ಮನೆಗೆಲಸದಾಕೆಗೆ ಸಿಕ್ತು ಸರ್ಕಾರಿ ಕೆಲಸ! ಪುಷ್ಪ 2 ನಿರ್ದೇಶಕ ಸುಕುಮಾರ್​ ಮನೆಯಲ್ಲಿ ಸಂಭ್ರಮ | Director Sukumar

Director Sukumar
Published on

Director Sukumar : ಬಹುನಿರೀಕ್ಷಿತ 'ಪುಷ್ಪ 2' ಸಿನಿಮಾದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಡಿ.5ರಂದು ದೇಶಾದ್ಯಂತ ತೆರೆಯ ಮೇಲೆ ಅಬ್ಬರಿಸಲು ಪುಷ್ಪ-2 ಸಜ್ಜಾಗಿದೆ. ರಿಲೀಸ್‌ಗೆ ಇನ್ನು 10 ದಿನಗಳು ಮಾತ್ರ ಬಾಕಿ ಇದ್ದು, ಚಿತ್ರತಂಡ ಪ್ರಚಾರದ ಭರಾಟೆಯಲ್ಲಿ ಮುಳುಗಿದೆ. ನಿರ್ದೇಶಕ ಸುಕುಮಾರ್​ ಅವರಿಗೆ ಸಿನಿಮಾ ಬಿಡುಗಡೆಯ ಟೆನ್ಷನ್ ಒಂದೆಡೆಯಾದರೆ, ಇದೇ ಸಂದರ್ಭದಲ್ಲಿ ತಮ್ಮ ಮನೆಗೆ ಸಂಬಂಧಿಸಿದ ಖುಷಿಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಸುಕುಮಾರ್​ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹುಡುಗಿಗೆ ಸರ್ಕಾರಿ ಕೆಲಸ ಸಿಕ್ಕಿದೆ ಎಂದು ಸ್ವತಃ ಸುಕುಮಾರ್ ಅವರ ಪತ್ನಿಯೇ ಬಹಿರಂಗಪಡಿಸಿದ್ದಾರೆ.

ಸಿನಿಮಾ ಬಿಡುಗಡೆ ಒತ್ತಡದ ಸಮಯದಲ್ಲಿಯೂ ನಾವೆಲ್ಲ ತುಂಬಾ ಖುಷಿಯಾದೆವು. ಏಕೆಂದರೆ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಲೇ ವಿದ್ಯಾಭ್ಯಾಸ ಮುಗಿಸಿದ ದಿವ್ಯಾಗೆ ಈಗ ಸರ್ಕಾರಿ ನೌಕರಿ ಸಿಕ್ಕಿದೆ. ಈ ಸಂದರ್ಭದಲ್ಲಿ ನಾವು ಅವಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ. ದಿವ್ಯಾ, ನಿನ್ನ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ ಎಂದು ಸುಕುಮಾರ್ ಪತ್ನಿ ತಬಿತಾ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಸುಕುಮಾರ್ ಪತ್ನಿ ಮಾಡಿರುವ ಪೋಸ್ಟ್ ಇದೀಗ ನೆಟ್ಟಿಗರ ಮನ ಗೆಲ್ಲುತ್ತಿದೆ. ಇದಕ್ಕೆ ಸಂಬಂಧಿಸಿದ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಸುಕುಮಾರ್ 'ಪುಷ್ಪ 2' ಮಾಡುತ್ತಿದ್ದಾರೆ. ಇದಾದ ನಂತರ ಮೂರನೇ ಭಾಗ ಕೂಡ ತಯಾರಾಗಲಿದೆ ಎಂದು ವರದಿಯಾಗಿದೆ. ರಾಮ್ ಚರಣ್ ಜೊತೆಯಲ್ಲಿ ಮತ್ತೊಂದು ಸಿನಿಮಾ ಮಾಡಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net