ರಸ್ತೆ ಅಪಘಾತದಲ್ಲಿ ಇಹಲೋಕ ತ್ಯಜಿಸಿದ ಪ್ರಸಿದ್ಧ ಯೂಟ್ಯೂಬರ್: ಸಂತಾಪ ವ್ಯಕ್ತಪಡಿಸಿದ ಛತ್ತಿಸ್​ಗಢ ಸಿಎಂ

devaraj patel
Published on

ರಾಯ್‌ಪುರ: ಭೀಕರ ಅಪಘಾತವೊಂದರಲ್ಲಿ ಪ್ರಸಿದ್ಧ ಯೂಟ್ಯೂಬರ್, ಹಾಸ್ಯನಟ ಮೃತಪಟ್ಟಿರುವ ಘಟನೆ ಛತ್ತೀಸ್​​ಗಢದ ರಾಯಪುರ್​ ಬಳಿಯ ಲಭಂಡಿ ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: ಕೆಂಪೇಗೌಡ ಜಯಂತಿ: ಡಿ‌ಕೆಶಿ, ಅಶ್ವತ್ಥ್ ನಾರಾಯಣ್​ಗೆ ಕಿವಿಮಾತು ಹೇಳಿದ ಶ್ರೀ ನಿರ್ಮಲಾನಂದ ಸ್ವಾಮೀಜಿ

ದೇವರಾಜ್​ ಪಟೇಲ್​​(22) ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದು, ಅತಿವೇಗವಾಗಿ ಬಂದ ಟ್ರಕ್‌ಗೆ ಆತನ ಬೈಕ್​​​ಗೆ ಡಿಕ್ಕಿಯಾಗಿ ತಲೆ ಮತ್ತು ದೇಹಕ್ಕೆ ತೀವ್ರವಾದ ಗಾಯಗಳಾಗಿದ್ದವು. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಿದರೂ ಕೂಡ ಅಷ್ಟರಲ್ಲಿ ಆತ ಮೃತಪಟ್ಟಿದ್ದಾರೆ.

ಭುವನ್ ಬಾಮ್​ರ ವೆಬ್ ಸೀರೀಸ್ 'ದಿಂಧೋರಾ'ದಲ್ಲಿ ನಟಿಸಿದ್ದ ದೇವರಾಜ್, ಈ ಹಿಂದೆ ದಿಲ್ ಸೆ ಬುರಾ ಲಗ್ತಾ ಹೈ ಭಾಯ್ ಎಂಬ ಸಂಭಾಷಣೆ ರಾತ್ರೊ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಖ್ಯಾತಿಯನ್ನು ಗಳಿಸಿದ್ದರು.

ಇದನ್ನೂ ಓದಿ: ಏಕದಿನ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ; ಇಲ್ಲಿದೆ ಜಾಗತಿಕ ಕ್ರಿಕೆಟ್ ಟೂರ್ನಿ ವಿವರ…

ದೇವರಾಜ್ ಪಟೇಲ್ ಯಾರು?
ಛತ್ತೀಸ್‌ಗಢದ ಮಹಾಸಮುಂಡ್ ಜಿಲ್ಲೆಯ ಬಾಗ್‌ಬಹರಾದ 22 ವರ್ಷದ ಯೂಟ್ಯೂಬರ್ ದೇವರಾಜ್ ಪಟೇಲ್, ತಮ್ಮ ಹಾಸ್ಯ ಪ್ರವೃತ್ತಿಯಿಂದ ರಾಜ್ಯದಲ್ಲಿ ವ್ಯಾಪಕ ಹೆಸರುಗಳಿಸಿದ್ದ. ಯೂಟ್ಯೂಬ್ ಚಾನೆಲ್‌ನಲ್ಲಿ 3 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಆತ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದರು.
ಸಿಎಂ ಬಘೇಲ್ ಈತನ ಸಾವಿಗೆ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

ಕಳೆದ ವರ್ಷ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್​ ಮಹಾಸಮುಂಡ್ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ದೇವರಾಜ್​ನೊಂದಿಗೆ ಚಿತ್ರೀಕರಿಸಿದ ಕಿರು ವೀಡಿಯೊವನ್ನು ಸಿಎಂ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡು ಇಬ್ಬರ ನಡುವಿನ ಸಂವಾದವನ್ನು ನೆನಪಿಸಿಕೊಂಡಿದ್ದಾರೆ. ಜತೆಗೆ ಈತ ಛತ್ತೀಸ್‌ಗಢ ಸರ್ಕಾರದ ಆತ್ಮಾನಂದ ಶಾಲೆಯ ಜಾಹೀರಾತು ಅಭಿಯಾನದ ಕುರಿತು ಕಿರು ವೀಡಿಯೊವನ್ನು ಸಹ ಮಾಡಿದ್ದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net