

ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನ ಪ್ರಸ್ತುತ ಪಡಿಸುವ ಉತ್ಕಷ್ಟ ಮಟ್ಟದ ರಿಮ್ಝಿಮ್ ಸಂತೂರ್ ವಾದನ ಮತ್ತು ಹಿಂದುಸ್ತಾನಿ ಶಾಸೀಯ ಗಾಯನ ಕಾರ್ಯಕ್ರಮ ಭಾನುವಾರ ನಗರದ ಅಲೋಶಿಯಸ್ ಕಾಲೇಜಿನ ಫಾ ಎಲ್. ಎಫ್ ರಸ್ಕಿನ್ಹಾ ಹಾಲ್‌ನಲ್ಲಿ ನಡೆಯಿತು.
ಪೂರ್ವಾಧದಲ್ಲಿ ಯುವ ಗಾಯಕ ಧಾರವಾಡದ ಸುಜಯೇಂದ್ರ ಕುಲಕರ್ಣಿ ಅವರಿಂದ ಹಿಂದುಸ್ತಾನೀ ಶಾಸೀಯ ಸಂಗೀತ ಗಾಯನ, ಉತ್ತರಾರ್ಧದಲ್ಲಿ ಮುಂಬಯಿಯ ಪಂ.ಸತ್ಯೇಂದ್ರ ಸಿಂಗ್ ಸೋಲಂಕಿ ಅವರಿಂದ ಸಂತೂರ್ ಕಾರ್ಯಕ್ರಮ ನಡೆಯಿತು. ತಬ್ಲಾದಲ್ಲಿ ಭೋಪಾಲ್‌ನ ರಾಮೇಂದ್ರ ಸಿಂಗ್ ಸೋಲಂಕಿ, ಹಾರ್ಮೋನಿಯಂನಲ್ಲಿ ಬೆಂಗಳೂರಿನ ತೇಜಸ್ ಕಾಟೋಟಿ ಸಾಥ್ ನೀಡಿದರು.