ನವದೆಹಲಿ: ತಮ್ಮ ಕನಸಿನ ಯೋಜನೆಯಾದ ‘ವಂತಾರಾ’ ಮೂಲಕ ವಿಶ್ವದ ಅತಿ ದೊಡ್ಡ ಮೃಗಾಲಯ, ಪ್ರಾಣಿ ಸಂರಕ್ಷಣಾ ಹಾಗೂ ಪುನರ್ವಸತಿ ಕೇಂದ್ರ ತೆರೆದಿರುವ ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕ ಅನಂತ್ ಅಂಬಾನಿ ಅವರು ಇದೀಗ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ‘ವಂತಾರಾ ಕೆ ಸೂಪರ್ಸ್ಟಾರ್ಸ್’ ಶೀರ್ಷಿಕೆಯಲ್ಲಿ ಭಾರತದ ಖ್ಯಾತ ಸೆಲೆಬ್ರಿಟಿಗಳ ಧ್ವನಿಯನ್ನು ಒಳಗೊಂಡ ಎಜುಟೈನ್ಮೆಂಟ್ (ಶಿಕ್ಷಣ ಮತ್ತು ಮನರಂಜನೆ) ವಿಡಿಯೋ ಸರಣಿ ಹೊರತರಲು ಉತ್ಸುಕರಾಗಿದ್ದಾರೆ.
ಈ ವಂತಾರಾ ಕೆ ಸೂಪರ್ಸ್ಟಾರ್ಟ್ ಕೇವಲ ವಂತಾರಾದಲ್ಲಿರುವ ಜೀವಿಗಳಿಗೆ ಮಾತ್ರವಲ್ಲದೆ, ನೈಸರ್ಗಿಕ ಪ್ರಪಂಚದ ಹೊಸ ರಾಯಭಾರಿಗಳನ್ನು ಒಳಗೊಂಡಿರಲಿದೆ. ಧ್ವನಿಯಿಲ್ಲದವರಿಗೆ ಧ್ವನಿ ನೀಡುವುದೇ ಇದರ ಮುಖ್ಯ ಗುರಿಯಾಗಿದೆ. ವಂತಾರಾವನ್ನು ಮೊದಲು ಸೇರಿದ ಆನೆ ಗೌರಿಯೊಂದಿಗೆ ಈ ವಿಡಿಯೋ ಸರಣಿಯು ಪ್ರಾರಂಭವಾಗುತ್ತದೆ. ಈ ಗೌರಿ ಆನೆಯನ್ನು ರಾಜಸ್ಥಾನದಿಂದ ರಕ್ಷಿಸಿ ಕರೆತರಲಾಗಿದೆ. ಈ ಆನೆಯು ಅಪೌಷ್ಟಿಕತೆಯಿಂದ, ಸಂಧಿವಾತದಿಂದ ಮತ್ತು ಆನೆ ಶಿಬಿರಕ್ಕೆ ಕರೆತರುವ ಮೊದಲು ದೃಷ್ಟಿ ಕುಂಠಿತಗೊಂಡಿತ್ತು. ಗೌರಿ ಆನೆ ಎಲ್ಲರ ನೆಚ್ಚಿನ ಹೆಣ್ಣು ಆನೆಯಾಗಿದ್ದು, ರಾಧೆ ಕೃಷ್ಣ ದೇವಸ್ಥಾನದ ಆನೆ ಕಲ್ಯಾಣದ ಮೊದಲ ನಿವಾಸಿಯಾಗಿದೆ. ಕರುಣಾಮಯ ಆರೈಕೆಯ ಪರಿವರ್ತಕ ಶಕ್ತಿಯನ್ನು ಈ ಗೌರಿ ಆನೆ ಸಂಕೇತಿಸುತ್ತದೆ.
ವಂತಾರಾವು ಭಾರತದಲ್ಲೇ ಮೊದಲ ಬಾರಿಗೆ ಇಂತಹ ಸೃಜನಶೀಲ ವಿಧಾನವನ್ನು ಪರಿಚಯಿಸಿದೆ. ಪ್ರಮುಖ ಪ್ರಾಣಿ ಸಂರಕ್ಷಣಾ ಸಂದೇಶಗಳೊಂದಿಗೆ ಮನಮುಟ್ಟುವ ಕತೆಯನ್ನು ರಚಿಸಿ, ಅದನ್ನು ಸಂಯೋಜಿಸುವ ಮೂಲಕ ವನ್ಯಜೀವಿ ಜಾಗೃತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ಗುರಿಯನ್ನು ವಂತರಾ ಹೊಂದಿದೆ. ನಮ್ಮ ನೈಸರ್ಗಿಕ ಪ್ರಪಂಚವನ್ನು ರಕ್ಷಿಸುವ ಮಹತ್ವವನ್ನು ಈ ವಿನೂತನ ಕ್ರಮ ಒತ್ತಿಹೇಳುತ್ತದೆ.
ಈ ವಿಡಿಯೋ ಸರಣಿಯು ಮಕ್ಕಳಿಂದ ವಯಸ್ಕರವರೆಗೂ ಎಲ್ಲ ವಯೋಮಾನದವರಿಗೂ ಸೂಕ್ತವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಡಿಜಿಟಲ್ ಲೋಕದಲ್ಲಿ ಸಕ್ರಿಯವಾಗಿರುವವರನ್ನು ಮಾತ್ರವಲ್ಲದೆ ಪ್ರತಿಯೊಬ್ಬರನ್ನು ಇದು ಗುರಿಯಾಗಿಸುತ್ತದೆ. ಪ್ರಾಣಿ ಕಲ್ಯಾಣ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಪರಿಸರವಾದಿಗಳು ಮತ್ತು ಸಂರಕ್ಷಣಾಕಾರರಿಂದ ಸಾಮಾನ್ಯ ಜನರಿಗೆ ಅಗತ್ಯ ಮಾಹಿತಿಗಳನ್ನು ವಿಸ್ತರಿಸುವುದು ಈ ಸರಣಿಯ ಮೂಲ ಉದ್ದೇಶವಾಗಿದೆ.
ಗೌರಿ ಆನೆಗೆ ಧ್ವನಿ ನೀಡಿದ ನಟಿ ಹಾಗು ಕಿರುತೆರೆ ನಿರ್ದೇಶಕಿ ನೀನಾ ಗುಪ್ತಾ, ಈ ನೂತನ ಉಪಕ್ರಮದ ಬಗ್ಗೆ ಮಾತನಾಡಿ, ಗೌರಿಗೆ ಧ್ವನಿ ನೀಡಲು ವಂತಾರಾದ ವಿಡಿಯೋ ಸರಣಿಯಂತಹ ವಿನೂತನ ಕ್ರಮದ ಮೇಲೆ ಕೆಲಸ ಮಾಡುವುದು ಒಂದು ಉತ್ತಮ ಅನುಭವವಾಗಿದೆ. ಈ ಎಜುಟೈನ್ಮೆಂಟ್ ವಿಡಿಯೋಗಳ ಮೂಲಕ ವಂತಾರಾವು ಕೇವಲ ಕತೆಗಳನ್ನು ಹೇಳುವುದಲ್ಲದೆ, ಜ್ಞಾನವನ್ನು ಕೂಡ ಬೆಳೆಸುತ್ತಿದೆ. ವನ್ಯಜೀವಿ ಸಂರಕ್ಷಣೆಯ ಬಗ್ಗೆ ತಿಳುವಳಿಕೆ ಮೂಡಿಸಲು ಮತ್ತು ನಮ್ಮ ನೈಸರ್ಗಿಕ ಪ್ರಪಂಚದ ಸಂರಕ್ಷಣೆಗಾಗಿ ಮನರಂಜನೆಯೊಂದಿಗೆ ಪ್ರಬಲವಾದ ಸಂದೇಶವನ್ನು ಒಳಗೊಂಡಿರುವ ಈ ನವೀನ ಯೋಜನೆಯ ಭಾಗವಾಗಿರಲು ನನಗೆ ಗೌರವವಿದೆ ಎಂದಿದ್ದಾರೆ.
ಅಂದಹಾಗೆ ನಮ್ಮ ಭೂಮಿಯ ಅಮೂಲ್ಯ ಜೀವವೈವಿಧ್ಯವನ್ನು ಸಂರಕ್ಷಿಸುವಲ್ಲಿ ಪ್ರತಿಯೊಬ್ಬ ವ್ಯಕ್ತಿಯು ವಹಿಸುವ ನಿರ್ಣಾಯಕ ಪಾತ್ರವನ್ನು ಒತ್ತಿಹೇಳುವ, ವೀಕ್ಷಕರಲ್ಲಿ ಮನರಂಜನೆ ಮತ್ತು ವನ್ಯಜೀವಿ ಜಾಗೃತಿ ಮೂಡಿಸಲು ವಂತಾರಾ ಎಜುಟೈನ್ಮೆಂಟ್ ಸರಣಿಯನ್ನು ವಿನ್ಯಾಸಗೊಳಿಸಲಾಗಿದೆ. ಇದರ ಮೊದಲ ಎಪಿಸೋಡ್ ಅನ್ನು ಈ ಕೆಳಗಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ವೀಕ್ಷಣೆ ಮಾಡಬಹುದಾಗಿದೆ.
ಪ್ರಾಣಿ ಸಂಕುಲಕ್ಕೆ ಜೀವನಾಡಿ ವಂತಾರಾ ಯೋಜನೆ: ಅನಂತ್ ಅಂಬಾನಿ ಘೋಷಣೆ, ಭಾರತದಲ್ಲಿ ಇದೇ ಮೊದಲು
24 ಗಂಟೆಯಲ್ಲಿ 3500 ಕಿ.ಮೀ ಪ್ರಯಾಣಿಸಿ ಆನೆ ಮತ್ತದರ ಮರಿಯ ಜೀವ ಉಳಿಸಿದ ಅನಂತ್ ಅಂಬಾನಿಯ ವಂತಾರಾ ತಂಡ!