More

    ಸರ್ಪ್ರೈಸ್​ ವಿಸಿಟ್​ಗೆ ತೆರಳಿದ ಡಿಕೆಶಿಗೆ ಇಂದಿರಾ ಕ್ಯಾಂಟೀನ್​ಅಲ್ಲಿ ಸಿಗಲಿಲ್ಲ ತಿಂಡಿ! ಮುಂದೇನಾಯ್ತು?

    ಬೆಂಗಳೂರು: ಇಂದು ಕಸವಿಲೇವಾರಿ ಘಟಕಗಳನ್ನು ಪರಿಶೀಲಿಸಲು ತೆರಳಿದ್ದ ಡಿಕೆ ಶಿವಕುಮಾರ್, ಅಚಾನಕ್ಕಾಗಿ ಇಂದಿರಾ ಕ್ಯಾಂಟೀನ್​​ಗೆ ಭೇಟಿ ನೀಡಿದ್ದರು. ಈ ಸಂದರ್ಭ, ಅವರು ಕ್ಯಾಂಟೀನ್​ನಲ್ಲಿ ತಿಂಡಿ ಕೇಳಿದ್ದು, ಖಾಲಿ ಆಗಿದ್ದ ಘಟನೆ ನಡೆದಿದೆ.

    ಇಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​, ಬೆಂಗಳೂರಿನ ಕಸ ವಿಲೇವಾರಿ ಘಟಕ ಸಪ್ರೈಸ್ ವಿಸಿಟ್​ ಕೊಟ್ಟು ಪರಿಶೀಲನೆ ನಡೆಸಲು ಮುಂದಾಗಿದ್ದರು. ಸದಾಶಿವ ನಗರದ ಮನೆಯಿಂದ ಹೊರಟ ಡಿ ಕೆ ಶಿವಕುಮಾರ್, ಮೊದಲು ಕನ್ನಳ್ಳಿ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಡಿ‌ಕೆ ಶಿವಕುಮಾರ್​ಗೆ ಜಾಲಹಳ್ಳಿ ಸಿಗ್ನಲ್ ಬಳಿ ಟ್ರಾಫಿಕ್ ಬಿಸಿ ತಟ್ಟಿದೆ.

    ಸರ್ಪ್ರೈಸ್​ ವಿಸಿಟ್​ಗೆ ತೆರಳಿದ ಡಿಕೆಶಿಗೆ ಇಂದಿರಾ ಕ್ಯಾಂಟೀನ್​ಅಲ್ಲಿ ಸಿಗಲಿಲ್ಲ ತಿಂಡಿ! ಮುಂದೇನಾಯ್ತು?

    ನಂತರ, ಚೊಕ್ಕಸಂದ್ರದ ಇಂದಿರಾ ಕ್ಯಾಂಟಿನ್ ಗೆ ಭೇಟಿ ನೀಡಿದ್ದರು. ಈ ಸಂದರ್ಭ ಅವರು, ಸಿಬ್ಬಂದಿ ಬಳಿ ತಿಂಡಿ ಕೊಡಿ ಎಂದು ಕೇಳಿದ್ದು, ಖಾಲಿ ಆಗಿದೆ ಎಂಬ ಉತ್ತರ ಲಭಿಸಿದೆ. ಈ ಸಂದರ್ಭದಲ್ಲಿ “ಎಷ್ಟು ಪ್ಲೇಟ್ ಬರುತ್ತದೆ?” ಎಂದು ಕ್ಯಾಂಟೀನ್ ಮ್ಯಾನೇಜರ್ ಗೆ ಕೇಳಿದಾಗ “208 ಪ್ಲೇಟ್ ಬಂದು ಖಾಲಿ ಆಗಿದೆ” ಎಂದರು. “ಮಾಧ್ಯಮ ಮಿತ್ರರಿಗೆ ತಿಂಡಿ ಕೊಡಿಸೋಣ ಅಂದುಕೊಂಡೆ, ಆದರೆ ಖಾಲಿ ಆಗಿದೆಯಲ್ಲ” ಎಂದು ನಗೆ ಬೀರಿದರು. ಸಾಕಷ್ಟು ಪ್ರಮಾಣದಲ್ಲಿ ತಿಂಡಿ ಪೂರೈಕೆ ಖಾತರಿಪಡಿಸಿಕೊಳ್ಳಲು ಕೊಳ್ಳಲು ಸೂಚನೆ ನೀಡಿದರು. ತಿಂಡಿ ಖಾಲಿ ಆದ್ದರಿಂದ ಡಿಕೆ ಶಿವಕುಮಾರ್​, ಬೇರೆ ಇಂದಿರಾ ಕ್ಯಾಂಟೀನ್​ಗೆ ತೆರಳಿದ್ದಾರೆ.

    ನಂತರ, ದಾಸರಹಳ್ಳಿ ಇಂದಿರಾ ಕ್ಯಾಂಟಿನ್​ಗೆ ಅವರು ಭೇಟಿ ನೀಡಿದ್ದಾರೆ. ಈ ಸಂದರ್ಭ, ಕ್ಯಾಂಟಿನ್ ಸಿಬ್ಬಂದಿ ಉಪ್ಪಿಟ್ಟು, ಕೇಸರಿಬಾತ್ ನೀಡಿದ್ದು ಅದನ್ನು ಸವಿದಿದ್ದಾರೆ.

    ಇಂದಿರಾ ಕ್ಯಾಂಟೀನಲ್ಲಿ ಎರಡನೇ ಸರ್ಪ್ರೈಸ್!

    ತಿಂಡಿ ಸವಿದ ಡಿಕೆಶಿವಕುಮಾರ್, ಇಂದಿರಾ ಕ್ಯಾಂಟಿನ್ ಹೆಲ್ಪ್​ಲೈನ್ ನಂಬರ್ ಪರಿಶೀಲನೆ ಮಾಡಲು ಮುಂದಾಗಿದ್ದು ಅಲ್ಲೂ ಅವರಿಗೆ ಸರ್ಪ್ರೈಸ್​ ಕಾದಿತ್ತು. ಕ್ಯಾಂಟೀನ್​ ಮೇಲೆ ದೂರುಗಳನ್ನು ನೀಡಲು ಇರುವ ಮೊಬೈಲ್​ ಸಂಖ್ಯೆಗೆ ಕರೆ ಮಾಡಿದಾಗ ಇನ್​ವ್ಯಾಲಿಡ್ ಎಂದು ಬಂದಿದೆ. ಆಗ ವಾಟ್ಸಪ್ ಮಾತ್ರ ಮಾಡಬೇಕು ಎಂದು ಸಿಬ್ಬಂದಿ ಸ್ಪಷ್ಟೀಕರಣ ನೀಡಿದ್ದಾರೆ.

    ನಂತರ ಡಿಕೆಶಿ, ಕ್ಯಾಂಟಿನ್ ಸಿಬ್ಬಂದಿ ಬಳಿ ಮೆನು ಕೇಳಿದ್ದು, ಅದಕ್ಕೆ ಸಿಬ್ಬಂದಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಏನೇನು ಅಡುಗೆ ಮಾಡುತ್ತಾರೆ ಎಂದು ವಿವರಣೆ ನೀಡಿದ್ದಾರೆ. ಇದೇ ವೇಳೆ, ವ್ಯಕ್ತಿಯೊಬ್ಬರು 5 ರೂ. ನೀಡುವಲ್ಲಿ 10 ರೂ. ನೀಡಿದ್ದಾರೆ ಎನ್ನುವ ವಿಚಾರ ಡಿಕೆ ಶಿವಕುಮಾರ್ ಗಮನಕ್ಕೆ ಬಂದಿದ್ದು “ಐದು ರೂಪಾಯಿ ಬೆಲೆಗೆ ಹತ್ತು ರೂಪಾಯಿ ಪಡೆಯುತ್ತಿದ್ದೀಯಾ” ಎಂದು ಕೇಳಿದ್ದಾರೆ. ಆಗ ಸಿಬ್ಬಂದಿ, “ಇಲ್ಲ ಸರ್.. ಅವರು ಎರಡು ಪ್ಲೇಟ್ ತೆಗೆದುಕೊಂಡ್ರು” ಎಂದು ವಿವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts