More

    ನಾವಿಕೋತ್ಸವ ಆಗಸ್ಟ್​ 28-30: ವರ್ಚುವಲ್ ಕಾನ್ಫರೆನ್ಸ್​ ಈ ಸಲದ ವಿಶೇಷ

    ಬೆಂಕಿ ಬಸಣ್ಣ
    ನ್ಯೂಯಾರ್ಕ್: ಎರಡು ವರ್ಷಕ್ಕೊಮ್ಮೆ ನಡೆಯುವ ನಾವಿಕೋತ್ಸವ ಈ ಸಲ ಆಗಸ್ಟ್ 28ರಿಂದ 30 ತನಕ ವರ್ಚುವಲ್ ಕಾನ್ಫರೆನ್ಸ್ ರೂಪದಲ್ಲಿ ನಡೆಯಲಿದೆ. ಈ ಮೂರು ದಿನಗಳ  “ನಾವಿಕೋತ್ಸವ -20,  ಕಡಲಾಚೆಯಿಂದ ನಿಮ್ಮಂಗಳಕೆ” ಸಮ್ಮೇಳನದಲ್ಲಿ    ಕವಿ ಸಮ್ಮೇಳನ, ನೃತ್ಯ,  ಗಾಯನ,   ಔದ್ಯಮಿಕ ಸಂವಾದ, ಸಂಗೀತ, ಸಾಹಿತ್ಯ, ಮಾತ್ರವಲ್ಲದೆ ಜೊತೆಗೆ ಕನ್ನಡ ಸಂಸ್ಕೃತಿ ಮತ್ತು ಭಾಷೆಗೆ ಸಂಬಂಧಪಟ್ಟಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ ಎಂದು ನಾವಿಕ (ನಾವು ವಿಶ್ವ ಕನ್ನಡಿಗರು) ಸಂಸ್ಥೆ ಅಧ್ಯಕ್ಷ ವಲ್ಲೀಶ ಶಾಸ್ತ್ರಿ ತಿಳಿಸಿದ್ದಾರೆ.

    ನಾವಿಕೋತ್ಸವ -20 ದಲ್ಲಿ  ಅಮೇರಿಕ, ಕೆನಡಾ ಮಾತ್ರವಲ್ಲದೆ,  ಯೂರೋಪ್,  ಆಸ್ಟ್ರೇಲಿಯಾ, ಆಫ್ರಿಕಾ, ಸಿಂಗಾಪುರ, ಗಲ್ಫ್  ಮುಂತಾದ ದೇಶಗಳಲ್ಲಿರುವ ಅನಿವಾಸಿ  ಕನ್ನಡಿಗರು ಭಾಗವಹಿಸುವ ನಿರೀಕ್ಷೆಯಿದೆ. ಭಾರತವೂ ಸೇರಿ ಸುಮಾರು 50ಕ್ಕೂ ಹೆಚ್ಚು ದೇಶಗಳಲ್ಲಿನ ಕನ್ನಡಿಗರಿಗೆ ಆಯಾ ಕನ್ನಡ ಪರ ಸಂಘ, ಸಂಸ್ಥೆಗಳ ಮೂಲಕ ಈ ಕಾರ್ಯಕ್ರಮವನ್ನು ನೋಡುವ ಅವಕಾಶ ದೊರೆಯುತ್ತದೆ. “ನಾವಿಕ”(ನಾವು ವಿಶ್ವ ಕನ್ನಡಿಗರು) ಸಂಸ್ಥೆ ಪ್ರತಿ ಎರಡು ವರ್ಷಕ್ಕೊಮ್ಮೆ ಬೆಂಗಳೂರು ಹಾಗೂ ಮೈಸೂರು ನಗರಗಳಲ್ಲಿ ನಾವಿಕೋತ್ಸವವನ್ನು ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಸಮಿತಿಯ ಸಹಯೋಗದೊಂದಿಗೆ ಯಶಸ್ವಿಯಾಗಿ ನಡೆಸಿಕೊಡುತ್ತಾ ಬಂದಿದೆ. ಈ ಬಾರಿ ಕೊರೊನಾ ಹೆಮ್ಮಾರಿಯ ಪರಿಣಾಮವಾಗಿ ಈ ಉತ್ಸವವನ್ನು ನಿಲ್ಲಿಸಬಾರದೆಂಬ ಉದ್ಧೇಶದಿಂದ ಒಂದು ಅಂತರ್ಜಾಲ – ಸಮ್ಮೇಳನ (Virtual Conference) ನಡೆಸಬೇಕೆಂದು ತೀರ್ಮಾನಿಸಿದ್ದೇವೆ. ಆಸಕ್ತ ಕನ್ನಡ ಸಂಘಗಳು [email protected] ಮೂಲಕ ಸಂರ್ಕಿಸಬಹುದು ಎಂದು ಸಂಚಾಲಕ ಡಾ।। ಅಶೋಕ್ ಕಟ್ಟಿಮನಿ ತಿಳಿಸಿದ್ದಾರೆ.

    ಇದನ್ನೂ ಓದಿ: VIDEO|ಗಡ್ಡ ಪ್ರಿಯರು ತಲೆ ಕೆಡಿಸಿಕೊಳ್ಳಬೇಕಾದ ಸುದ್ದಿ!

    ಪ್ರತಿ ಕನ್ನಡ ಸಂಘಗಳಿಂದ ಒಂದು ಕಾರ್ಯಕ್ರಮ ಮತ್ತು ಆ ಸಂಘಗಳ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಗಳನ್ನು ವಿಶ್ವದ ಕನ್ನಡಿಗರಿಗೆ ತಿಳಿಸುವ ಅವಕಾಶವಿರುತ್ತದೆ. ಮೂಲ ಉದ್ಧೇಶ ಅನಿವಾಸಿ ಕನ್ನಡಿಗರ ಕನ್ನಡಾಭಿಮಾನ ಹಾಗೂ ಅವರ ಪ್ರತಿಭಾ ಪ್ರದರ್ಶನಕ್ಕೊಂದು ಅವಕಾಶ. ಈ ಮೂರು ದಿವಸಗಳ ಕಾರ್ಯಕ್ರಮದಲ್ಲಿ ಔದ್ಯಮಿಕ ಸಂವಾದ, ಕವಿ ಸಮ್ಮೇಳನ, ನೃತ್ಯ, ಗಾಯನಕ್ಕೆ ಅವಕಾಶವಿರುತ್ತದೆ. ಪ್ರತಿದಿವಸ ಒಂದು ಕರ್ನಾಟಕದ ಕಲಾ ತಾರೆಯರನ್ನೊಳಗೊಂಡ ಕಾರ್ಯಕ್ರಮವೂ ಇರುತ್ತದೆ. ಹೆಚ್ಚಿನ ವಿವರಗಳಿಗಾಗಿ www.NAVIKA.org ಗೆ ಭೇಟಿ ಕೊಡಿ.

    ಡ್ರ್ಯಾಗನ್ ಬೆನ್ನಲುಬು ಮುರಿಯೋದಕ್ಕೆ ಜಾಗೃತಿ ಅಭಿಯಾನ: ಮನೆಮನೆಗೆ ತೆರಳಲಿದ್ದಾರೆ ವಿಹಿಂಪ ಕಾರ್ಯಕರ್ತರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts