2025ನೇ ವರ್ಷವನ್ನು ಸ್ವಾಗತಿಸಿದ ನ್ಯೂಜಿಲೆಂಡ್! ಆಕ್ಲೆಂಡ್​ ಸ್ಕೈಟವರ್​ ಬಳಿ ಭರ್ಜರಿ ಸಂಭ್ರಮ | New Year 2025

New Year 2025
Published on

New Year 2025 : ಎಂದಿನಂತೆಯೇ ನ್ಯೂಜಿಲೆಂಡ್ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ ಮೊದಲ ದೇಶವಾಗಿದೆ. 2024ಕ್ಕೆ ವಿದಾಯ ಹೇಳಿ 2025ಕ್ಕೆ ಹಲೋ ಎನ್ನುವ ಮೂಲಕ ನ್ಯೂಜಿಲೆಂಡ್​ ಜನರು ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.

ವಿಶ್ವದ ಮೊದಲ ಹೊಸ ವರ್ಷದ ಸಂಭ್ರಮಾಚರಣೆ ನ್ಯೂಜಿಲೆಂಡ್‌ನಲ್ಲಿ ನಡೆಯಲಿದೆ ಎಂಬುದು ಎಲ್ಲರಿಗೂ ತಿಳಿದಿದೆ. ನ್ಯೂಜಿಲೆಂಡ್ ನಂತರ, ಆಸ್ಟ್ರೇಲಿಯಾದ ಜನರು 2025 ವರ್ಷವನ್ನು ಸ್ವಾಗತಿಸಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಇನ್ನಿತರ ದೇಶಗಳು ಕೂಡ ಹೊಸ ವರ್ಷವನ್ನು ಸ್ವಾಗತಿಸಲಿವೆ. ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಅಲ್ಲಿನ ಕಾಲಮಾನದ ಪ್ರಕಾರ ಈಗಾಗಲೇ ಹೊಸವರ್ಷಕ್ಕೆ ಕಾಲಿಟ್ಟಿವೆ. ಹೀಗಾಗಿ ಅಲ್ಲಿನ ಜನರು ಪಟಾಕಿ ಸಿಡಿಸಿ ಅದ್ದೂರಿಯಾಗಿ 2025ನೇ ವರ್ಷವನ್ನು ಬರಮಾಡಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ನ್ಯೂಜಿಲೆಂಡ್​ನ ಆಕ್ಲೆಂಡ್​ನಲ್ಲಂತೂ ಭರ್ಜರಿ ಪಟಾಕಿಗಳನ್ನು ಸಿಡಿಸಲಾಗಿದೆ. ಅಲ್ಲಿನ ಸ್ಕೈ ಟವರ್​ ಬಳಿ ಸಾವಿರಾರು ಜನ ಸೇರಿ ಹೊಸವರ್ಷವನ್ನು ಸ್ವಾಗತಿಸಿದ್ದಾರೆ. ಈ ಟವರ್​ ಮೇಲೆ ಲೇಸರ್​ ಮತ್ತು ಅನಿಮೇಶನ್​ ಮೂಲಕ ಹೊಸವರ್ಷದ ಚಿತ್ತಾರ ಮೂಡಿಸಲಾಯಿತು. ನ್ಯೂಜಿಲೆಂಡ್​ನ​ ಉಳಿದ ನಗರಗಳಲ್ಲೂ ಹೊಸವರ್ಷ ಸಂಭ್ರಮಾಚರಣೆ ಜೋರಾಗಿ ನಡೆದಿದೆ. ಆಸ್ಟ್ರೇಲಿಯಾದಲ್ಲೂ ಕೂಡ ಹೊಸವರ್ಷಾಚರಣೆ ನಡೆದಿದ್ದು ಜನರು ಪಟಾಕಿ ಸಿಡಿಸಿ, ಪರಸ್ಪರ ಹ್ಯಾಪಿ ನ್ಯೂ ಇಯರ್​ ಎಂದು ಶುಭ ಕೋರುವ ಮೂಲಕ ಸಂಭ್ರಮಿಸುತ್ತಿದ್ದಾರೆ.

ಇನ್ನು ಎಲ್ಲೆಡೆ ಯುವಕರು ಅತ್ಯಂತ ಉತ್ಸಾಹದಿಂದ ಹೊಸ ವರ್ಷದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಭಾರತದಲ್ಲೂ ಹೊಸ ವರ್ಷಾಚರಣೆಗೆ ಅದ್ಧೂರಿ ವ್ಯವಸ್ಥೆ ಮಾಡಲಾಗಿದ್ದು, ಇಂದು ಮಧ್ಯರಾತ್ರಿಗೆ ಜನರು 2025 ಅನ್ನು ಬರಮಾಡಿಕೊಂಡು ಸಂಭ್ರಮಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net