ಮದ್ಯದ ಅಮಲಿನಲ್ಲಿ ಕಾರನ್ನು ಮಾರುಕಟ್ಟೆಗೆ ನುಗ್ಗಿಸಿದ ನಿರ್ದೇಶಕ; ಓರ್ವ ಸಾವು, 8 ಜನರಿಗೆ ಗಾಯ..car Crashes

Drunk Filmmaker Crashes Through Kolkata Market
Published on

ಕೋಲ್ಕತ್ತಾ:  ( car Crashes  ) ಜನದಟ್ಟಣೆಯ ಠಾಕೂರ್ ಪುಕುರ್ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ ನಿರ್ದೇಶಕರೊಬ್ಬರ ಕಾರೊಂದು ಜನಸಂದಣಿಯ ಮೇಲೆ ನುಗ್ಗಿತು. ಈ ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದು, ಸುಮಾರು ಎಂಟು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮದ್ಯದ ಅಮಲಿನಲ್ಲಿದ್ದ ನಿರ್ದೇಶಕ ಸಿದ್ಧಾಂತ್ ದಾಸ್  ಮತ್ತು ಬಂಗಾಳಿ ಚಾನೆಲ್ ಒಂದರ ಕಾರ್ಯನಿರ್ವಾಹಕ ನಿರ್ಮಾಪಕಿ ಶ್ರಿಯಾ ಬಸು ಶನಿವಾರ ರಾತ್ರಿ ಕೋಲ್ಕತ್ತಾದ ಸೌತ್ ಸಿಟಿ ಮಾಲ್‌ನಲ್ಲಿ ಮಧ್ಯರಾತ್ರಿಯವರೆಗೆ ಪಾರ್ಟಿ ಮಾಡಿದರು. ಈ ಪಾರ್ಟಿಯಲ್ಲಿ ಅನೇಕ ಜನರು ಕುಡಿದರು ಮತ್ತು ಎಲ್ಲರೂ ರಾತ್ರಿ 2 ಗಂಟೆ ಸುಮಾರಿಗೆ ಮನೆಗೆ ಹೋರಟರು.

ಸಿದ್ಧಾಂತ್ ದಾಸ್ ಮತ್ತು ಶ್ರಿಯಾ ಬಸು ಕಾರಿನಲ್ಲಿ ನಗರವನ್ನು ಸುತ್ತಲು ಪ್ರಾರಂಭಿಸಿದರು. ಅವರಿಬ್ಬರೂ ಕುಡಿದ ಮತ್ತಿನಲ್ಲಿ ನಗರದಲ್ಲಿ ಓಡಾಡುತ್ತಿದ್ದರು. ಭಾನುವಾರ ಬೆಳಿಗ್ಗೆ, ಅವರ ಕಾರು ಇದ್ದಕ್ಕಿದ್ದಂತೆ ಠಾಕೂರ್ಪುಕುರ್ ಬಜಾರ್‌ಗೆ ಪ್ರವೇಶಿಸಿ ಹಲವಾರು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಎಂಟು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಸ್ತೂರಿ ನರ್ಸಿಂಗ್ ಹೋಂ ಮತ್ತು ಸಿಎಂಆರ್ಐ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಕಾರನ್ನು ಮತ್ತು ಚಾಲಕನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಕಾರಿನಲ್ಲಿ ನಾಲ್ಕು ಬಾಟಲಿ ಮದ್ಯ ಪತ್ತೆಯಾಗಿದ್ದು, ಅಪಘಾತದ ಸಮಯದಲ್ಲಿ ಸಿದ್ಧಾಂತ್ ಮದ್ಯದ ಅಮಲಿನಲ್ಲಿದ್ದರು ಎಂದು ಸ್ಥಳಿಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net