ನವದೆಹಲಿ: ಬಾಂಗ್ಲಾ ವಿರುದ್ಧದ ಸರಣಿ ನಂತರ ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸ ನಡೆಸಲಿದ್ದು, ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಸಂಬಂಧಿಸಿದಂತೆ ಈಗಾಗಲೇ ಮಾಜಿ ಹಾಗೂ ಹಾಲಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ಕೆಲವೊಮ್ಮ ಕೆಣಕುವ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕುರಿತು ಆಘಾತಕಾರಿ ವಿಚಾರ ಒಂದನ್ನು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹಂಚಿಕೊಂಡಿದ್ದು, ಕ್ರೀಡಾ ಲೋಕದಲ್ಲಿ ಚರ್ಚಾ ವಿಷಯವಾಗಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಸಂಬಂಧಿಸಿದಂತೆ ಮಾತನಾಡಿರುವ ಆಕಾಶ್ ಚೋಪ್ರಾ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಎದುರಾಳಿ ತಂಡದ ಆಟಗಾರರನ್ನು ಅಲ್ಲಿನ ಸ್ಥಳೀಯ ಮಾಧ್ಯಮಗಳು ಹೇಗೆ ಗುರಿಯಾಗಿಸುತ್ತವೆ ಮತ್ತು ಯಾವ ರೀತಿ ಸುದ್ದಿಗಳನ್ನು ಹಬ್ಬಿಸುತ್ತಾರೆ ಎಂಬುದಕ್ಕೆ ಇದು ಜೀವಂತ ನಿದರ್ಶನವಾಗಿದೆ.
ಇದನ್ನೂ ಓದಿ: ದರ್ಶನ್ ಪ್ರಕರಣ ವೈಯಕ್ತಿಕ, ಚಿತ್ರರಂಗಕ್ಕೆ ಸಂಬಂಧವಿಲ್ಲ: ಗುರುಕಿರಣ್
2018-19ರಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ಅಲ್ಲಿನ ಮಾಧ್ಯಮಗಳು ಸರಣಿ ವಿಡಿಯೋಗಳನ್ನು ಬಿಡುಗಡೆ ಮಾಡುತ್ತಿದ್ದರು. ಇಶಾಂತ್ ಶರ್ಮ ಹಾಗೂ ರವೀಂದ್ರ ಜಡೇಜಾ ಪಂದ್ಯದ ವೇಳೆ ಮಾತನಾಡುವಾಗ ಅಲ್ಲಿನ ಪ್ರಸಾರಕರು ಸ್ಟಂಪ್ ಮೈಕ್ ಆನ್ ಮಾಡಿಸಿ ಅವರಿಬ್ಬರ ನಡುವಿನ ಸಂಭಾಷಣೆಯ ಆಯ್ದ ಭಾಗವನ್ನು ಮಾತ್ರ ಕಟ್ ಮಾಡಿಕೊಂಡು ರಿಲೀಸ್ ಮಾಡಿದರು.
ಆ ನಂತರ ಮೈದಾನದ ಹೊರಗೆ ಮಾತನಾಡುವಾಗ ನಾವು ನಿಜವಾಗಿ ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೇವೆ ಏಕೆಂದರೆ ಅದು ಏನೂ ಅಲ್ಲ ಎಂದು ಹೇಳಿದೆ. ಅದಕ್ಕೆ ಪ್ರತಿಕ್ರಿಯಿಸಿದ ರಿಕಿ ಪಾಂಟಿಂಗ್, ಸಣ್ಣ ರಂದ್ರದಿಂದ ದೊಡ್ಡ ಪವರ್ತವನ್ನೇ ನಿರ್ಮಿಸಲು ಹೊರಟಿದ್ಧಾರೆ ಎಂದು ಹೇಳಿದರು. ಈ ಕಾರಣಕ್ಕಾಗಿ ನಮ್ಮ ಆಟಗಾರರು ಎಚ್ಚರದಿಂದಿರಬೇಕು ಎಂದು ಆಕಾಶ್ ಚೋಪ್ರಾ ಸಲಹೆ ನೀಡಿದ್ದಾರೆ.