ಬಹುಮಹಡಿ ಕಟ್ಟಡದಿಂದ ಜಿಗಿದು ಪ್ರಾಣ ಬಿಟ್ಟ NEET ಪರೀಕ್ಷಾರ್ಥಿ!

Crime
Published on

ಜೈಪುರ: 22 ವರ್ಷದ NEET ಪರೀಕ್ಷಾರ್ಥಿ ಒಬ್ಬರು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಬೆಂಗಳೂರು ಮೂಲದ ಮೊಹಮ್ಮದ್​ ನಾಸಿರ್​(22) ಎಂದು ಗುರುತಿಸಲಾಗಿದ್ದು ಕೋಟಾ ನಗರದ ವಿಗ್ಯಾನ್​ ನಗರದಲ್ಲಿರುವ ಬಹುಮಹಡಿ ಕಟ್ಟಡದ 10ನೇ ಮಹಡಿಯಿಂದ ಜಿಗಿದು ಸಾವನಪ್ಪಿದ್ದಾರೆ.

NEET ಪರೀಕ್ಷಾರ್ಥಿ

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ವಿಗ್ಯಾನ್​ ನಗರ ಪೊಲೀಸ್​ ಠಾಣಾಧಿಕಾರಿ ದೇವೇಶ್​ ಭರಧ್ವಾಜ್​ ಮೃತ ನಾಸೀರ್ ಭಾನುವಾರ ಜೈಪುರದಲ್ಲಿ ನಡೆದ NEET ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು ಮತ್ತು ಪ್ರವೇಶಾತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.

ಕಳೆದ ಒಂದು ವರ್ಷದಿಂದ ಕೋಟಾದ ಕೋಚಿಂಗ್​ ಸೆಂಟರ್​ ಒಂದರಲ್ಲಿ ಅವರು NEET ಪರೀಕ್ಷೆಗೆ ತರಭೇತಿ ಪಡೆಯುತ್ತಿದ್ದಾರೆ. ಸ್ನೇಹಿತರೊಂದಿಗೆ ವಿಗ್ಯಾನ್​ನಗರದಲ್ಲಿರುವ ಫ್ಲ್ಯಾಟ್​ನಲ್ಲಿ ವಾಸಿಸುತ್ತಿದ್ದರು.

ಆದರೆ, ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲದ ಖಾರಣ ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ನಾಸೀರ್​ ಮೃತ ದೇಹವನ್ನು ಎಂಬಿಎಸ್​ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು ಅವರ ಪೋಷಕರು ಬೆಂಗಳೂರಿನಿಂದ ಬಂದ ನಂತರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಠಾಣಾಧಿಕಾರಿ ದೇವೇಶ್​ ಭಾರಧ್ವಾಜ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net