ಇನ್‌ಸ್ಪೆಕ್ಟರ್‌ಗಳಿಗೆ ತಲಾ 1 ಲಕ್ಷ ರೂ. ದಂಡ

police
Published on

ಬೆಂಗಳೂರು: ದೂರು ಪಡೆದು ಎಫ್ಐಆರ್‌ಗೂ ಮೊದಲೇ ಆರೋಪಿತರನ್ನು ಠಾಣೆಗೆ ಕರೆದು ಏರುಧ್ವನಿಯಲ್ಲಿ ಮಾತನಾಡಿ, ಹಲ್ಲೆ ನಡೆಸಿದ ಇನ್‌ಸ್ಪೆಕ್ಟರ್‌ಗೆ 1 ಲಕ್ಷ ರೂ. ದಂಡ ವಿಧಿಸುವಂತೆ ಮಾನವ ಹಕ್ಕುಗಳ ಆಯೋಗ ಶಿಾರಸು ಮಾಡಿದೆ.

ಸಿಸಿಬಿ ಇನ್‌ಸ್ಪೆಕ್ಟರ್ ಜಿ.ಟಿ. ಶ್ರೀನಿವಾಸ್ ಆರೋಪಿತರು. ಇಲಾಖಾ ತನಿಖೆ ನಡೆಸಿ ಇನ್‌ಸ್ಪೆಕ್ಟರ್ ವೇತನದಲ್ಲಿ ಕಡಿತ ಮಾಡಿಕೊಂಡು ಸಂತ್ರಸ್ತರಿಗೆ 1 ಲಕ್ಷ ರೂ. ಪರಿಹಾರ ನೀಡಬೇಕೆಂದು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಆಯೋಗ ಶಿಾರಸು ಮಾಡಿದೆ.

2022ರ ೆ.11ರಂದು ಶಾಂತಿ ಕೋಕೊತ್ ಎಂಬುವರು ಮಾಗಡಿ ರಸ್ತೆ ಠಾಣೆಗೆ ದೂರು ಸಲ್ಲಿಸಿದ್ದರು. ಅಂದು ಇನ್‌ಸ್ಪೆಕ್ಟರ್ ಆಗಿದ್ದ ಜಿ.ಟಿ. ಶ್ರೀನಿವಾಸ್, ಪ್ರಕರಣ ದಾಖಲು ಮಾಡುವ ಮೊದಲೇ ಶಂಕರ ಗಣೇಶ್ ಸೇರಿ ಕೆಲವರನ್ನು ಠಾಣೆಗೆ ಕರೆಸಿ ಏರುಧ್ವನಿಯಲ್ಲಿ ಮಾತನಾಡಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಶಂಕರ್ ಗಣೇಶ್, ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಸಾಕ್ಷಾೃಧಾರಗಳಿಂದ ಆರೋಪ ಸಾಬೀತಾಗಿದ್ದು, ಹಲ್ಲೆ ನಡೆದಿರುವುದು ಕೆ.ಸಿ. ಜನರಲ್ ಆಸ್ಪತ್ರೆಯ ಎಂಎಲ್‌ಸಿ ವರದಿಯಿಂದ ದೃಢವಾಗಿದೆ. ಆದರಿಂದ ಜಿ.ಟಿ. ಶ್ರೀನಿವಾಸ್ ವಿರುದ್ಧ ಇಲಾಖಾ ವಿಚಾರಣೆ ಮಾಡಿ ಸೂಕ್ತ ಶಿಸ್ತುಕ್ರಮ ತೆಗೆದುಕೊಳ್ಳಬೇಕು. ಎಂದು ಆಯೋಗದ ಹಂಗಾಮಿ ಅಧ್ಯಕ್ಷ ಟಿ. ಶಾಮ ಭಟ್ ಆದೇಶಿಸಿದ್ದಾರೆ.

7 ದಿನ ಅಕ್ರಮ ಬಂಧನ

ಪೊಲೀಸ್ ಠಾಣೆಯಲ್ಲಿ 20 ವರ್ಷದ ಯುವಕನ್ನು ಅಕ್ರಮವಾಗಿ ಬಂಧನದಲ್ಲಿ ಇಟ್ಟುಕೊಂಡು ದೈಹಿಕ ಹಲ್ಲೆ ನಡೆಸಿ ಹಿಂಸೆ ಕೊಟ್ಟಿದ್ದ ಇನ್‌ಸ್ಪೆಕ್ಟರ್‌ಗೆ 1 ಲಕ್ಷ ರೂ. ದಂಡ ವಿಧಿಸಿ ಮಾನವ ಹಕ್ಕುಗಳ ಆಯೋಗ ಆದೇಶಿಸಿದೆ. ಬಿಡದಿ ಠಾಣೆ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ಆರೋಪಿತರು. ಈ ಹಿಂದೆ ಬ್ಯಾಟರಾಯನಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಶಂಕರ್ ನಾಯಕ್, 2022ರ ಆಗಸ್ಟ್‌ನಲ್ಲಿ ಸುಮಿತ್ (20) ಎಂಬಾತನನ್ನು ಅಕ್ರಮವಾಗಿ ಠಾಣೆಯಲ್ಲಿ ಬಂಧಿನದಲ್ಲಿ ಇಟ್ಟುಕೊಂಡು ಹಲ್ಲೆ ನಡೆಸಿದ್ದರು.

ಆನಂತರ ಭರತ್‌ಕುಮಾರ್ ಎಂಬಾತನಿಂದ ದೂರು ಪಡೆದು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದರು. ನೊಂದ ಯುವಕನ ತಾಯಿ ಸಂಧ್ಯಾ ರಮೇಶ್, ಮಾನವ ಹಕ್ಕುಗಳ ಆಯೋಗಕ್ಕೆ ಇನ್‌ಸ್ಪೆಕ್ಟರ್ ವಿರುದ್ಧ ದೂರು ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದಾಗ, ಯುವಕನ ಮೇಲೆ ಇನ್‌ಸ್ಪೆಕ್ಟರ್ ಹಲ್ಲೆ ನಡೆಸಿರುವುದು ಸಾಬೀತಾಗಿದೆ. ಆದರಿಂದ ಶಂಕರ್ ನಾಯಕ್ ವೇತನದಲ್ಲಿ 1 ಲಕ್ಷ ರೂ. ಕಡಿತ ಮಾಡಿ ದೂರುದಾರ ಸಂಧ್ಯಾರಮೇಶ್‌ಗೆ ಪರಿಹಾರ ನೀಡಬೇಕು ಎಂದು ಗೃಹ ಇಲಾಖೆಗೆ ಆಯೋಗದ ಹಂಗಾಮಿ ಅಧ್ಯಕ್ಷ ಟಿ. ಶಾಮ ಭಟ್ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net