ಸಂಜನಾ ಗಲ್ರಾನಿಗೆ ವಂಚನೆ: ಅಪರಾಧಿ​ಗೆ  6 ತಿಂಗಳು ಜೈಲು, 61 ಲಕ್ಷ ರೂ. ದಂಡ  ವಿಧಿಸಿದ ಕೋರ್ಟ್​​ sanjana galrani

Sanjana Galrani
Published on

sanjana galrani: ನಟಿ ಸಂಜನಾ ಗಲ್ರಾನಿಗೆ ಹಣ ವಂಚಿಸಿದ ಪ್ರಕರಣಕ್ಕ ಸಂಬಂಧಿಸಿದಂತೆ, 33ನೇ ಎಸಿಜೆಎಂ ನ್ಯಾಯಾಲಯ ಅಪರಾಧಿ ರಾಹುಲ್ ತೋನ್ಸೆಗೆ 61.50 ಲಕ್ಷ ರೂ. ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

ರಾಹುಲ್ ದೊಡ್ಡ ಉದ್ಯಮಿ. ರಾಹುಲ್ ಗೋವಾ ಹಾಗೂ ಕೊಲಂಬೋದಲ್ಲಿ ಕ್ಯಾಸಿನೊ ನಡೆಸುತ್ತಿದ್ದ. 2018-19ರಲ್ಲಿ  ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡೋದಾಗಿ ರಾಹುಲ್ ಆಮಿಷವೊಡ್ಡಿದ್ದ. ಆ ಬಳಿಕ ಗಲ್ರಾನಿಯಿಂದ ರಾಹುಲ್ 45 ಲಕ್ಷ ಹಣ ಪಡೆದು ವಂಚನೆ ಮಾಡಿದ್ದ.  ಇಂದಿರಾ ನಗರ ಠಾಣೆಯಲ್ಲಿ ರಾಹುಲ್ ಹಾಗೂ ಆತನ ಕುಟುಂಬದ ವಿರುದ್ಧ ಸಂಜನಾ ದೂರು ದಾಖಲು ಮಾಡಿದ್ದರು.

ಈ ಪ್ರಕರಣದಲ್ಲಿ ರಾಹುಲ್ ತಂದೆ ರಾಮಕೃಷ್ಣ, ತಾಯಿ ರಾಜೇಶ್ವರಿ ಕೂಡ ಶಾಮೀಲಾಗಿದ್ದರು ಎನ್ನಲಾಗಿತ್ತು. ಅವರ ವಿರುದ್ಧವೂ ಎಫ್​ಐಆರ್ ದಾಖಲಾಗಿತ್ತು.  ಇದಲ್ಲದೆ, ಉದ್ಯಮಿಗೆ 25 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪವೂ ಇವನ ಮೇಲೆ ಇದೆ.

ಈ ದೂರನ್ನು ಆಧರಿಸಿ ಕೇಸ್ ದಾಖಲಿಸಿಕೊಳ್ಳಲಾಗಿತ್ತು. ಕೋರ್ಟ್​ ವಿಚಾರಣೆಯಲ್ಲಿ ರಾಹುಲ್ ತೋನ್ಸೆ ಅಪರಾಧಿ ಎಂದು ಸಾಬೀತಾಗಿದೆ. ಹೀಗಾಗಿ, ಶಿಕ್ಷೆ ವಿಧಿಸಲಾಗಿದೆ.

ದಂಡದ ಮೊತ್ತದಲ್ಲಿ 10 ಸಾವಿರ ಕೋರ್ಟ್ ಶುಲ್ಕ ಕಡಿತ ಮಾಡಿ ಉಳಿದ ಹಣ ಸಂಜನಾಗೆ ನೀಡಬೇಕು. ನಿಗದಿತ ಸಮಯದಲ್ಲಿ ದಂಡ ಪಾವತಿಸಿದರೆ ಆರು ತಿಂಗಳ ಶಿಕ್ಷೆ ಮಾಫಿ ಮಾಡಲಾಗುವುದು. ಒಂದು ವೇಳೆ ಪರಿಹಾರ ಮೊತ್ತ ನೀಡದೆ ಜೈಲು ಶಿಕ್ಷೆ ಅನುಭವಿಸಿದರೂ ದೂರುದಾರೆಗೆ ಪರಿಹಾರ ಹಿಂದಿರುಗಿಸುವ ಹೊಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net