ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ ಬದ್ಧ ಎದುರಾಳಿಗಳ ಪಂದ್ಯ; ಇಲ್ಲಿದೆ ಪೂರ್ಣ ವಿವರ…

india vs pak
ಸಾಂದರ್ಭಿಕ ಚಿತ್ರ
Published on

ದೆಹಲಿ: 2023ರ ಕ್ರಿಕೆಟ್​​ ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಇಂದು ಪ್ರಕಟಿಸಲಾಗಿದ್ದು, ಆತಿಥೇಯ ಭಾರತ ತಂಡವು ಬದ್ಧ ಎದುರಾಳಿ ಪಾಕಿಸ್ತಾನ ಜತೆಗೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೆಣಸಾಡಲಿದೆ.

ಇದನ್ನೂ ಓದಿ: ‘ಸೈಕೋ ವುಮನ್ ಶ್ರುತಿ ಹಾಸನ್ ಗೆಳೆಯನೊಂದಿಗೆ ನಿತ್ಯ ಡ್ರಗ್ಸ್ ಸೇವಿಸುತ್ತಾರೆ’

ಕ್ರಿಕೆಟ್‌ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಜಿದ್ದಾಜಿದ್ದಿನ ಕದನವು ಅಕ್ಟೋಬರ್ 15ರಂದು ಮಧ್ಯಾಹ್ನ 2 ಗಂಟೆಗೆ ಗುಜರಾತ್​ನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯ ಅತ್ಯಂತ ರೋಚಕವಾಗಿರಲಿದೆ.

ಈ ಹಿಂದೆ ಭಾರತ ಮತ್ತು ಪಾಕಿಸ್ತಾನ ತಂಡವು 1992, 1996, 1999, 2003, 2011, 2015 ಮತ್ತು 2019ರಲ್ಲಿ ಏಳು ಬಾರಿ ಮುಖಾಮುಖಿಯಾಗಿದ್ದು, ಉಭಯ ತಂಡಗಳು ಎಂಟನೇ ಬಾರಿ ಮತ್ತೇ ಮುಖಾಮುಖಿಯಾಗಲಿವೆ. 46 ದಿನಗಳ ಈ ವಿಶ್ವಕಪ್ ಟೂರ್ನಿಯ ಅವಧಿಯಲ್ಲಿ ಒಟ್ಟು 48 ಪಂದ್ಯಗಳನ್ನು ಆಡಲಾಗುತ್ತದೆ.

ಇದನ್ನೂ ಓದಿ: VIDEO| ಬಾಯ್​ಫ್ರೆಂಡ್​​ ಇದ್ದಾನೆಂದ ಮಗಳಿಗೆ ಮುಖ ಮೂತಿ ನೋಡದೆ ಗುದ್ದಿದ ತಾಯಿ!

ಭಾರತದ ವೇಳಾಪಟ್ಟಿ ಇಲ್ಲಿದೆ:
ಭಾರತ vs ಆಸ್ಟ್ರೇಲಿಯಾ- ಅಕ್ಟೋಬರ್ 8- ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ.
ಭಾರತ vs ಅಫ್ಘಾನಿಸ್ತಾನ - ಅಕ್ಟೋಬರ್ 11-  ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂ, ದೆಹಲಿ.
ಭಾರತ vs ಪಾಕಿಸ್ತಾನ - ಅಕ್ಟೋಬರ್ 15-  ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್.
ಭಾರತ vs ಬಾಂಗ್ಲಾದೇಶ - ಅಕ್ಟೋಬರ್ 19-  ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ, ಪುಣೆ.
ಭಾರತ vs ನ್ಯೂಜಿಲೆಂಡ್ - ಅಕ್ಟೋಬರ್ 22-  ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ, ಧರ್ಮಶಾಲಾ.
ಭಾರತ vs ಇಂಗ್ಲೆಂಡ್ - ಅಕ್ಟೋಬರ್ 29-  ಶ್ರೀ ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಂ, ಲಖನೌ.
ಭಾರತ vs ಅರ್ಹತಾ ಸುತ್ತಿನ 2ನೇ ಕ್ವಾಲಿಫೈಯರ್- ನವೆಂಬರ್ 2-  ವಾಂಖೆಡೆ ಸ್ಟೇಡಿಯಂ, ಮುಂಬೈ.
ಭಾರತ vs ದಕ್ಷಿಣ ಆಫ್ರಿಕಾ- ನವೆಂಬರ್ 5-  ಈಡನ್ ಗಾರ್ಡನ್ಸ್, ಕೋಲ್ಕತ್ತಾ.
ಭಾರತ vs ಅರ್ಹತಾ ಸುತ್ತಿನ 1ನೇ ಕ್ವಾಲಿಫೈಯರ್- ನವೆಂಬರ್ 11- ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.

ಈ ಟೂರ್ನಿಯ ಸೆಮಿಫೈನಲ್ ಪಂದ್ಯಗಳನ್ನು ಮುಂಬೈ ಮತ್ತು ಕೋಲ್ಕತಾದಲ್ಲಿ ನವೆಂಬರ್ 15 ಮತ್ತು 16ರಂದು ಆಯೋಜಿಸಲಾಗಿದೆ. ಫೈನಲ್ ಪಂದ್ಯವು ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net