Stock Market; ಷೇರುಪೇಟೆಲಿ ಮುಂದುವರೆದ ಕರಡಿ ಕುಣಿತ: ಸೆನ್ಸೆಕ್ಸ್ 555, ನಿಫ್ಟಿ 166 ಅಂಕ ಕುಸಿತ

Untitled design - 2025-09-25T170507.456
Published on

Stock Market: ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ವಾರದ 4ನೇ ದಿನವಾದ ಗುರುವಾರ(ಸೆ.25) ಭಾರೀ ಕುಸಿತ ಕಂಡಿದೆ.

ಸೆನ್ಸೆಕ್ಸ್ ದಿನದ ಅಂತ್ಯಕ್ಕೆ 555.95 ಅಂಕಗಳ ಕುಸಿತದೊಂದಿಗೆ 81,159.63 ಕ್ಕೆ ತಲುಪಿದರೆ, ನಿಫ್ಟಿ 166 ಅಂಕಗಳ ಕುಸಿತದೊಂದಿಗೆ 24,890.85 ಕ್ಕೆ ತಲುಪಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ 0.7 ಪ್ರತಿಶತ ಕುಸಿತ ಕಂಡಿವೆ. ಹೀಗಾಗಿ, ಮಾನದಂಡಗಳು ತಮ್ಮ ಸೋಲಿನ ಓಟವನ್ನು ಸತತ 5ನೇ ಅವಧಿಗೆ ವಿಸ್ತರಿಸಿವೆ. ಕಳೆದ ವಾರ ಏರಿಕೆಯಲ್ಲಿದ್ದ ಷೇರುಪೇಟೆ ಈ ಬಾರಿ ವಾರದ ಆರಂಭದಲ್ಲೇ H-1B ವೀಸಾ ಶುಲ್ಕ ಘೋಷಣೆ ಹಿನ್ನೆಲೆ ಹೊಡೆತ ಬಿದ್ದಿದೆ.

ಇಂದಿನ ಟಾಪ್​ ಗೇನರ್ಸ್​​ ಹಾಗೂ ಲೂಸರ್ಸ್​

ಟಾಟಾ ಮೋಟಾರ್ಸ್, ಟ್ರೆಂಟ್, ಶ್ರೀರಾಮ್ ಫೈನಾನ್ಸ್, ಟಿಸಿಎಸ್, ಪವರ್ ಗ್ರಿಡ್ ನಿಫ್ಟಿಯಲ್ಲಿ ಪ್ರಮುಖ ನಷ್ಟ ಅನುಭವಿಸಿವೆ. ಭಾರತ್ ಎಲೆಕ್ಟ್ರಾನಿಕ್ಸ್, ಹಿಂಡಾಲ್ಕೊ, ಆಕ್ಸಿಸ್ ಬ್ಯಾಂಕ್, ಒಎನ್‌ಜಿಸಿ, ಹೀರೋ ಮೋಟೋಕಾರ್ಪ್ ಲಾಭ ಗಳಿಸಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net