ನವದೆಹಲಿ: ನಾವು ನೋಡಿರುವಂತೆ ಸಾಮಾನ್ಯವಾಗಿ ಯಾವುದಾದರು ಒಂದು ವಿಚಾರ ತೀವ್ರ ಸ್ವರೂಪ ಪಡೆದುಕೊಂಡಾಗ ಅದರ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಪ್ಯಾನಲ್ ಡಿಬೇಟ್ (Panel Debate) ಮಾಡುವುದನ್ನು ನೋಡಿದ್ದೇವೆ. ಇಂತಹ ಕಾರ್ಯಕ್ರಮಗಳಲ್ಲಿ ಕೆಲವೊಮ್ಮೆ ಮಾತಿನ ಚಕಮಕಿಯಾಗಿ ಲೈವ್ನಲ್ಲೇ ಕೈ ಕೈ ಮಿಲಾಯಿಸಿರುವ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ. ಇದೀಗ ಅದೇ ರೀತಿಯ ಘಟನೆಯೊಂದು ಖ್ಯಾತ ಸುದ್ದಿ ವಾಹಿನಿಯ ಪ್ಯಾನೆಲ್ ಡಿಬೇಟ್ನಲ್ಲಿ ನಡೆದಿದ್ದು, ಈ ವಿಡಿಯೋ ಸಖತ್ ವೈರಲ್ ಆಗಿದೆ.
ಖಾಸಗಿ ಸುದ್ದಿ ವಾಹಿನಿಯ ತಾಲ್ ತೊಕ್ ಕೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಪಾಕಿಸ್ತಾನದ ಭೇಟಿ ಕುರಿತು ಪ್ಯಾನೆಲ್ ಡಿಬೇಟ್ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ವಿಡಿಯೋ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
A Maulana was abusing Shri Krishna during a Debate Show.
— The Analyzer (News Updates🗞️) (@Indian_Analyzer) October 4, 2024
~ Acharya Vikramaditya Ji SLAPPED him instantly & reminded that One needs to be in his limits🔥
CHAD🥶pic.twitter.com/HgzmmzjC4c
ಇದನ್ನೂ ಓದಿ: Commonwealth Games| ಪವರ್‌ಲಿಫ್ಟಿಂಗ್‌ನಲ್ಲಿ ನೂತನ ದಾಖಲೆ ಬರೆದ ಭಾರತದ ದಿಷಾ ಮೋಹನ್
ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಪಾಕಿಸ್ತಾನದ ಭೇಟಿ ಕುರಿತು ಒಬ್ಬ ಹಿಂದೂ ಮುಖಂಡ ಮತ್ತು ಒಬ್ಬ ಮುಸ್ಲಿಂ ಮುಖಂಡ ಪ್ಯಾನಲ್ ಡಿಬೇಟ್ನಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಉಭಯ ಮುಖಂಡರ ನಡುವೆ ಮಾತಿನ ಚಕಮಕಿಯಾಗಿದ್ದು, ಚರ್ಚೆಯ ಮಧ್ಯೆದಲ್ಲೇ ಆಚಾರ್ಯ ವಿಕ್ರಮಾದಿತ್ಯ ಅವರು ಕೋಪ ತಡೆಯಲಾರದೆ ಮುಸ್ಲಿಂ ಮುಖಂಡ ಹಾಜಿಕ್ ಖಾನ್ ಅವರ ಕತ್ತಿನ ಪಟ್ಟಿಗೆ ಕೈ ಹಾಕಿ ಕೆನ್ನೆಗೆ ಬಾರಿಸಿದ್ದಾರೆ. ಈ ಘಟನೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. The Analyzer (News Updates) ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.