ನವರಾತ್ರಿ 2025; ಈ ಸಂದರ್ಭದಲ್ಲಿ ಶಾಪಿಂಗ್ ಮಾಡಲು ಶುಭ ದಿನ ಯಾವುದು ಗೊತ್ತಾ| astrology

navaratri
Published on

astrology; ಇದೇ ಅಕ್ಟೋಬರ್ 22 ರಿಂದ ನವರಾತ್ರಿ ಪ್ರಾರಂಭವಾಗಿದೆ. ಅಂದಿನಿಂದ ಒಂಬತ್ತು ದಿನಗಳಿಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವ ನೀಡಲಾಗಿದೆ. ಈ ದಿನಗಳಲ್ಲಿ ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ಪೂಜೆ ಮತ್ತು ಉಪವಾಸದ ಜೊತೆಗೆ, ಕೆಲವು ದಿನಾಂಕಗಳಲ್ಲಿ ಶಾಪಿಂಗ್ ಮಾಡುವುದು ಅತ್ಯಂತ ಶುಭವೆಂದು ನಂಬಲಾಗಿದೆ. ನವರಾತ್ರಿಯ ಪವಿತ್ರ ದಿನಗಳಲ್ಲಿ ಶಾಪಿಂಗ್ ಮಾಡುವುದರಿಂದ ಅತ್ಯಂತ ಶುಭ ಫಲಿತಾಂಶಗಳನ್ನು ಪಡೆಯಬಹುದು ಎನ್ನಲಾಗಿದೆ.

ಅದರಲ್ಲೂ ಮುಖ್ಯವಾಗಿ ನವರಾತ್ರಿಯ ಏಳನೇ ದಿನದಂದು ಚಿನ್ನ, ಬಟ್ಟೆಗಳ ಖರೀದಿಗೆ ಶುಭ ಮುಹೂರ್ತ ಇರುತ್ತದೆ. ಏಕೆಂದರೆ ಇವು ದೇವಿಯ ಶಕ್ತಿ ಮತ್ತು ಸಮೃದ್ಧಿಯ ಸಂಕೇತ. ಇದಲ್ಲದೆ ಉತ್ತಮ ದಿನವಾದ ನವಮಿಯಂದು ಆಯುಧ ಪೂಜೆಯೊಂದಿಗೆ ಖರೀದಿ ಮಾಡುವುದು ಲಾಭದಾಯಕ. ಸೆಪ್ಟೆಂಬರ್ 27 ರ ಜೊತೆ, ಸೆಪ್ಟೆಂಬರ್ 29 ರ ಸೋಮವಾರದಂದು ಅಭಿಜಿತ್ ಮುಹೂರ್ತದ ಸಮಯದಲ್ಲಿ ಶಾಪಿಂಗ್ ಮಾಡುವುದನ್ನು ಶುಭವೆಂದು ನಂಬಲಾಗಿದೆ. ಈ ಸಮಯದಲ್ಲಿ ವಸ್ತುಗಳನ್ನು ಖರೀದಿ ಮಾಡಿದರೆ, ನಿಮ್ಮ ಮನೆಗೆ ಸಂತೋಷ ಮತ್ತು ಸಮೃದ್ಧಿ ಲಭಿಸುತ್ತದೆ ಜೊತೆಗೆ ದೇವಿಯ ವಿಶೇಷ ಆಶೀರ್ವಾದ ಲಭಿಸುತ್ತದೆ ಎಂದು ಹೇಳಲಾಗಿದೆ.

ಹಿಂದೂ ಪಂಚಾಂಗದ ಪ್ರಕಾರ, ನವರಾತ್ರಿ ಸಮಯದಲ್ಲಿ ದೇವಿಯ ಆಶೀರ್ವಾದದಿಂದ ಬಟ್ಟೆ, ಚಿನ್ನಾಭರಣ, ಆಸ್ತಿ ಹಾಗೂ ಇತರ ವಸ್ತುಗಳನ್ನು ಖರೀದಿಸಿದರೆ ಸಮೃದ್ಧಿ ದೊರೆಯುತ್ತದೆ ಎಂದು ಉಲ್ಲೇಖಿಸಲಾಗಿದೆ. ಶಾಪಿಂಗ್​ ಮಾಡಲು ನವರಾತ್ರಿ ಸಮಯದಲ್ಲಿ ಎಲ್ಲಾ ದಿನಗಳೂ ಶುಭವಾದರೂ, ಕೆಲವು ದಿನಗಳು ವಿಶೇಷವಾಗಿ ವಸ್ತುಗಳ ಖರೀದಿಗೆ ಸೂಕ್ತವೆಂದು ಹೇಳಲಾಗಿದೆ.

ಶಾಪಿಂಗ್‌ ಮಾಡಲು ಶುಭ ದಿನಗಳು

ಸೆಪ್ಟೆಂಬರ್ 25 (ಗುರುವಾರ), ಸೆಪ್ಟೆಂಬರ್ 27, ಸೆಪ್ಟೆಂಬರ್ 28 (ಭಾನುವಾರ), ಸೆಪ್ಟೆಂಬರ್ 29 (ಸೋಮವಾರ), ಸೆಪ್ಟೆಂಬರ್ 30 (ಮಂಗಳವಾರ), ಅಕ್ಟೋಬರ್ 1 (ಬುಧವಾರ) ಒಟ್ಟಾರೆಯಾಗಿ ವಿಶೇಷವಾಗಿ ಈ ದಿನಗಳಲ್ಲಿ ಶಾಪಿಂಗ್​ ಮಾಡಿದರೆ ತುಂಬಾ ಒಳಿತಾಗುತ್ತದೆ ಎಂದು ನಂಬಲಾಗಿದೆ.

ಶುಭ ದಿನ ದಸರಾ

ಈ ಮೇಲೆ ಉಲ್ಲೇಖಿಸಲಾದ ಎಲ್ಲಾ ಮಾಹಿತಿಗಳನ್ನು ವಿವಿಧ ಮಾಧ್ಯಮಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

(ಏಜೆನ್ಸೀಸ್)

2025ರ ದಸರಾ ದಿನ ಹಿಂದೂ ಸಂಪ್ರದಾಯದಲ್ಲಿ ವಿಜಯದ ಸಂಕೇತವಾಗಿದ್ದು ಹೊಸ ಉದ್ಯಮ, ವ್ಯವಹಾರ, ಅಥವಾ ಯಾವುದೇ ಹೊಸ ಆರಂಭಕ್ಕೆ ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ದಸರಾದಂದು ದುರ್ಗಾ ದೇವಿಯು ಮಹಿಷಾಸುರನನ್ನು ಸಂಹರಿಸಿದ ಸಂಕೇತವಾಗಿ, ಈ ದಿನ ಯಶಸ್ಸು, ಸೌಭಾಗ್ಯ, ಮತ್ತು ಶಕ್ತಿಯೊಂದಿಗೆ ಯಾವುದೇ ಕೆಲಸವನ್ನು ಪ್ರಾರಂಭಿಸಲು ಒಳ್ಳೆಯದು ಎಂದು ನಂಬಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net