More

    ಕೆಂಪೇಗೌಡ ಜಯಂತಿ: ಡಿ‌ಕೆಶಿ, ಅಶ್ವತ್ಥ್ ನಾರಾಯಣ್​ಗೆ ಕಿವಿಮಾತು ಹೇಳಿದ ಶ್ರೀ ನಿರ್ಮಲಾನಂದ ಸ್ವಾಮೀಜಿ

    ಬೆಂಗಳೂರು: ಇಂದು (ಜೂ.27) ಮಂಗಳವಾರ ಬೆಂಗಳೂರಿನ ಸದಾಶಿವನಗರದ ರಮಣಮಹರ್ಷಿ ಉದ್ಯಾನವನದಲ್ಲಿ ಏರ್ಪಡಿಸಲಾಗಿದ್ದ ಕೆಂಪೇಗೌಡ ದಿನಾಚರಣೆ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಭಾಗವಹಿಸಿದ್ದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಮೊನ್ನೆ ನಡೆದ ಕೆಂಪೇಗೌಡ ಸಭೆಯಲ್ಲಿ 75% ಒಕ್ಕಲಿಗರೇ ಇದ್ದರು. ಕೆಂಪೇಗೌಡರು ಒಕ್ಕಲಿಗರಿಗೆ ಮಾತ್ರ ಸೇರಿದವರಲ್ಲ, ಜಾತಿ, ಧರ್ಮ ಮೀರಿದವರು. ಬೆಂಗಳೂರನ್ನು ಅಭಿವೃದ್ಧಿ ಮಾಡಿ, ಪೇಟೆಗಳನ್ನು ಕಟ್ಟಿದರು. ಜಾತಿ ನೋಡಿ ಪೇಟೆ ನಿರ್ಮಾಣ‌ ಮಾಡಿದ್ರಾ? ಎಂದು ಅಶ್ವತ್ಥ್ ನಾರಾಯಣ್ ಅವರಿಗೆ ರಾಜಕೀಯ ತಿರುಗೇಟು ನೀಡಿದರು.

    ಅಶ್ವತ್ಥ್ ನಾರಾಯಣ್ ಮಾಡಿದ ಆರೋಪಕ್ಕೆ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ ಡಿಕೆಶಿ, ಅಶ್ವತ್ಥ್ ನಾರಾಯಣ್ ಅವರು ಇತಿಹಾಸ ಓದಬೇಕು. ನಾನು ರಾಜಾಜಿನಗರದಲ್ಲಿ 6 ನೇ ತರಗತಿಯನ್ನು ಎನ್ಪಿಎಸ್’ನಲ್ಲಿ ಓದಿದವನು. ಬೆಂಗಳೂರಿಗೆ ನನಗೂ ನಂಟಿದೆ. ನಿಮಗೆ ನನ್ನ ಇತಿಹಾಸ ಗೊತ್ತಿಲ್ಲ ಎಂದರು. ಚರಿತ್ರೆ ಗೊತ್ತಿಲ್ಲವೆಂದರೆ ಸೃಷ್ಟಿ ಮಾಡುವುದಕ್ಕೆ ಸಾಧ್ಯವಿಲ್ಲ. ಕೆಲವೊಮ್ಮೆ ಗೊತ್ತಿಲ್ಲದಿರುವುದನ್ನು ನೆನಪಿಸಬೇಕಾಗುತ್ತದೆ ಎಂದು ಡಿಕೆಶಿ ತಿಳಿಸಿದರು.

    ಡಿಕೆಶಿ ಮಾತಿಗೆ ಪ್ರತಿಕ್ರಿಯಿಸಿದ ಅಶ್ವತ್ಥ್ ನಾರಾಯಣ್, ನನಗೂ ರಾಮನಗರಕ್ಕೆ ಏನು ಸಂಬಂಧ ಅಂತ ಡಿಕೆಶಿ ಅವರು ಪ್ರಶ್ನೆ ಮಾಡಿದ್ದರು. ಆದರೆ ಯಾವ ಸರ್ಕಾರ ಕೂಡ ಕೊಡದಷ್ಟು ಯೋಜನೆಗಳನ್ನ ನಾವು ರಾಮನಗರಕ್ಕೆ ಕೊಟ್ಟಿದ್ದೇವೆ, ಅಭಿವೃದ್ಧಿ ಮಾಡಿದ್ದೇವೆ. ರಾಮನಗರ ನನ್ನ ಪೂರ್ವಿಕರ ಕರ್ಮಭೂಮಿ. ನನ್ನ ಹುಟ್ಟು ಹೆಸರು ಕೆಂಪೇಗೌಡ. ಮುಂದಿನ ದಿನಗಳಲ್ಲಿ ಇತಿಹಾಸ ಗೊತ್ತಾಗಲಿದೆ. ನಾನು ವ್ಯಕ್ತಿಗತವಾಗಿ ಮಾತನಾಡಿಲ್ಲ, ದ್ವೇಷ ಮಾತನಾಡೋಕೆ ಬಂದಿಲ್ಲ. ನಾಡಿಗೆ ಒಳಿತು ಮಾಡಬೇಕು ಎಂದು ರಾಜಕೀಯಕ್ಕೆ ಬಂದಿದ್ದೇನೆ. ಯಾವುದೇ ವೈಮನಸ್ಸು ಇಲ್ಲವೆಂದರು.

    ಇದನ್ನೂ ಓದಿ:  ಬಡ ಮಹಿಳೆಗೆ ಸ್ವತಃ ಶಸ್ತ್ರಚಿಕಿತ್ಸೆ ಮಾಡಿ, ಮಾನವೀಯತೆ ಮೆರೆದ ಕುಣಿಗಲ್ ಶಾಸಕ ಡಾ.ರಂಗನಾಥ್

    ನಾಡಪ್ರಭು ಕೆಂಪೇಗೌಡರು ಮಾಡಿದ ಶೇ.5ರಷ್ಟು ಅಭಿವೃದ್ಧಿಯನ್ನು ಕಾಂಗ್ರೆಸ್ ಸರ್ಕಾರ ಮಾಡಲಿ. ಹೇಗಿದ್ದರೂ 5 ವರ್ಷ ಸರ್ಕಾರ ಇರುತ್ತದೆ. ದ್ವೇಷ ಬೆಳೆಸಿಕೊಳ್ಳಬೇಡಿ ಎಂದು ಗುರುಹಿರಿಯರು ಯಾವಾಗಲೂ ಹೇಳುತ್ತಾರೆ. ಡಿಕೆ ಶಿವಕುಮಾರ್ ಅವರಿಗೆ ಶುಭಕೋರುತ್ತೇನೆ. ಕೆಂಪೇಗೌಡರ ಪ್ರೇರಣೆ ತೆಗೆದುಕೊಂಡು ಅಭಿವೃದ್ಧಿ ಮಾಡಿ, ಒಳ್ಳೆಯದಾಗುತ್ತದೆ ಎಂದರು.

    ಇದನ್ನೂ ಓದಿ: ಏಕದಿನ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ; ಇಲ್ಲಿದೆ ಜಾಗತಿಕ ಕ್ರಿಕೆಟ್ ಟೂರ್ನಿ ವಿವರ…

    ಡಿಕೆಶಿ ಮತ್ತು ಅಶ್ವತ್ಥ್ ನಾರಾಯಣ್ ಅವರ ನಡುವೆ ಮಾತಿನ ಸಮರ ನಡೆಯುತ್ತಿದ್ದಂತೆ ಮಧ್ಯ ಪ್ರವೇಶ ಮಾಡಿದ ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ದ್ವೇಷ ಬೆಳೆಸಿಕೊಳ್ಳದಂತೆ ಇಬ್ಬರಿಗೂ ಕಿವಿಮಾತು ಹೇಳಿದರು. ಪರಸ್ಪರ ದ್ವೇಷ, ರಾಜಕೀಯ ಜಟಾಪಟಿ ಬೇಡ. ಬಹಿರಂಗವಾಗಿ ಇಬ್ಬರೂ ವೈಯಕ್ತಿಕ ಹೇಳಿಕೆ ನೀಡಬೇಡಿ. ಇದರಿಂದ ನಮ್ಮ ಸಮಾಜದ ನಾಯಕರ ಮಧ್ಯೆ ಒಡಕು ಮೂಡುತ್ತದೆ. ಪರಸ್ಪರ ಸಹಕಾರದಿಂದ ಕೆಲಸ ಮಾಡಿ. ಅಭಿವೃದ್ಧಿಗೆ ಸಹಕಾರ ಬೇಕೆಂದು ಉಭಯ ನಾಯಕರಿಗೆ ನಿರ್ಮಲಾನಂದ ಸ್ವಾಮೀಜಿ ಸೂಚಿಸಿ, ಸಂಧಾನ ಮಾಡಿದರು.

    ವಿಮಾನದಲ್ಲಿ ಇತರ ಪ್ರಯಾಣಿಕರ ಮುಂದೆಯೇ ಮಲ, ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts