

ಚೆನ್ನೈ: ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ದಕ್ಷಿಣ ಭಾರತದ ಸಿನಿ ಇಂಡಸ್ಟ್ರಿಯ ಸೂಪರ್ ಕ್ಯೂಟ್ ಜೋಡಿ. 6 ವರ್ಷಗಳ ಡೇಟಿಂಗ್ ನಂತರ ಕಳೆದ ವರ್ಷ ಇಬ್ಬರೂ ಮದುವೆಯಾಗಿದ್ದರು. ಇದೀಗ ಗಂಡ ವಿಘ್ನೇಶ್ ಕುರಿತು ಕೆಲವು ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿರುವ ನಯನತಾರಾ, ಒಬ್ಬ ಪುರುಷನ ಸಾಧನೆಯ ಹಿಂದೆ ಒಂದು ಮಹಿಳೆ ಇರುತ್ತಾಳೆ ಎನ್ನಲಾಗುತ್ತದೆ. ಹಾಗಾಗಿ ಗಂಡನ ಯಶಸ್ಸಗೆ ಹೆಂಡತಿ ಮುಖ್ಯವಾಗುತ್ತದೆ. ಆದರೆ ನನ್ನ ಯಶಸ್ಸಿನ ಹಿಂದೆ ತನ್ನ ಪತಿ ಇದ್ದಾನೆ. ಇದಕ್ಕೆ ಉದಾಹರಣೆ ನಾನೇ ಎಂದು ನಟಿ ನಯನತಾರಾ ಹೇಳಿದ್ದಾರೆ.
ಹಲವು ವರ್ಷಗಳಿಂದ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ನನ್ನ ಸಿನಿಮಾ ಜರ್ನಿಯಲ್ಲಿ ವಿಘ್ನೇಶ್ನನ್ನು ಭೇಟಿಯಾಗಿದ್ದಾನೆ. ಆಗಿನಿಂದಲೂ ನಾನು ತುಂಬಾ ಸಂತೋಷವಾಗಿದ್ದೇನೆ. ಎಲ್ಲಾ ವಿಷಯದಲ್ಲಿ ಪ್ರೋತ್ಸಾಹಿಸಿ, ಧೈರ್ಯ ತುಂಬುತ್ತಾನೆ. ನನ್ನ ನಿರ್ಧಾರಗಳನ್ನು ಯಾವತ್ತು ಪ್ರಶ್ನೆ ಮಾಡುವುದಿಲ್ಲ. ನನ್ನ ಮೇಲೆ ನನಗೆ ನಂಬಿಕೆ ಸೃಷ್ಟಿಸಿದ್ದಾನೆ. ಇದರಿಂದ ನಾನು ನನ್ನ ಪತಿಗೆ ಧನ್ಯವಾದ ಹೇಳುತ್ತೇನೆ ಎಂದು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಎಲ್ಲಿ ನಂಬಿಕೆ ಇರುವುದಿಲ್ಲವೋ, ಅಲ್ಲಿ ಪ್ರೀತಿ ಯಾವುದೇ ಕಾರಣಕ್ಕೂ ಇರುವುದಿಲ್ಲ. ಯಾರು ನಂಬಿಕೆ ಇಡುವುದಿಲ್ಲವೋ, ಅಂಥವರೊಂದಿಗೆ ಬದುಕುವುದಕ್ಕಿಂತ ಒಂಟಿಯಾಗಿ ಬದುಕುವುದು ಉತ್ತಮ ಎಂದು ನನ್ನ ಹಿಂದಿನ ಸಂಬಂಧಗಳನ್ನು ಕೊನೆಗೊಳಿಸಿದೆ' ಎನ್ನುವ ಅವರು ನಂಬಿಕೆ ಇಲ್ಲದ ಕಡೆ ಪ್ರೀತಿ ಇರಲ್ಲ ಎಂಬುದನ್ನು ಬಲವಾಗಿ ಒಪ್ಪುತ್ತಾರೆ. ಅಂದಹಾಗೆ, ಪ್ರೀತಿ ಮುರಿದುಬಿದ್ದು ಗಳಿಗೆಗಳಲ್ಲಿ, ಅಂತಹ ಕಠಿಣ ಸಂದರ್ಭಗಳಲ್ಲಿ ಅವರನ್ನು ಪಾರು ಮಾಡಿದ್ದು, ಸಿನಿಮಾರಂಗ ಮತ್ತು ಅಭಿಮಾನಿಗಳಂತೆ. ಈ ಬಗ್ಗೆ ನಯನತಾರಾ ಹೇಳಿಕೊಂಡಿದ್ದಾರೆ.