Newlywed Woman : ನವವಿವಾಹಿತೆಯೊಬ್ಬಳು ರೈಲಿನಲ್ಲಿ ನೆಲದ ಮೇಲೆ ಕುಳಿತು ಪ್ರಯಾಣ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

ಮದುವೆಯ ಉಡುಗೆಯಲ್ಲಿರುವ ನವವಿವಾಹಿತೆ ತನ್ನ ಸೆರಗಿನಿಂದ ಮುಖ ಮರೆಮಾಚಿಕೊಂಡು ನಿರ್ಗಮನ ದ್ವಾರದ ಬಳಿ ನೆಲದ ಮೇಲೆ ಕುಳಿತಿದ್ದಾಳೆ. ಜಿತೇಶ್ ಎಂಬ ಯುವಕ ತನ್ನ ಎಕ್ಸ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡ ಬಳಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿ, ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.
ಚಿತ್ರದ ಜತೆಗೆ ಆ ಯುವತಿಯ ಪಾಲಕರ ವಿರುದ್ಧವೂ ಜಿತೇಶ್ ಆಕ್ರೋಶ ಹೊರಹಾಕಿದ್ದಾರೆ. ಸಭ್ಯ ಕೌಟುಂಬಿಕ ಜೀವನ ನಡೆಸಲು ಅಸಮರ್ಥನಾದ ವ್ಯಕ್ತಿಯೊಂದಿಗೆ ಪಾಲಕರಾದವರು ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕಳುಹಿಸಬಾರದು. ಹಾಗೇ ಕಳುಹಿಸಿದ್ದಲ್ಲಿ ದಾಂಪತ್ಯದಲ್ಲಿ ಆರ್ಥಿಕ ಸಮಸ್ಯೆಗಳು ತೀವ್ರ ಸವಾಲುಗಳಾಗುತ್ತವೆ ಎಂಬ ಸಂದೇಶವನ್ನು ಜಿತೇಶ್ ಹಂಚಿಕೊಂಡಿದ್ದಾರೆ.
ವಧುವಿನ ಹೆಸರು ಅಥವಾ ಇತರ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿಲ್ಲ. ಯುವತಿ ಮತ್ತು ಆಕೆಯ ಕುಟುಂಬದ ಖಾಸಗಿತನದ ಗೌರವದಿಂದ ಗುರುತನ್ನು ಗೌಪ್ಯವಾಗಿ ಇಡಲಾಗಿದೆ. ಫೋಟೋ ವೈರಲ್ ಆಗಿದ್ದೇ ತಡ ಕೆಲವರು ಯುವತಿಯ ಪಾಲಕರು ಮತ್ತು ಮದುವೆಯಾದವನನ್ನು ಟೀಕಿಸತೊಡಗಿದ್ದಾರೆ.
ಕೆಲವರು ಚಿತ್ರದ ಸತ್ಯಾಸತ್ಯತೆಯನ್ನು ಪ್ರಶ್ನಿಸತೊಡಗಿದ್ದು, ಈ ಚಿತ್ರವು ನಕಲಿಯಾಗಿದ್ದು, ಇಂತಹ ತಪ್ಪು ಕಲ್ಪನೆಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಯುವತಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದಳು ಎಂದು ಮತ್ತೊಬ್ಬರು ಹೇಳಿದ್ದಾರೆ. ಸದ್ಯಕ್ಕೆ ಈ ಘಟನೆ ಕಟ್ಟುಕಥೆ ಎಂಬುದು ಹಲವರ ವಾದವಾಗಿದೆ. (ಏಜೆನ್ಸೀಸ್)
ಮನೆಗೆಲಸದಾಕೆಗೆ ಸಿಕ್ತು ಸರ್ಕಾರಿ ಕೆಲಸ! ಪುಷ್ಪ 2 ನಿರ್ದೇಶಕ ಸುಕುಮಾರ್ ಮನೆಯಲ್ಲಿ ಸಂಭ್ರಮ | Director Sukumar