More

    2 ಸಾವಿರ ವರ್ಷ ಇತಿಹಾಸವುಳ್ಳ ಹುಣಸೆ ಮರ ಧರೆಗೆ; ಅಜ್ಜಂಪೀರ ಖಾದ್ರಿ ಬೇಸರ

    ಹಾವೇರಿ: ಶಿಗ್ಗಾವಿಯಲ್ಲಿ 2 ಸಾವಿರ ವರ್ಷಗಳ ಇತಿಹಾಸವುಳ್ಳ ಹುಣಸೆ ಮರ ಧರೆಗೆ ಉರುಳಿತ್ತು. ಇದೀಗ ಘಟನೆ ನಡೆದ ಸ್ಥಳಕ್ಕೆ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಭೇಟಿ ನೀಡಿ ಬೇಸರ ವ್ಯಕ್ತಪಡಿಸಿದ್ದಾರೆ.

    ನಿನ್ನೆ ಧರೆಗೆ ಉರುಳಿದ 2 ಸಾವಿರ ವರ್ಷಗಳ ಐತಿಹಾಸಿಕ ದೊಡ್ಡ ಹುಣಸೆ ಮರ ಸವಣೂರು ಪಟ್ಟಣದ ಶ್ರೀ ದೊಡ್ಡಹುಣಸೆ ಕಲ್ಲ ಮಠದ ಆವರಣದಲ್ಲಿದೆ. ಶ್ರೀ ಮಠದಲ್ಲಿ ಒಟ್ಟು 3 ದೊಡ್ಡ ಹುಣಸೆ ಮರಗಳಿದ್ದು ಅದರ ಪೈಕಿ ನಿನ್ನೆ ಒಂದು ಮರ ಧರೆಗೆ ಉರುಳಿದ್ದು ಸಾವಿರಾರು ವರ್ಷಗಳ ಹಿಂದೆ ಗೋರಕನಾಥ ಸ್ವಾಮೀಜಿ ಗಿಡಗಳನ್ನು ನೆಟ್ಟು ಹೋಗಿದ್ದರು ಎನ್ನುವ ಪ್ರತೀತಿ ಇದೆ.

    ಶ್ರೀ ಮಠದಲ್ಲಿದ್ದ ಈ ಮರ ಅನೇಕರ ಭಕ್ತಿಯ ಪ್ರತೀಕವಾಗಿತ್ತು. ದೊಡ್ಡ ಹುಣಸೆ ಮರ ನೋಡಲು ಅನೇಕರು ಮಠಕ್ಕೆ ಭೇಟಿ ನೀಡುತ್ತಿದ್ದರು. ದೊಡ್ಡ ಹುಣಸೆ ಮರ ಕೇವಲ ಮರ ಆಗದೆ ಈ ಮಠದ ಅವಿಭಾಜ್ಯ ಅಂಗವಾಗಿತ್ತು.

    ಧರೆಗುರುಳಿದ ಮರವನ್ನು ವೀಕ್ಷಿಸಲು ಮಠಕ್ಕೆ ಭೇಟಿ ನೀಡಿದ್ದ ಅಜ್ಜಂಪೀರ ಖಾದ್ರಿ, “ಅನೇಕರ ಭಕ್ತಿಯ ಪ್ರತೀಕವಾಗಿದ್ದ ಈ ಮರ ನಿನ್ನೆ ಧರೆಗೆ ಉರುಳಿ ನಮಗೆ ಹಾಗೂ ಮಠಕ್ಕೆ ದೊಡ್ಡ ನಷ್ಟವಾಗಿದೆ” ಎಂದು ಶಿಗ್ಗಾವಿ ಮಾಜಿ ಶಾಸಕ ಅಜ್ಜಂಫೀರ ಖಾದ್ರಿ ಬೇಸರ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts