

ನವದೆಹಲಿ: ಭಾರತ ಸಂಸ್ಕೃತದ ತವರೂರು ಎಂದರೆ ತಪ್ಪಾಗಲಾರದು. ಸಂಪ್ರದಾಯಗಳ ಪಾಲನೆಯಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಿರುವ ಭಾರತ ದೇಶದಲ್ಲಿ ಮದುವೆಗೆ ಸಂಬಂಧಿಸಿದ ಶಾಸ್ತ್ರಗಳು ಒಂದು ರಾಜ್ಯಕ್ಕಿಂತ ಮತ್ತೊಂದರಲ್ಲಿ ಭಿನ್ನವಾಗಿದ್ದು, ಇದೀಗ ಈ ಊರಿನಲ್ಲಿ ಮಹಿಳೆಯರು ಮದುವೆಯಾದ ಹೊಸತರಲ್ಲಿ ಪಂದು ವಾರಗಳ ಕಾಲ ಬಟ್ಟೆ ಧರಿಸದಿರುವ ಪದ್ಧತಿ ಇದೆ. ವಿಚಿತ್ರ ಎನ್ನಿಸಿದರೂ ಇದು ನಿಜವಾಗಿದ್ದು, ಹಲವರು ಈ ಆಚರಣೆಯನ್ನು ಕಂಡು ಹುಬ್ಬೇರಿಸಿದ್ದಾರೆ.
ಹಿಮಾಚಲ ಪ್ರದೇಶದ ಮಣಿಕರ್ಣ ಕಣಿವೆಯ ಪಿನಿ ಗ್ರಾಮದಲ್ಲಿ ಈ ಆಚರಣೆ ಚಾಲ್ತಿಯಲ್ಲಿದ್ದು, ವಿಭಿನ್ನವಾದ ಸಂಪ್ರದಾಯದ ಬಗ್ಗೆ ಕೇಳಿ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಮಹಿಳೆಯರನ್ನು ಹೊರತುಪಡಿಸಿ ಪುರಷರಿಗೂ ವಿಶೇಷ ನಿಯಮಗಳಿದ್ದು, ಅದನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.
ಹಿಮಾಚಲ ಪ್ರದೇಶದ ಮಣಿಕರ್ಣ ಕಣಿವೆಯ ಪಿನಿ ಗ್ರಾಮದ ಜನರು ಮದುವೆಗೆ ಸಂಬಂಧಿಸಿದ ವಿಶ್ಟಿಷ್ಟ ಸಂಪ್ರದಾಯವನ್ನು ಅನುಸರಿಸುತ್ತಾರೆ. ಇಲ್ಲಿ ನವ ವಧು ಮದುವೆಯಾದ ಮೊದಲ ವಾರದಲ್ಲಿ ಯಾವುದೇ ಬಟ್ಟೆಯನ್ನು ಧರಿಸುವಂತಿಲ್ಲ. ವಧು ಈ ಅವಧಿಯಲ್ಲಿ ಉಣ್ಣೆಯಿಂದ ಮಾಡಿದ ಬೆಲ್ಟ್ಗಳನ್ನು ಮಾತ್ರ ಧರಿಸಬಹುದಾಗಿದೆ. ಇದಲ್ಲದೇ ವರ ಕೂಡ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಮಹಿಳೆಯರು ಒಂದು ವಾರದವರೆಗೆ ಯಾವುದೇ ಬಟ್ಟೆಯನ್ನು ಧರಿಸದೇ ಇರುವುದು ಒಂದೆಡೆಯಾದರೆ ಈ ಅವಧಿಯಲ್ಲಿ ಪುರುಷರು ಮದ್ಯಪಾನ ಮಾಡುವಂತಿಲ್ಲ. ವಧು-ವರರು ಈ ವಿಧಿಗಳನ್ನು ಅನುಸರಿಸಿದರೆ ಅವರಿಗೆ ದಾಂಪತ್ಯದಲ್ಲಿ ಅದೃಷ್ಟ ಬರುತ್ತದೆ ಎಂದು ಇಲ್ಲಿನ ಹಿರಿಯರು ನಂಬಿದ್ದಾರೆ. ಈ ವಿಚಾರ ಕೇಳಿ ಹಲವರು ಹುಬ್ಬೇರಿಸಿದ್ದು, ಈ ರೀತಿ ಆಚರಣೆ ಚಾಲ್ತಿಯಲ್ಲಿದ್ಯಾ ಎಂದು ಹುಬ್ಬೇರಿಸಿದ್ದಾರೆ.