ನವಮಾಧ್ಯಮಗಳ ಕುರಿತು ಜಾಗೃತಿ : ಪಾಣಕ್ಕಾಡ್ ಅಲಿ ಶಿಹಾಬ್ ತಂಙಳ್ ಅನಿಸಿಕೆ

23-karapatra

ವಿಜಯವಾಣಿ ಸುದ್ದಿಜಾಲ ಕುಂಬಳೆ

ನವಮಾಧ್ಯಮಗಳ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಲು ಸಾರ್ವಜನಿಕ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳು ಮುಂದಾಗಬೇಕಿದೆ ಎಂದು ಪಾಣಕ್ಕಾಡ್ ಸೈಯದ್ ಮುಯೀನ್ ಅಲಿ ಶಿಹಾಬ್ ತಂಙಳ್ ಕರೆನೀಡಿದರು.

ದುಬೈ ಮಲಬಾರ್ ಕಲಾ ಮತ್ತು ಸಂಸ್ಕೃತಿ ಕೇಂದ್ರ ಮತ್ತು ಕುಂಬಳೆ ಪ್ರೆಸ್ ಫೋರಂ ಸಹಯೋಗದಲ್ಲಿ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗಾಗಿ ಭಾನುವಾರ ಕುಂಬಳೆಯಲ್ಲಿ ಆಯೋಜಿಸಲಾದ ನವಮಾಧ್ಯಮ ಕಾರ್ಯಾಗಾರದ ಮಾಹಿತಿ ಕರಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಲೇಖಕ ಕೆ.ಎಂ.ಅಬ್ಬಾಸ್ ಕರಪತ್ರ ಸ್ವೀಕರಿಸಿದರು.

ಎ.ಕೆ.ಆರೀಫ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಕೆಎಂ ಅಶ್ರಫ್ ಮುಖ್ಯ ಅತಿಥಿಗಳಾಗಿದ್ದರು. ಕೆಜೆಯು ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಉಳುವಾರ್, ಕಾರ್ಯದರ್ಶಿ ಧನರಾಜ್, ಅಜೀಜ್ ಮರಿಕೆ, ಗಫೂರ್ ಎರಿಯಾಲ್, ಕುಂಬಳೆ ಪ್ರೆಸ್ ಫೋರಂ ಅಧ್ಯಕ್ಷ ಸುರೇಂದ್ರನ್ ಚಿಮೇನಿ, ಕಾರ್ಯದರ್ಶಿ ಐ.ಮೊಹಮ್ಮದ್ ರಫೀಕ್, ಕೋಶಾಧಿಕಾರಿ ಅಬ್ದುಲ್ ಲತೀಫ್, ಕೆ.ಎಂ.ಎ ಸತ್ತಾರ್, ಅಬ್ದುಲ್ಲ ಕುಂಬಳೆ, ತಾಹಿರ್ ಉಪ್ಪಳ, ಜೈನುದ್ದೀನ್ ಅಡ್ಕ, ಕುಂಞ್ಞೆ ಕರಕಂಡ, ಅಶ್ರಫ್ ಮೀಪುಗುರಿ, ಬಿ.ಎನ್.ಮುಹಮ್ಮದ್ ಅಲಿ, ಯೂಸುಫ್ ಉಳುವಾರ್, ಟಿ.ಎಂ.ಶುಹೈಬ್ ಇಬ್ರಾಹಿಂ ಬತ್ತೇರಿ, ಕೆ.ವಿ.ಯೂಸುಫ್, ಬಿ.ಎ.ರಹಿಮಾನ್, ಕೆ.ಎಂ ಅಝೀಝ್ ಮತ್ತು ಮುಹಮ್ಮದ್ ಕುಂಞಿ ಕುಂಬೋಳ್ ಮಾತನಾಡಿದರು.

ದುಬೈ ಮಲಬಾರ್ ಕಲಾ ಮತ್ತು ಸಂಸ್ಕೃತಿ ವೇದಿಕೆ ಪ್ರಧಾನ ಸಂಚಾಲಕ ಅಶ್ರಫ್ ಕಾರ್ಲೆ ಸ್ವಾಗತಿಸಿದರು. ಮಂಜೇಶ್ವರ ಮತ್ತು ಕಾಸರಗೋಡು ತಾಲೂಕಿನ ವ್ಯಾಪ್ತಿಯ ಶಾಲೆಗಳ ಆಯ್ದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ನಲ್ಲಿ ತರಬೇತಿ ನಡೆಯಲಿದೆ. ಕಾರ್ಯಾಗಾರದಲ್ಲಿ ಕೆ.ಎಂ.ಅಬ್ಬಾಸ್ ಸಂಚಾಲಕರಾಗಿ ನಿರ್ವಹಿಸುವರು. ಪ್ರಮುಖ ಪತ್ರಕರ್ತರು ತರಗತಿ ನಡೆಸುವರು.

Share This Article

ಹೋಟೆಲ್​ ಸ್ಟೈಲ್​​ ಮಸಾಲಾ ವಡೆ ಮನೆಯಲ್ಲೇ ಮಾಡಿ; ಇಲ್ಲಿದೆ ಸಿಂಪಲ್​ ರೆಸಿಪಿ | Recipe

ಮಸಾಲಾ ವಡೆ ಯಾರಿಗೆ ಇಷ್ಟವಿರಲ್ಲ ಹೇಳಿ. ಆದರೆ ಮನೆಯಲ್ಲಿ ಮಾಡುವ ಕಡಲೆಬೇಳೆ ವಡೆ ಹೋಟೆಲ್​ ರುಚಿ…

ಬೇಸಿಗೆಯಲ್ಲಿ ಪುದೀನಾ ಚಹಾ ಕುಡಿಯುವುದರಿಂದ ಆಗುವ ಪ್ರಯೋಜನ ಗೊತ್ತಾ?; ಇಲ್ಲಿದೆ ಉಪಯುಕ್ತ ಮಾಹಿತಿ ’ Health Tips

ಭಾರತೀಯರ ದಿನಚರಿಯ ಪ್ರಮುಖ ಭಾಗವೆಂದರೆ ಚಹಾ. ಭಾರತದ ಪ್ರತಿಯೊಂದು ಮೂಲೆಯಲ್ಲೂ ನೀವು ಚಹಾ ಪ್ರಿಯರನ್ನು ಕಾಣಬಹುದು.…

ಕ್ಯಾನ್ಸರ್​ ಮಾತ್ರವಲ್ಲ.. ಧೂಮಪಾನದಿಂದ ಬರುವ ಅಪಾಯಕಾರಿ ಕಾಯಿಲೆಗಳಿವು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಭಾರತದಲ್ಲಿ ಧೂಮಪಾನವು ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದ್ದು, ವಿಶೇಷವಾಗಿ ಯುವಕರು ಮತ್ತು ಮಹಿಳೆಯರಲ್ಲಿ ಇದರ ಅಭ್ಯಾಸ…