'ಸೈಕೋ ವುಮನ್ ಶ್ರುತಿ ಹಾಸನ್ ಗೆಳೆಯನೊಂದಿಗೆ ನಿತ್ಯ ಡ್ರಗ್ಸ್ ಸೇವಿಸುತ್ತಾರೆ'

Shruthi Hassan
Published on

ಮುಂಬೈ: ವಿವಾದಾತ್ಮಕ ಟ್ವೀಟ್'ಗಳಿಂದಲೇ ಆಗಾಗ್ಗೆ ಸುದ್ದಿಯಲ್ಲಿರುವ ಸ್ವಯಂ ಘೋಷಿತ ಚಲನಚಿತ್ರ ವಿಮರ್ಶಕ ಉಮೈರ್ ಸಂಧು ಸಾಗರೋತ್ತರ ಸೆನ್ಸಾರ್ ಮಂಡಳಿಯ ಸದಸ್ಯರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಬಗ್ಗೆ ಇಲ್ಲಸಲ್ಲದ ಕಾಮೆಂಟ್‌ಗಳನ್ನು ಮಾಡುವ ಉಮೈರ್ ಸಂಧು, ತಮ್ಮ ಇತಿಮಿತಿಗಳನ್ನು ದಾಟಿ ಸೆಲೆಬ್ರಿಟಿಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಕೆಲವು ತಿಂಗಳುಗಳಿಂದ ಅವರು ಮಾಡುತ್ತಿರುವ ಟ್ವೀಟ್ ಎಲ್ಲರ ಗಮನಸೆಳೆಯುತ್ತಿದೆ.

ಇಷ್ಟು ದಿನ ಬಾಲಿವುಡ್ ಸ್ಟಾರ್ ಹೀರೋಗಳು ಮತ್ತು ಹೀರೋಯಿನ್‌ಗಳನ್ನು ಗುರಿಯಾಗಿಸಿಕೊಂಡು ಕಾಮೆಂಟ್ ಮಾಡುತ್ತಿದ್ದ ಉಮೈರ್ ಸಂಧು, ಇದೀಗ ಕಮಲ್ ಹಾಸನ್ ಪುತ್ರಿ, ದಕ್ಷಿಣದ ಖ್ಯಾತ ನಟಿ ಶ್ರುತಿ ಹಾಸನ್ ಬಗ್ಗೆ ಟ್ವೀಟ್ ಮಾಡಿದ್ದು, ಅವರ ಟ್ವೀಟ್ ಈಗ ವೈರಲ್ ಆಗಿದೆ.

ಶ್ರುತಿ ಹಾಸನ್ ಸೈಕೋ ವುಮನ್. ಇತ್ತೀಚಿನ ದಿನಗಳಲ್ಲಿ ಖಿನ್ನತೆ ಶಮನಕಾರಿ (ಆಂಟಿ-ಡಿಪ್ರೆಸೆಂಟ್) ಔಷಧಿ ತೆಗೆದುಕೊಳ್ಳುತ್ತಿದ್ದಾರೆ. ಮುಂಬೈನಲ್ಲಿ ತನ್ನ ಬಾಯ್ ಫ್ರೆಂಡ್ ಜೊತೆ ನಿತ್ಯ ಡ್ರಗ್ಸ್ ಸೇವಿಸುತ್ತಾರೆ. ಸಾಕಷ್ಟು ಹತಾಶೆಗೊಳಗಾಗಿದ್ದಾರೆ. ಅದಕ್ಕಾಗಿಯೇ ಹೆಚ್ಚಿನ ನಿರ್ದೇಶಕರು ಅವರೊಂದಿಗೆ ಕೆಲಸ ಮಾಡಲು ಬಯಸುವುದಿಲ್ಲ. ನಿನ್ನೆ ರಾತ್ರಿ ಶ್ರುತಿ ತನ್ನ ತಂದೆ ಕಮಲ್ ಹಾಸನ್ ಜೊತೆ ಜಗಳ ಮಾಡಿಕೊಂಡಿದ್ದರು ಎಂದು ಟ್ವೀಟ್ ಮಾಡಿದ್ದಾರೆ.

ಉಮೈರ್ ಸಂಧು ಟ್ವೀಟ್

ಗಬ್ಬರ್ ಸಿಂಗ್ ಚಿತ್ರ ಖ್ಯಾತಿಯ ಶ್ರುತಿ ಹಾಸನ್ ಶಂತನು ಹಜಾರಿಕಾ ಅವರೊಂದಿಗೆ ಬಹಳ ಸಮಯದಿಂದ ರಿಲೇಶನ್ಶಿಪ್'ನಲ್ಲಿ ಇದ್ದಾರೆ. ಇಬ್ಬರು ಆಗಾಗ ಒಟ್ಟಿಗೆ ಇರುವ ಫೋಟೋಗಳನ್ನು ಶೇರ್ ಮಾಡುತ್ತಾ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡುತ್ತಿರುತ್ತಾರೆ. ಆದರೆ ಉಮೈರ್ ಸಂಧು 'ಶ್ರುತಿ ಹಾಸನ್ ಮುಂಬೈನಲ್ಲಿ ತನ್ನ ಬಾಯ್ ಫ್ರೆಂಡ್ ಜೊತೆ ನಿತ್ಯ ಡ್ರಗ್ಸ್ ಸೇವಿಸುತ್ತಿದ್ದು, ನಿನ್ನೆ ರಾತ್ರಿ ತಂದೆಯೊಂದಿಗೆ ಜಗಳವಾಡಿದರು' ಎಂದು ಟ್ವೀಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net