ಪಿನ್​ಪಾಯಿಂಟ್ ಸ್ಟ್ರೈಕ್ ಫೇಕ್​ - ಡಿಜಿಎಂಒ ಸ್ಪಷ್ಟೀಕರಣ

DGMO
Published on

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸುತ್ತಿದೆ ಎನ್ನಲಾದ ಕಾರ್ಯಾಚರಣೆಯ ಸುದ್ದಿಗಳು ಫೇಕ್ ಎಂದು ಭಾರತೀಯ ಸೇನೆಯ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ಸ್ (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ಪರಮ್​ಜಿತ್ ಸಿಂಗ್​ ಗುರುವಾರ ಸ್ಪಷ್ಟಪಡಿಸಿದ್ದಾರೆ.

ಪಿಒಕೆ ವ್ಯಾಪ್ತಿಯಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಸೇನೆ ಯಾವುದೇ ಕಾರ್ಯಾಚರಣೆ ನಡೆಸಿಲ್ಲ. ಇದಕ್ಕೆ ಸಂಬಂಧಿಸಿದ ವರದಿಗಳೆಲ್ಲವೂ ಸುಳ್ಳು. ಅದನ್ನು ಯಾರೂ ನಂಬಬಾರದು ಎಂದು ಅವರು ಕೇಳಿಕೊಂಡಿದ್ದಾರೆ.

ಇದಕ್ಕೂ ಮೊದಲು, ಸೇನಾ/ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಭಾರತೀಯ ಸೇನೆ ಪಿಒಕೆ ಭಾಗದಲ್ಲಿರುವ ಟೆರರ್​ಲಾಂಚ್ ಪ್ಯಾಡ್ ಮೇಲೆ ಕೇಂದ್ರೀಕೃತವಾಗಿ ದಾಳಿ ನಡೆಸುತ್ತಿದೆ ಎಂಬ ವರದಿ ಸದ್ದು ಮಾಡಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net