ಸಾಮಾಜಿಕ ಪರಿವರ್ತನೆಗೆ ಕೊಡುಗೆ : ಯೋಜನಾಧಿಕಾರಿ ದಯಾನಂದ ಪೂಜಾರಿ ಬಣ್ಣನೆ

okkuta
Published on

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇವಲ ಸಾಲ ಕೊಡುವುದಕ್ಕೆ ಮತ್ತು ಕಟ್ಟಿಸುವುದಕ್ಕೆ ಸೀಮಿತಗೊಳ್ಳದೆ ಸಾಮಾಜಿಕ ಪರಿವರ್ತನೆಗೆ ದೊಡ್ಡ ಕೊಡುಗೆಯನ್ನೇ ನೀಡಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ದಯಾನಂದ ಪೂಜಾರಿ ಹೇಳಿದರು.

ಶುಕ್ರವಾರ ಅಳದಂಗಡಿ ಶ್ರೀಸೋಮನಾಥೇಶ್ವರಿ ದೇವಸ್ಥಾನ ವಠಾರದಲ್ಲಿ ಅಳದಂಗಡಿ ವಲಯ ಎ ಮತ್ತು ಬಿ ಒಕ್ಕೂಟದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಶಕ್ತರಿಗೆ, ವಿದ್ಯಾರ್ಥಿಗಳಿಗೆ ನೆರವಿನ ಮಹಾಪೂರ ಹರಿಸಿದ್ದಾರೆ. ಆದ್ದರಿಂದ ಯೋಜನೆಯ ಬಗೆಗಿನ ಯಾವುದೇ ಅಪಪ್ರಚಾರಕ್ಕೆ ಕಿವಿಗೊಟ್ಟು ಜೀವನದ ಯಶಸ್ಸಿನ ಹಾದಿ ಮುಚ್ಚಿಕೊಳ್ಳಬೇಡಿ ಎಂದರು.

ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾ.ಪಂ ಅಧ್ಯಕ್ಷೆ ಸರಸ್ವತಿ, ತಾಲೂಕು ಜನಜಾಗೃತಿ ವೇದಿಕೆ ಸದಸ್ಯ ಸದಾನಂದ ಪೂಜಾರಿ ಉಂಗಿಲಬೈಲು, ಪ್ರಗತಿಪರ ಕೃಷಿಕ ಪಡ್ಯೋಡಿಗುತ್ತು ಸುಭಾಶ್ಚಂದ್ರ ರೈ, ಮುಖ್ಯಶಿಕ್ಷಕ ಸುರೇಶ್ ಎನ್, ಒಕ್ಕೂಟ ಅಧ್ಯಕ್ಷರಾದ ಮಂಜುನಾಥ ಆಚಾರ್ಯ, ಹರೀಶ್ ಆಚಾರ್ಯ, ಶ್ರೀ ವರಮಹಾಲಕ್ಷ್ಮೀ ವ್ರತ ಪೂಜಾ ಸಮಿತಿ ಕೋಶಾಧಿಕಾರಿ ಶಾರದಾ, ನಿಯೋಜಿತ ಒಕ್ಕೂಟ ಅಧ್ಯಕ್ಷರಾದ ಹರೀಶ್ ಸಾಲಿಯಾನ್ ನಿನ್ನಿಕಲ್ಲು, ಕೃಷ್ಣಪ್ಪ ಪೂಜಾರಿ ಬಿಕ್ಕಿರ, ಸೇವಾಪ್ರತಿನಿಧಿಗಳಾದ ಶುಭಲತಾ, ಪೂರ್ಣಿಮಾ, ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಲಯ ಮೇಲ್ವಿಚಾರಕಿ ಸುಮಂಗಲಾ ಸ್ವಾಗತಿಸಿದರು. ಸದಸ್ಯ ಸಂದೀಪ್ ಎಸ್.ಎನ್ ವರದಿ ಮಂಡಿಸಿದರು. ಶ್ರೀನಿವಾಸ ಆಚಾರ್ಯ ವಂದಿಸಿದರು. ಮನೋಹರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

21ನೇ ವರ್ಷದ ವರಮಹಾಲಕ್ಷ್ಮೀ ಪೂಜೆ

ಒಕ್ಕೂಟಗಳ ಹಿರಿಯ ಸದಸ್ಯರನ್ನು ಹಾಗೂ ಉತ್ತಮ ಗುಂಪುಗಳನ್ನು ಗುರುತಿಸಲಾಯಿತು. ಸಮಾರಂಭಕ್ಕೂ ಮೊದಲು ಧರ್ಮಸ್ಥಳ ಯೋಜನೆಯ ಒಕ್ಕೂಟಗಳ, ಸಾಧನಾ ಜ್ಞಾನವಿಕಾಸ ಕೇಂದ್ರ, ಜನಜಾಗೃತಿ ಗ್ರಾಮ ಸಮಿತಿ, ಶ್ರೀ ಸೋಮನಾಥೇಶ್ವರೀ ಭಜನಾ ಮಂಡಳಿ ಸಹಕಾರದೊಂದಿಗೆ 21ನೇ ವರ್ಷದ ವರಮಹಾಲಕ್ಷ್ಮೀ ವ್ರತ ಪೂಜೆ ಅರ್ಚಕ ಪ್ರಕಾಶ್ ಭಟ್ ಮಾರ್ಗದರ್ಶನದಲ್ಲಿ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net