ಸಮುದಾಯಕ್ಕೆ ಸಾಮಾಜಿಕ, ಆರ್ಥಿಕ ಬಲ : ಡಾ.ಸದಾಶಿವ ಶೆಟ್ಟಿ ಕುಳೂರುಕನ್ಯಾನ ಅಭಿಪ್ರಾಯ

New Project (5)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಸಮಾಜದ ಅತಿ ದುರ್ಬಲರು ಹಾಗೂ ಬಡ ಕುಟುಂಬಗಳಿಗೆ ನೆರವಾಗುವುದರ ಜತೆಗೆ ಸಮಗ್ರ ಬಂಟ ಸಮುದಾಯಕ್ಕೆ ಸಾಮಾಜಿಕ, ಆರ್ಥಿಕ ಬಲ ತುಂಬುವುದು ಬಂಟರ ಸಂಘದ ಪ್ರಮುಖ ಧ್ಯೇಯ ಎಂದು ಉದ್ಯಮಿ ಡಾ.ಸದಾಶಿವ ಶೆಟ್ಟಿ ಕುಳೂರುಕನ್ಯಾನ ಹೇಳಿದರು.

ಎಣ್ಮಕಜೆ ಪಂಚಾಯಿತಿ ಬಂಟ್ಸ್ ಸರ್ವೀಸ್ ಸೊಸೈಟಿ ವತಿಯಿಂದ ಪೆರ್ಲ ಸನಿಹದ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ ವಿಷ್ಣುಮೂರ್ತಿ ದೇವಸ್ಥಾನ ಸಭಾಂಗಣದಲ್ಲಿ ಭಾನುವಾರ ಬಂಟರ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾ ಬಂಟರ ಸಂಘ ಅಧ್ಯಕ್ಷ ಐ.ಸುಬ್ಬಯ್ಯ ರೈ ಉದ್ಘಾಟಿಸಿದರು. ಯುಎಇ ಮನಿ ಎಕ್ಸ್‌ಚೇಂಜ್ ಮಾಜಿ ಅಧ್ಯಕ್ಷ ಸುಧೀರ್‌ಕುಮಾರ್ ಶೆಟ್ಟಿ ಎಣ್ಮಕಜೆ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಬಂಟರ ಸಂಘ ಕಾರ್ಯಕಾರಿ ಸಮಿತಿ ಸದಸ್ಯೆ ಶೋಭಾ ಶೇಖ ಅತಿಥಿಯಾಗಿದ್ದರು.

ಬಂಟರ ಸಂಘ ಪದಾಧಿಕಾರಿಗಳಾದ ಸಂತೋಷ್‌ಕುಮಾರ್ ಶೆಟ್ಟಿ ಬಜದಗುತ್ತು, ಪದ್ಮನಾಭ ಶೆಟ್ಟಿ ಚಕ್ಕಿತ್ತಡ್ಕ, ಚಿದಾನಂದ ಆಳ್ವ, ಬಿ.ಎಸ್.ಗಾಂಭೀರ, ಸದಾನಂದ ಶೆಟ್ಟಿ ಕುದ್ವ, ಕೊರಗಪ್ಪ ಶೆಟ್ಟಿ ಅಮೆಕ್ಕಳ, ಹರಿಪ್ರಸಾದ್ ಶೆಟ್ಟಿ, ರಾಜಾರಾಮ ಶೆಟ್ಟಿ ಪಟ್ಲ, ರಾಜೇಶ್ವರಿ ಬಜಕೂಡ್ಲು ಉಪಸ್ಥಿತರಿದ್ದರು. ಉದ್ಯಮಿ ಡಾ.ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಎಣ್ಮಕಜೆ ಪಂಚಾಯಿತಿ ಬಂಟ್ಸ್ ಸರ್ವೀಸ್ ಸೊಸೈಟಿ ಅಧ್ಯಕ್ಷ ನಾರಾಯಣ ಆಳ್ವ ಪ್ರಾಸ್ತಾವಿಕ ಮಾತನಾಡಿದರು. ಶರಶ್ಚಂದ್ರ ಶೆಟ್ಟಿ ಶೇಣಿ ಸ್ವಾಗತಿಸಿದರು. ವಾಣಿ ಜಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಮೇಶ್ಚಂದ್ರ ರೈ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net