More

    ಬಹುನಿರೀಕ್ಷಿತ ‘ಆಡು ಜೀವಿತಂ’ ರಿಲೀಸ್ ಡೇಟ್​ಗೆ ಕ್ಷಣಗಣನೆ; ಸಿನಿಮಾದ ಕಥಾಹಂದರ ಹೀಗಿದೆ

    ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ನಿರ್ದೇಶನದ, ಪೃಥ್ವಿರಾಜ್ ಸುಕುಮಾರನ್, ನಟಿ ಅಮಲಾ ಪೌಲ್ ಮುಖ್ಯಭೂಮಿಕೆಯಲ್ಲಿರುವ ಆಡು ಜೀವಿತಂ ಸಿನಿಮಾ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಲಿದ್ದು, ನವೆಂಬರ್ 30 ರಂದು ಪ್ರಕಟಿಸಲು ಚಿತ್ರತಂಡ ಸಜ್ಜಾಗಿದೆ. ಸದ್ಯ ಚಿತ್ರದ ರಿಲೀಸ್​ ಡೇಟ್​ ಹಾಗೂ ಕುತೂಹಲಕಾರಿ ಸಂಗತಿಗಳನ್ನು ತಿಳಿಯಲು ಚಿತ್ರರಸಿಕರು ಕಾತರದಿಂದ ಕಾಯುತ್ತಿದ್ದಾರೆ.

    ಇದನ್ನೂ ಓದಿ: BBKS10: ಸ್ಪಷ್ಟವಾದ ಕನ್ನಡದಲ್ಲೇ ಪತ್ರ ಓದಿದ ಮೈಕಲ್​; ಈಗ ಹೇಳಿ ಮಣ್ಣಿನ ಮಗ ಯಾರು?

    ಚಿತ್ರದ ಶೀರ್ಷಿಕೆ ಘೋಷಣೆಯಾದ ಮೊದಲ ದಿನದಿಂದಲೂ ಸಿನಿಪ್ರೇಕ್ಷಕರಲ್ಲಿ ಕೌತುಕ ಹೆಚ್ಚಿದ್ದು, ಆಡು ಜೀವಿತಂ ಟೈಟಲ್​ ಏನು ಹೇಳುತ್ತಿದೆ? ಇದೊಂದು ಕುರಿಗಾಹಿ ಜೀವನವೇ ಎಂಬ ಹತ್ತು ಹಲವು ಪ್ರಶ್ನೆಗಳು ಮೂಡಿರುವುದು ಸಹಜ. ಸದ್ಯ ಈ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಕೂಡ ಸಾಕಷ್ಟು ಚರ್ಚೆಗಳು ನಡೆದಿವೆ. ಭಾರೀ ನಿರೀಕ್ಷೆ ಹುಟ್ಟಿಸಿರುವ ಸಿನಿಮಾದ ಪೋಸ್ಟರ್ಸ್ ಈಗಾಗಲೇ ಎಲ್ಲೆಡೆ ಮೆಚ್ಚುಗೆ ಪಡೆದಿದ್ದು, ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಸಂಗೀತ ಸ್ಪರ್ಶವಿದೆ.

    ಅಂದಹಾಗೆ ‘ಆಡು ಜೀವಿತಂ’ ಚಿತ್ರದ ಕಥೆ ಇಮಿಗ್ರಟ್ಸ್ ಸುತ್ತವೇ ಸಾಗುತ್ತದೆ. ತನ್ನ ಹೊಟ್ಟೆ ಪಾಡಿಗಾಗಿ ಕೆಲಸ ಅರಸಿ ಸೌದಿ ಅರೇಬಿಯಾಗೆ ವಲಸೆ ಹೋಗುವ ನಸೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ ಅಲ್ಲಿ ಅನುಭವಿಸುವ ಕಷ್ಟ, ಎದುರಿಸುವ ಸಮಸ್ಯೆ ಹೈಲೆಟ್. ಇನ್ನು ಆತನ ಪಾಸ್ಪೋರ್ಟ್ ಕಸಿದು ಆತನಿಗೆ ಕೊಡುವ ಹಿಂಸೆಗಳು ಆ ಬಿಸಿಲಿನ ಮರುಭೂಮಿಯಲ್ಲಿ ಆತ ಪಡುವ ಯಾತನೆ ಕುರಿತು ಸಾಗುವ ಕಥೆ ಇಲ್ಲಿದೆ.

    ಇದನ್ನೂ ಓದಿ: ಕರ್ನಾಟಕದಲ್ಲಿ ಚೀನಾದ ಹೊಸ ವೈರಸ್ ಆತಂಕ; ​​ಈ ಸೋಂಕಿನ​ ಲಕ್ಷಣ, ಮುನ್ನೆಚ್ಚರಿಕೆ ಕ್ರಮಗಳು ಇಂತಿವೆ….

    ನಿರ್ದೇಶಕ ಬ್ಲೆಸ್ಸಿ ಅವರ 15 ವರ್ಷದ ಕನಸಿನ ಕಥೆಯಿದು. ಕಲ್ಪನೆಯ ಪಾತ್ರದಲ್ಲಿ ವಲಸಿಗ ವ್ಯಕ್ತಿಯಾಗಿ ಹೊಸ ಲುಕ್ ಮೂಲಕ ಕಾಣಿಸಿಕೊಂಡಿರುವ ಪೃಥ್ವಿರಾಜ್ ಸುಕುಮಾರನ್, ಹಲವಾರು ವರ್ಷಗಳಿಂದ ಈ ಸಿನಿಮಾಗಾಗಿ ಶ್ರಮಿಸಿದ್ದಾರೆ. ಈಗ ಚಿತ್ರ ತೆರೆಗೆ ಬರಲು ಸಿದ್ಧವಿದ್ದು, ಚಿತ್ರದ ರಿಲೀಸ್ ಡೇಟ್ ನವೆಂಬರ್ 30ರಂದು ಚಿತ್ರತಂಡ ಅಧಿಕೃತವಾಗಿ ಘೋಷಣೆಯಾಗಲಿದೆ.

    ನಜೀಬ್ ಎಂಬ ವಲಸಿಗ ಕಾರ್ಮಿಕನ ಕಥೆಯನ್ನು ಮತ್ತು ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಅವನು ಅನುಭವಿಸುವ ದುಃಸ್ಥಿತಿ ಮತ್ತು ಅಸಹಾಯಕತೆಯ ಕಥೆ ಚಿತ್ರದ ಸಾರಾಂಶ ಎನ್ನುವ ಚಿತ್ರತಂಡ, ನವೆಂಬರ್ 30ರ ಸಂಜೆ 4 ಗಂಟೆಗೆ ಬಿಡುಗಡೆ ದಿನ ಘೋಷಣೆಯಾಗಲಿದೆ ಎಂದು ತಿಳಿಸಿದೆ.

    ತಂದೆ-ಮಗನ ಬಾಂಧವ್ಯದ ಜತೆಗೆ ಹಿಂಸೆ, ಕ್ರೌರ್ಯಕ್ಕೆ ಒತ್ತು: ಅನಿಮಲ್ ಚಿತ್ರದ ಬಗ್ಗೆ ರಣಬೀರ್ ಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts