

ಕಾಸರಗೋಡು: ವಾರಕ ಎಂಡಿಎಂಎ ಸಾಗಿಸುತ್ತಿದ್ದ ಕುಂಬಳೆ ಬಂಬ್ರಾಣ ದಿಡುಮೆ ನಿವಾಸಿ ಮಹಮ್ಮದ್ ನೌಫಾಲ್(27) ಎಂಬಾತನನ್ನು ಕುಂಬಳೆ ಠಾಣಾ ಎಸ್ಐ ಶ್ರೀಜೇಶ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಈತನ ವಶದಲ್ಲಿದ್ದ 9.810 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಭಾನುವಾರ ರಾತ್ರಿ ಉಪ್ಪಳ ನಯಾಬಜಾರ್ನಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದ ಸಂದರ್ಭ ಸಂಶಯಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಈತನನ್ನು ವಿಚಾರಣೆಗೊಳಪಡಿಸಿದಾಗ ಎಂಡಿಎಂಎ ಪತ್ತೆಯಾಗಿದೆ.