More

    ನಯನತಾರಾ 75 & ಕೌಂಟಿಂಗ್; ಗಮನ ಸೆಳೆದ ಅನ್ನಪೂರಣಿ ವಿಭಿನ್ನ ಟ್ರೇಲರ್

    ತಮಿಳು, ತೆಲುಗು, ಹಿಂದಿ ಹೀಗೆ ಬಹುಭಾಷೆಗಳಲ್ಲಿ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದ ನಟಿ ನಯನತಾರಾ, ಈವರೆಗೆ 74 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈ ವರ್ಷ ‘ಜವಾನ್’ ಮತ್ತು ‘ಇರೈವಾನ್’ ಚಿತ್ರಗಳಲ್ಲಿ ಮಿಂಚಿರುವ ನಯನತಾರಾ, ಇದೀಗ ‘ಅನ್ನಪೂರಣಿ’ ಮತ್ತೊಂದು ವಿಭಿನ್ನ ಜಾನರ್ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಇದಕ್ಕೆ ‘ಆಹಾರ ದೇವತೆ’ ಎಂಬ ಅಡಿಬರಹವಿದೆ.

    ವಿಶೇಷ ಎಂದರೆ ಇದು ನಯನತಾರಾ ಅಭಿನಯಿಸುತ್ತಿರುವ 75ನೇ ಸಿನಿಮಾ. ಈ ಚಿತ್ರಕ್ಕೆ ನಿಲೇಶ್ ಕೃಷ್ಣ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘ಯುವತಿಯೊಬ್ಬಳು ಸಮಾಜದ ವಿರೋಧದ ನಡುವೆ ಹೇಗೆ ಶ್ೆ ಆಗುವ ಕನಸನ್ನು ನನಸಾಗಿಸಿಕೊಳ್ಳಲು ಪ್ರಯತ್ನಿಸುತ್ತಾಳೆ ಎನ್ನುವುದರ ಸುತ್ತ ಕಥೆ ಸಾಗುತ್ತದೆ. ಬ್ರಾಹ್ಮಣರ ಮನೆತನದ ಯುವತಿ ಮಾಂಸಾಹಾರ ತಯಾರಿಸುವ ಸವಾಲನ್ನು ಹೇಗೆ ನಿಭಾಯಿಸುತ್ತಾಳೆ ಎನ್ನುವುದೇ ಕಥೆ! ಇಂತಹದೊಂದು ವಿಷಯವನ್ನು ಹಾಸ್ಯ ಹಾಗೂ ಭಾವನಾತ್ಮಕವಾಗಿ ಟ್ರೇಲರ್‌ನಲ್ಲಿ ತೋರಿಸಿದ್ದಾರೆ ನಿಲೇಶ್ ಕೃಷ್ಣ.

    ಚಿತ್ರಕ್ಕೆ ಥಮನ್ ಸಂಗೀತವಿರಲಿದೆ. ನಯನತಾರಾ ಜತೆ ಜೈ, ಸತ್ಯರಾಜ್, ಕೆ.ಎಸ್. ರವಿಕುಮಾರ್, ರೆಡಿನ್ ಕಿಂಗ್ಸ್‌ಲೆ, ಅಚ್ಯುತ್ ಕುಮಾರ್, ಕಾರ್ತಿಕ್ ಕುಮಾರ್ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ. ಅಂದಹಾಗೆ, ಇದೇ ಡಿ.1ಕ್ಕೆ ಥಿಯೇಟರ್‌ಗಳಲ್ಲಿ ಸಿನಿಪ್ರಿಯರಿಗೆ ಮನರಂಜನೆಯ ಭೋಜನ ಬಡಿಸಲು ‘ಅನ್ನಪೂರಣಿ’ ರೆಡಿಯಾಗಿದೆ. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts