ಅಭಿವೃದ್ಧಿ ಕೆಲಸಗಳಿಗೆ ಲಭಿಸಲಿ ಸರ್ವರ ಬೆಂಬಲ : ನಿಡ್ಪಳ್ಳಿ ನವರಾತ್ರಿ ಕ್ರೀಡೋತ್ಸವದಲ್ಲಿ ಅಶೋಕ್ ರೈ ಆಶಯ

New Project (10)
Published on

ಪುತ್ತೂರು ಗ್ರಾಮಾಂತರ: ರಾಜಕೀಯ ಮಾಡಬೇಕಾಗಿರುವುದು ಚುನಾವಣೆ ಸಮಯದಲ್ಲಿ ಮಾತ್ರ. ಚುನಾವಣೆ ಕಳೆದ ಬಳಿಕ ಗೆಲುವು ಸಾಧಿಸಿದವರು ಯಾರೇ ಆಗಿದ್ದರೂ ಅಭಿವೃದ್ಧಿ ಕೆಲಸ ಮಾಡಬೇಕು. ಅಭಿವೃದ್ಧಿ ಕೆಲಸವನ್ನು ಯಾರೇ ಮಾಡಿದರೂ ಅದಕ್ಕೆ ಎಲ್ಲರೂ ಪಕ್ಷ, ಧರ್ಮ ಭೇದವಿಲ್ಲದೆ ಬೆಂಬಲ ಕೊಡಬೇಕು. ಮತ್ಸರ ಸ್ವಭಾವ ಮನುಷ್ಯನನ್ನು ಹಾಳುಮಾಡುತ್ತದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ನಿಡ್ಪಳ್ಳಿಯ ಶಾಂತದುರ್ಗಾ ದೇವಸ್ಥಾನ ವತಿಯಿಂದ ದೇವಸ್ಥಾನದ ವಠಾರದಲ್ಲಿ ನವರಾತ್ರಿಯ ಪ್ರಯುಕ್ತ ಭಾನುವಾರ ಕ್ರೀಡೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

ಶಾಂತದುರ್ಗಾ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ನಾಗೇಶ್ ಗೌಡ ಪುಳಿತ್ತಡ್ಕ, ನಿಡ್ಪಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಅವಿನಾಶ್ ಶೆಟ್ಟಿ ಕುಡ್ಚಿಲ, ಸತೀಶ್ ರೈ, ನಿಡ್ಪಳ್ಳಿ ವಲಯ ಕಾಂಗ್ರೆಸ್ ಅಧ್ಯಕ್ಷ ಹರೀಶ್, ಉದ್ಯಮಿ ಪಟ್ಟೆ ರಾಧಾಕಷ್ಣ ರೈ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net