ಈಗ ಮಾತ್ರವಲ್ಲ ಎಂದೆಂದಿಗೂ ನಾನು ಭಾರತೀಯನೇ ಬಾಲಿವುಡ್​ ಕಿಂಗ್​ ಶಾರುಖ್​ ಖಾನ್​ ಭಾವುಕ ನುಡಿ

sharuk
Published on

ಮುಂಬೈ: ನಾನು 2023 ವರ್ಷದ ಭಾರತೀಯ ಎಂದು ಭಾವಿಸುವುದಿಲ್ಲ. ಈ ಹಿಂದೆ ಮತ್ತು ಮುಂದೆಯೂ ಭಾರತೀಯನಾಗಿಯೇ ಇರುತ್ತೇನೆ ಎಂದು ಬಾಲಿವುಡ್​ ಕಿಂಗ್​ ಖಾನ್ ಶಾರುಖ್​ ಭಾವುಕರಾಗಿದ್ದಾರೆ.

ಸಿಎನ್‌ಎನ್ ನ್ಯೂಸ್ 18 ಇಂಡಿಯನ್ ಆಯೋಜಿಸಿದ್ದ ಆಫ್ ದಿ ಇಯರ್ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಶಾರುಖ್, ತಮ್ಮ ಸಿನಿಮಾ ಜರ್ನಿ, ಕುಟುಂಬದ ಕಷ್ಟ ಸುಖಗಳನ್ನು ನೆನೆದು ಹತ್ತು ನಿಮಿಷಗಳ ಸುದೀರ್ಘ ಭಾಷಣದಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡರು.

ಯಾವುದೇ ವಿಷಯ ನೇರವಾಗಿ ಹೇಳಲು ಬಯಸುತ್ತೇನೆ. ನನ್ನ ಭಾಷಣವನ್ನು ನಾನೇ ಬರೆದಿದ್ದೇನೆ ಮತ್ತು ಅದನ್ನು ಮೂರ್ನಾಲ್ಕು ಬಾರಿ ಪರಿಶೀಲಿಸಿದ್ದೇನೆ. ಇದಕ್ಕಾಗಿ ಯಾವುದೇ ವಿಷಯವನ್ನು ತಪ್ಪಾಗಿ ಮಾತನಾಡುವುದಿಲ್ಲ ಎಂಬ ಧೈರ್ಯ ನನ್ನಲಿದೆ ಎಂದರು.

ನಾನು ಕೇವಲ ವರ್ಷದ ಭಾರತೀಯ ಎಂದು ಭಾವಿಸುವುದಿಲ್ಲ. ಹಿಂದಿನ ಎಲ್ಲಾ ವರ್ಷಗಳಲ್ಲಿ ನಾನು ಭಾರತೀಯನಾಗಿದ್ದೇನೆ ಮತ್ತು ಮುಂದಿನ ಎಲ್ಲಾ ವರ್ಷಗಳಲ್ಲಿ ನಾನು ಭಾರತೀಯನಾಗಿರುತ್ತೇನೆ. ನಾನು ವಾಸ್ತವವಾಗಿ ಹೆಂಗಸರು ಮತ್ತು ಸಜ್ಜನರು ಎಲ್ಲಾ ವಯಸ್ಸಿನ ಭಾರತೀಯ ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದೇ ಟಿವಿಯಲ್ಲಿ ನೋಡುತ್ತಿರುವ ನನ್ನ ಅಭಿಮಾನಿಗಳಿಗೆ ಧನ್ಯವಾದಗಳು. ನನ್ನ ಸಿನಿಮಾ ಕೆಲವರಿಗೆ ಇಷ್ಟವಾಗಿರಬಹುದು, ಕೆಲವರಿಗೆ ಇಷ್ಟವಾಗದೇ ಇರಬಹುದು ಆದರೆ ಸಿನಿಮಾವನ್ನು ನೀವೆಲ್ಲಾ ನೋಡಿ ನನ್ನನ್ನು ಮತ್ತು ನನ್ನ ಕುಟುಂಬವನ್ನು ಬೆಂಬಲಿಸಿದ್ದಕ್ಕೆ ನಿಮಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದರು.

ನನ್ನ ಕುಟುಂಬ, ನನ್ನ ಮಕ್ಕಳು, ನನ್ನ ಪ್ರೀತಿಪಾತ್ರರಿಗೆ ಈ ಸಂತೋಷ ತಂದಿದ್ದಕ್ಕೆ ಧನ್ಯವಾದಗಳು. ಮುಖ್ಯವಾಗಿ ನನ್ನನ್ನು ಮತ್ತೊಮ್ಮೆ ಸ್ಟಾರ್​ ಮಾಡಿದ್ದಕ್ಕಾಗಿ ಧನ್ಯವಾದಗಳು ಹೇಳಲು ಬಯಸುತ್ತೇನೆ ಭಾವುಕರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net