ನವದೆಹಲಿ: ಇಂದಿನ ಸಾಮಾಜಿಕ ಜಾಲತಾಣ ಯುಗದಲ್ಲಿ ಫೋನ್ ಬಳಸದವರೇ ಇಲ್ಲ. ಅದರಲ್ಲೂ ಇಂದು ಕೆಲವರು ರೀಲ್ಸ್ ಎಂಬ ಮಾಯಾಜಾಲದಲ್ಲಿ ಮುಳುಗಿದ್ದಾರೆ. ತಮ್ಮ ದಿನಚರಿಯನ್ನು ವ್ಲಾಗ್‌ಗಳ ಹೆಸರಿನಲ್ಲಿ ನೆಟ್ಟಿಗರೊಂದಿಗೆ ಹಂಚಿಕೊಳ್ಳುವುದು ಇಂದು ಸಾಮಾನ್ಯವಾಗಿದೆ. ಇನ್ನು ಕೆಲವರು ತಮ್ಮ ರೀಲ್ ಹುಚ್ಚನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಾರೆ. ಅದು ಹೇಗೆ ಅಂದರೆ, ತಮ್ಮ ವೈಯಕ್ತಿಕ ವಿಚಾರಗಳನ್ನು ಸಹ ನಾಚಿಕೆ ಬಿಟ್ಟು ಹಂಚಿಕೊಳ್ಳುತ್ತಾರೆ. ಬೆಡ್ರೂಮ್ ವಿಷಯಗಳನ್ನು ಆನ್‌ಲೈನ್‌ನಲ್ಲಿ ಹರಿಬಿಡುತ್ತಿದ್ದಾರೆ. ಈಗಾಗಲೇ ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇತ್ತೀಚಿಗೆ ನವಜೋಡಿಯ ವಿಡಿಯೋವೊಂದು ಸದ್ದು ಮಾಡುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಗೆಬಗೆಯ ಕಾಮೆಂಟ್ಗಳನ್ನು ಹರಿಬಿಡುತ್ತಿದ್ದಾರೆ.
ಅಂದಹಾಗೆ ಇತ್ತೀಚಿನ ದಿನಗಳಲ್ಲಿ ಕೆಲವರು ರೀಲ್ಸ್ ವ್ಯಾಮೋಹಕ್ಕೆ ಬಿದ್ದು ಮದುವೆ ಹಾಗೂ ಸೌಂದರ್ಯ ಮುಂತಾದವುಗಳಿಗೆ ಇರುವ ಅರ್ಥವನ್ನೇ ಬದಲಾಯಿಸುತ್ತಿದ್ದಾರೆ. ಫಸ್ಟ್ ನೈಟ್ ವಿಡಿಯೋಗಳು ಮತ್ತು ಫೋಟೋಗಳನ್ನು ತೆಗೆದುಕೊಂಡು ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಇಂದು ತಮ್ಮ ಮೊದಲ ರಾತ್ರಿ ಎಂದು ನಾಚಿಕೆ ಬಿಟ್ಟು ಘೋಷಿಸುತ್ತಿದ್ದಾರೆ. ಅಲ್ಲದೆ, ಸಿನಿಮಾದಲ್ಲಿ ತೋರಿಸುವಂತೆ ಪರಸ್ಪರ ಚುಂಬಿಸುತ್ತಾರೆ. ಗುಟ್ಟಾಗಿ ಇಡಬೇಕಾಗಿದ್ದನ್ನು ಕ್ಯಾಮೆರಾ ಮುಂದೆ ತೆರೆದಿಡುತ್ತಿದ್ದಾರೆ. ಈ ಕ್ಯಾಮೆರಾ ಹುಚ್ಚು ಕೆಲವೊಮ್ಮೆ ಅತಿರೇಕಕ್ಕೆ ಹೋದ ಉದಾಹರಣೆಗಳು ಸಹ ನಮ್ಮ ಕಣ್ಣ ಮುಂದಿವೆ.
ಅಮರ್ ಹೆಸರಿನ ಫುಡ್ ವ್ಲೋಗರ್ ಓರ್ವ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತನ್ನ ಪತ್ನಿಯ ಜತೆ ಹಾಸಿಗೆಯಲ್ಲಿ ಇರುವ ವಿಡಿಯೋ ಇತ್ತೀಚೆಗೆ ಮತ್ತೆ ವೈರಲ್ ಆಗಿದೆ. ವಿಡಿಯೋದಲ್ಲಿ ಇಬ್ಬರು ತಮ್ಮ ಬೆಡ್ರೂಮಿನಲ್ಲಿ ಚುಂಬಿಸುವ ದೃಶ್ಯವಿದೆ. ಅಮರ್ ಅವರು ಶೆರ್ವಾನಿ ಧರಿಸಿದ್ದಾರೆ. ಅಲ್ಲದೆ, ಬಣ್ಣ ಸಂಯೋಜಿತ ಪೇಟದಲ್ಲಿ ಸುಂದರವಾಗಿ ಕಾಣುತ್ತಿದ್ದರೆ. ಅವರ ಪತ್ನಿ ನಿಶಾ ಕೆಂಪು ಬಣ್ಣದ ಲೆಹೆಂಗಾದಲ್ಲಿ ಕಂಗೊಳಿಸುತ್ತಿದ್ದಾರೆ. ಹಸೀ ಟು ಫೇಸ್ ಚಿತ್ರದ ಸನಮ್ ಪುರಿ ಮತ್ತು ಶಿಪ್ರಾ ಗೋಯಲ್ ಅವರ ಇಷ್ಕ್ ಬುಲವಾ ಟ್ರ್ಯಾಕ್ ಬ್ಯಾಕ್ಗ್ರೌಂಡ್ನಲ್ಲಿ ಕೇಳಿಬರುತ್ತಿದೆ.
ವಿಡಿಯೋಗೆ ಮದುವೆ ಬಳಿಕ ನಮ್ಮ ಮನೆಯಲ್ಲಿ ನಮ್ಮ ಮೊದಲ ಕ್ಷಣ ಎಂಬ ಅಡಿಬರಹವನ್ನು ಅಮರ್ ಬರೆದುಕೊಂಡಿದ್ದಾರೆ. ನಮ್ಮದು ಹತ್ತು ವರ್ಷಗಳ ಪ್ರೀತಿ, ಏಳು ಹೆಜ್ಜೆಗಳ ನಂತರ ಅಂತಿಮವಾಗಿ ಒಂದಾಗಿದ್ದೇವೆ ಎಂದು ವಿಡಿಯೋ ಮೇಲೆ ಬರೆದಿದ್ದಾರೆ. ಇಬ್ಬರ ಮದುವೆ ಒಂದು ವರ್ಷದ ಹಿಂದೆ ನಡೆದಿದ್ದು, ಆ ಸಮಯದಲ್ಲಿ ತೆಗೆದ ಫೋಟೋಗಳನ್ನು ಅಮರ್ ಇತ್ತೀಚೆಗೆ ಪೋಸ್ಟ್ ಮಾಡಿದ್ದಾರೆ. ಅವರ ಪತ್ನಿ ನಿಶಾ ಕೂಡ ಫುಡ್ ವ್ಲಾಗರ್ ಆಗಿದ್ದಾರೆ. ಸದ್ಯ ಇವರಿಬ್ಬರ ಚುಂಬನದ ದೃಶ್ಯಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋ ನೋಡಿದ ನೆಟ್ಟಿಗರು ನಿಮ್ಮ ಪರ್ಸನಲ್ ಮ್ಯಾಟರ್ ಅನ್ನು ಏಕೆ ಈ ರೀತಿ ಬಹಿರಂಗಪಡಿಸುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್)
ಅನಂತ್ ಅಂಬಾನಿಯ ‘ವಂತಾರಾ’ದಿಂದ ಹೊಸ ಪ್ರಯತ್ನ: ವಿಡಿಯೋ ಸರಣಿ ಮೂಲಕ ಪ್ರಾಣಿ ಸಂರಕ್ಷಣೆ ಜಾಗೃತಿ
ಕಾವ್ಯಾ ಬೇಡಿಕೆ ಬೆನ್ನಲ್ಲೇ ಐಪಿಎಲ್ನಲ್ಲಿ ಮಹತ್ವದ ಬದಲಾವಣೆ: ಈ ತಪ್ಪು ಮಾಡಿದ್ರೆ 2 ವರ್ಷ ಬ್ಯಾನ್ ಫಿಕ್ಸ್!