

ಬೆಳ್ತಂಗಡಿ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ನಲ್ಲಿ ಇಂಜಿನಿಯರ್ಸ್ ದಿನಾಚರಣೆ ಪ್ರಯುಕ್ತ ಟೆಕ್ ಟ್ರಿಕ್ಸ್-2025 ಜಿಲ್ಲಾಮಟ್ಟದ ಇಂಟರ್ ಪಾಲಿಟೆಕ್ನಿಕ್ ಟೆಕ್ನಿಕಲ್ ಕಾಂಪಿಟೇಷನ್ ಸೋಮವಾರ ನಡೆಯಿತು.
ಕುಕ್ಕೆ ಸುಬ್ರಹ್ಮಣ್ಯದ ಸ್ಪೆಷಲ್ ಸಬ್ ಡಿವಿಜನ್ ಅಸಿಸ್ಟೆಂಟ್ ಇಂಜಿನಿಯರ್ ಪ್ರಮೋದ್ ಕುಮಾರ್ ಕೆ.ಕೆ. ಉದ್ಘಾಟಿಸಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶ ಸಿಕ್ಕಿದಾಗ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ನಮ್ಮ ಬದುಕಿಗೆ ಪ್ರಯೋಜನವಾಗುತ್ತದೆ. ಈಗಿನ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಂಡು ಟೆಕ್ನಿಕಲ್ ಸೇವೆ ಮಾಡಿದರೆ ಯಶಸ್ಸು ಸಾಧಿಸಲು ಅವಕಾಶ ಇದೆ ಎಂದರು.
ಪ್ರಾಂಶುಪಾಲ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪಾಲಿಟೆಕ್ನಿಕ್ ಮ್ಯಾನೇಜರ್ ಚಂದ್ರನಾಥ ಜೈನ್, ವಿವಿಧ ವಿಭಾಗಗಳ ಮುಖ್ಯಸ್ಥರಾದ ಮೇರಿ ಸ್ಮಿತಾ, ದಿನೇಶ್, ಶ್ರೇಯಾಂಕ್ ಜೈನ್, ತೃಪ್ತಿ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕ ಶಂಕರ ಭಟ್ ಸ್ವಾಗತಿಸಿದರು. ರೆನಿಟಾ ಫರ್ನಾಂಡಿಸ್ ವಂದಿಸಿದರು. ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.