ಅಯ್ಯೋ ಏನಾಯಿತು ರವೀಂದರ್​ಗೆ? ಗಂಡನ ಸ್ಥಿತಿ ನೋಡಿ ನಟಿ ಮಹಾಲಕ್ಷ್ಮಿ ಕಣ್ಣೀರು!

Mahalakshmi 1
Published on

ಚೆನ್ನೈ: ಧಾರಾವಾಹಿ ನಟಿ ವಿ.ಜೆ. ಮಹಾಲಕ್ಷ್ಮೀ ಮತ್ತು ತಮಿಳು ನಿರ್ಮಾಪಕ ರವೀಂದರ್​ ಚಂದ್ರಶೇಖರ್ ತಮ್ಮ​ ಪ್ರೇಮ ವಿವಾಹದಿಂದಲೇ ಭಾರಿ ಸುದ್ದಿಯಾಗಿದ್ದು ಎಲ್ಲರಿಗೂ ತಿಳಿದಿದೆ. ಅದಕ್ಕೆ ಕಾರಣ ಮಹಾಲಕ್ಷ್ಮೀ ಸೌಂದರ್ಯವತಿಯಾಗಿದ್ದು, ಆಕೆ ಮದುವೆ ಆಗಿರುವ ರವೀಂದರ್​ ದಡೂತಿ ಮನುಷ್ಯ. ಹೀಗಾಗಿ ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಸಿಕ್ಕಾಪಟ್ಟೆ ಟ್ರೋಲ್​ ಸಹ ಆಯಿತು. ಮಹಾಲಕ್ಷ್ಮೀ ಹಣಕ್ಕಾಗಿ ದಡೂತಿ ಮನಷ್ಯನನ್ನು ಮದುವೆಯಾಗಿದ್ದಾಳೆ ಎಂಬ ಟೀಕೆಗಳು ವ್ಯಕ್ತವಾದವು. ಆದರೆ, ಯಾವುದಕ್ಕೂ ಕ್ಯಾರೆ ಎನ್ನದೆ ಇಬ್ಬರ ಸಂತೋಷ ಜೀವನ ನಡೆಸುತ್ತಿದ್ದಾರೆ.

ತಾಜಾ ಸಂಗತಿ ಏನೆಂದರೆ ಪತಿಯ ಆರೋಗ್ಯ ಸ್ಥಿತಿ ಹದಗೆಟ್ಟಿರುವುದರಿಂದ ಮಹಾಲಕ್ಷ್ಮೀ ಕಣ್ಣೀರಾಕುತ್ತಿದ್ದಾರೆ. ರವೀಂದರ್​ ಇತ್ತೀಚಗಷ್ಟೇ ವಂಚನೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿ, ಜಾಮೀನಿನ ಮೇಲೆ ಹೊರಬಂದಿರುವುದು ನಿಮಗೆಲ್ಲ ತಿಳಿದಿದೆ. ಇದೀಗ ಅವರ ಆರೋಗ್ಯದಲ್ಲಿ ದಿಢೀರನೇ ಏರುಪೇರಾಗಿದೆ.

ಉಸಿರಾಡಲು ರವೀಂದರ್​ ಅವರಿಗೆ ಕಷ್ಟವಾಗುತ್ತಿದ್ದು, ಕಳೆದ ಒಂದು ವಾರದಿಂದ ಐಸಿಯುನಲ್ಲಿ ಕಳೆದಿದ್ದಾರೆ. ಉಸಿರಾಡಲು ತುಂಬಾ ಕಷ್ಟಪಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಆಕ್ಸಿಜನ್​ ಮಾಸ್ಕ್​ ಹಾಕಿಕೊಂಡೆ ಮಾತನಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಏನಾಯಿತು ರವಿಂದರ್​ಗೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ದಡೂತಿ ದೇಹದಿಂದಾಗಿ ರವೀಂದರ್​ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿಯನ್ನು ಕಂಡು ಮಹಾಲಕ್ಷ್ಮೀ ಚಿಂತೆಗೆ ಜಾರಿದ್ದಾರೆ.

ಜೈಲಿಗೆ ಹೋಗಿದ್ದು ಏಕೆ?

ಚೆನ್ನೈ ಮೂಲದ ಬಾಲಾಜಿ ಗಾಬಾ ಎಂಬುವರು ಚೆನ್ನೈ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಬಂಧನವಾಗಿತ್ತು. ಘನತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುವ ಯೋಜನೆಯನ್ನು ಪುರಸಭೆಯಲ್ಲಿ ಪ್ರಾರಂಭಿಸುತ್ತೇವೆ ಆ ಯೋಜನೆಗೆ 200 ಕೋಟಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭವನ್ನು ಕಾಣಬಹುದೆಂದು ಹೇಳಿ ಬಾಲಾಜಿ ಗಾಬಾ ಅವರನ್ನು ನಂಬಿಸಿದ್ದರು. ಹಣದ ಆಸೆಗೆ ಬಿದ್ದ ಬಾಲಾಜಿ ಗಾಬಾ ರವೀಂದರ್​ ತೋರಿಸಿದ ದಾಖಲೆಗಳನ್ನು ನಂಬಿ 16 ಕೋಟಿ ರೂ. ವರೆಗೆ ಹೂಡಿಕೆ ಮಾಡಿದ್ದರು. ಹೇಳಿದ ಸಮಯಕ್ಕೆ ಯೋಜನೆ ಆರಂಭಿಸದಿದ್ದಾಗ ಬಾಲಾಜಿ ಗಾಬಾ ಅವರು ರವೀಂದರ್​ ಬಳಿ ಹಣ ವಾಪಸ್​ ಕೇಳಿದ್ದಾರೆ. ಆದರೆ, ಹಣವನ್ನು ಕೊಡಲು ಒಪ್ಪದ ರವೀಂದರ್​ ಬೆದರಿಕೆ ಹಾಕಿದರು. ಅಲ್ಲದೆ, ಅವರು ನೀಡಿದ್ದ ನಾಲ್ಕು ಚೆಕ್​ ಬೌನ್ಸ್​ ಆಗಿದೆ ಎಂದು ಬಾಲಾಜಿ ಗಾಬಾ ಅವರು ನೀಡಿದ ದೂರಿನ ಆಧಾರದ ಮೇಲೆ ರವೀಂದರ್​​ರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಇತ್ತೀಚೆಗಷ್ಟೇ ರವೀಂದರ್​ ಜಾಮೀನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಜೈಲಿನಲ್ಲೂ ಆರೋಗ್ಯ ಸಮಸ್ಯೆ

ಜೈಲಿನಲ್ಲಿ ನೆಲದ ಮೇಲೆ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾದ್ದರಿಂದ ಉಸಿರಾಟದ ಸಮಸ್ಯೆಯನ್ನು ರವೀಂದರ್​ ಎದುರಿಸಿದ್ದರು. ಈ ವಿಚಾರವನ್ನು ಮಹಾಲಕ್ಷ್ಮೀ ಅವರು ಸ್ವತಃ ಹೇಳಿಕೊಂಡು ದುಃಖಿಸಿದ್ದರು. ರವೀಂದರ್​ಗೆ ತನ್ನ ದೇಹವೇ ತೊಡಕಾಗಿದೆ.

ಮಹಾಲಕ್ಷ್ಮಿಗೆ ಕಾಡುತ್ತಿದೆ ಈ ಒಂದು ಚಿಂತೆ

ಗಂಡ ಜೈಲಿನಿಂದ ಹೊರಬಂದ ಖುಷಿ ಒಂದೆಡೆಯಾದರೆ, ಗಂಡನ ದಡೂತಿ ದೇಹದ ಚಿಂತೆ ಇನ್ನೊಂದೆಡೆ. ದಡೂತಿ ದೇಹದ ಕಾರಣ ರವೀಂದರ್​ ಸಾಮಾನ್ಯರಂತೆ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ನೆಲದ ಮೇಲೆ ಕುಳಿತುಕೊಳ್ಳಲು ಸಹ ಸಾಧ್ಯವಿಲ್ಲ. ಹೀಗಾಗಿ ಜೈಲಿನಲ್ಲಿ ಸಾಕಷ್ಟು ಕಷ್ಟ ಕೂಡ ಅನುಭವಿಸಿದ್ದಾರೆ. ಇದರ ಬಗ್ಗೆ ಮಾತನಾಡುತ್ತಾ ರವೀಂದರ್​ ಕಣ್ಣೀರು ಸಹ ಹಾಕಿದ್ದರು. ಅವರೊಂದಿಗೆ ಮಹಾಲಕ್ಷ್ಮೀ ಸಹ ಕಣ್ಣೀರಿಟ್ಟಿದ್ದರು. ಆದ್ದರಿಂದ ಹೇಗಾದರೂ ಮಾಡಿ ರವೀಂದರ್​ ತೂಕವನ್ನು ಇಳಿಸಬೇಕೆಂದು ಮಹಾಲಕ್ಷ್ಮೀ ಬಯಸಿದ್ದಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ ಎಂದು ಚಿಂತೆಗೀಡಾಗಿದ್ದಾರೆ.

ಅಂದಹಾಗೆ ಮಹಾಲಕ್ಷ್ಮೀ ಮತ್ತು ರವಿಂದರ್​ ಇಬ್ಬರು ತಿರುಪತಿಯಲ್ಲಿ ಕಳೆದ ವರ್ಷ ಸೆ.1ರಂದು ಮದುವೆ ಆದರು. ಇಬ್ಬರಿಗೂ ಇದು ಎರಡನೇ ಮದುವೆ ಆಗಿದ್ದು, ಮಹಾಬಲಿಪುರಂನಲ್ಲಿ ಇಬ್ಬರು ಹನಿಮೂನ್​ ಆಚರಿಸಿದರು. ಮದುವೆ ಬೆನ್ನಲ್ಲೇ ನವದಂಪತಿ ಸನ್​ ಟಿವಿಗೆ ಸಂದರ್ಶನ ನೀಡಿದ್ದರು. ಈ ವೇಳೆ ಹಣಕ್ಕಾಗಿ ಮದುವೆಯಾದ್ರಾ? ಎಂದು ಮಹಾಲಕ್ಷ್ಮೀ ಅವರನ್ನು ಪ್ರಶ್ನಿಸಲಾಗಿತ್ತು. ಏಕೆಂದರೆ, ಅನೇಕರ ಮನದಲ್ಲಿಯೂ ಇದೇ ಪ್ರಶ್ನೆ ಇದೆ. ಅಲ್ಲದೆ, ಕಾಮೆಂಟ್​ಗಳಲ್ಲಿಯೂ ಹಣಕ್ಕಾಗಿಯೇ ಮದುವೆ ಆಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಪ್ರಶ್ನೆಗೆ ಉತ್ತರ ನೀಡಿದ ಮಹಾಲಕ್ಷ್ಮೀ ನಾನು ಆರ್ಥಿಕವಾಗಿ ಸ್ವತಂತ್ರಳಾಗಿದ್ದಾನೆ ಮತ್ತು ನನ್ನ ಮಗನನ್ನು ನನ್ನದೇ ಹಣದಲ್ಲಿ ಬೆಳೆಸುವಷ್ಟು ಆರ್ಥಿಕವಾಗಿ ಸದೃಢಳಾಗಿದ್ದೇನೆ. ಮದುವೆ ಆಗದಿರಲು ಬಯಸಿದ್ದೇ ಆದರೆ, ರವೀಂದರ್​ ಕೇಳಿದ ರೀತಿ ನನಗೆ ಇಷ್ಟವಾಯಿತು. ನೀವು ನನ್ನ ಪತ್ನಿಯಾಗುವಿರಾ? ಎಂದು ಮಸೇಜ್​ ಮಾಡಿದರು. ಮಸೇಜ್​ ನೋಡಿದ ಬಳಿಕ ತುಂಬಾ ಸಮಯ ತೆಗೆದುಕೊಂಡು, ಯೋಚಿಸಿ, ಒಪ್ಪಿಗೆ ಸೂಚಿಸಿದೆ ಎಂದು ಹೇಳಿದ್ದರು.

ಮಹಾಲಕ್ಷ್ಮೀ ಅವರು ಕಿರುತೆರೆ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ವಾಣಿ ರಾಣಿ, ಆಫೀಸ್‌, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ಪ್ರಸ್ತುತ ಅವರು ನಟಿಸಿರುವ ಮಹಾರಸಿ ಎಂಬ ಧಾರಾವಾಹಿ ಪ್ರಸಾರವಾಗುತ್ತಿದೆ. ರವೀಂದರ್‌ ಚಂದ್ರಶೇಖರನ್‌ ಅವರು ‘ನಟ್ಪುನ ಎನ್ನಡು ಥೆರಿಯುಮ’, ‘ಮುರುಂಗೈಕೈ ಚಿಪ್ಸ್’, ‘ವಿಡಿಯುಮ್‌ ವಾರೈ ಕಾಥಿರು’ ಮುಂತಾದ ಸಿನಿಮಾಗಳನ್ನು ತಮ್ಮ ಲಿಬ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net