಖಾನೆಗಳ ಮೇಲೆ ದಾಳಿ ನಡೆಸಲಾಗಿದೆ. ಕಾರ್ಖಾನೆ ಮಾಲೀಕರು ದಾಳಿ ವೇಳೆ ಮಕ್ಕಳನ್ನ ಕೊಠಡಿ ಒಂದರಲ್ಲಿ ಕೂಡಿ ಹಾಕಿದ್ದು, ಅವರನ್ನು ರಕ್ಷಿಸಿ, ಕಾರ್ಖಾನೆ ಮಾಲಿಕರ ವಿರುದ್ಧ ಕ್ರಮಕ್ಕೆ ಸೂಚನೆ ಮಕ್ಕಳ ರಕ್ಷಣಾ ಆಯೋಗದಿಂದ ಸೂಚನೆ ಹೊರಡಿಸಲಾಗಿದೆ.

ಮಹಿಳಾ ಕಾರ್ಮಿಕರ ಸ್ಥಿತಿಯೂ ಶೋಚನೀಯ!

ಇನ್ನು, ಕಾರ್ಖಾನೆಗಳಲ್ಲಿ ಮಹಿಳಾ ಕಾರ್ಮಿಕರೂ ಸಮವಸ್ತ್ರ, ಮಾಸ್ಕ್ ಸೇರಿದಂತೆ ಯಾವುದೇ ಮೂಲಸೌಕರ್ಯಗಳಿಲ್ಲದೇ ಹೀನಾಯ ಸ್ಥಿತಿಯಲ್ಲಿ ಕೆಲಸ ಕೆಲಸ ಮಾಡುತ್ತಿದ್ದಾರೆ.

ಕಾರ್ಖಾನೆಯೊಂದರ ಮಾಲೀಕರು ಮಕ್ಕಳನ್ನ ಅಕ್ರಮವಾಗಿ ಕೂಡಿಹಾಕಿದ್ದರು‌. ಇಷ್ಟೆಲ್ಲಾ ನಡೆಯುತ್ತಿದ್ದರೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಮಕ್ಕಳ ರಕ್ಷಣಾ ಆಯೋಗ ಗರಂ ಆಗಿದೆ. ಈ ದಾಳಿಯ ನಂತರ, ತಿಪಟೂರು ತಾಲೂಕಿನಲ್ಲಿರುವ ಎಲ್ಲಾ ಕಾರ್ಖಾನೆಗಳು ಮತ್ತು ಕಾರ್ಮಿಕರ ಬಗ್ಗೆ ಮಾಹಿತಿ ಸಂಗ್ರಹಿಸುವುದಕ್ಕೆ ಆಯೋಗ ಮುಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net