ಶ್ರೀಕೃಷ್ಣ ಪ್ರಪಂಚದ ಮೂಲ ಗುರು : ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಉಳಿಯ ವಿಷ್ಣು ಆಸ್ರ ಅಭಿಮತ

New Project (3)
Published on

ಮಧೂರು: ಶ್ರೀಕೃಷ್ಣ ಪರಮಾತ್ಮ ಪ್ರಪಂಚದ ಮೂಲಗುರು. ಬಿಡಿಸಿದಷ್ಟು ತೆರೆದುಕೊಳ್ಳುವ ಶ್ರೀಕೃಷ್ಣ ಪರಮಾತ್ಮನ ಸಂದೇಶಗಳು ಸರ್ವಕಾಲ ಸತ್ಯ. ಶ್ರೀಕೃಷ್ಣನ ಬಾಲಲೀಲೆಗಳು ಜಗತ್ತನ್ನು ತಿದ್ದುವ ಸಾಂದರ್ಭಿಕ ಸಂದೇಶಗಳಾಗಿವೆ ಎಂದು ಉಳಿಯ ವಿಷ್ಣು ಆಸ್ರ ಹೇಳಿದರು.

ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಅಂಗವಾಗಿ ಭಾನುವಾರ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.

ದೇವಸ್ಥಾನ ಆನುವಂಶಿಕ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್ ಅಧ್ಯಕ್ಷತೆ ವಹಿಸಿದರು. ಬೇಳ ಸಹಕಾರಿ ಆಯುರ್ವೇದ ಡಿಸ್ಪೆನ್ಸರಿಯ ಆರೋಗ್ಯ ಅಧಿಕಾರಿ ಡಾ.ಜಯಶ್ರೀ ನಾಗರಾಜ ಮುಖ್ಯ ಅತಿಥಿಯಾಗಿದ್ದರು. ದಂತ ವೈದ್ಯೆ ಉಮಾಮಹೇಶ್ವರಿ ಎ.ಎಸ್. ಬಹುಮಾನ ವಿತರಿಸಿದರು. ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಮತ್ತು ಧಾರ್ಮಿಕ ದತ್ತಿ ಇಲಾಖೆ ನಿವೃತ್ತ ಅಧಿಕಾರಿ ಉಮೇಶ್ ಅಟ್ಟೆಗೋಳಿ ಅವರನ್ನು ಅಭಿನಂದಿಸಲಾಯಿತು. ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಿಂದ ವಿವಿಧ ಬಾಲಗೋಕುಲದ ನೂರಾರು ಮಂದಿ ಮುದ್ದು ಕೃಷ್ಣ, ರಾಧೆ ವೇಷಧಾರಿಗಳ ಆಕರ್ಷಕ ಮೆರವಣಿಗೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿದರು. ಬಳಿಕ ಮುದ್ದುಕೃಷ್ಣ ವೇಷ ಸ್ಪರ್ಧೆ ಜರುಗಿತು. ಡಾ.ಉದಯ ಕುಮಾರ್ ಕೂಡ್ಲು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಯಕ್ಷ ಗಾನಾರ್ಚನೆ ನಡೆಯಿತು. ಮಾಲತಿ ಜಗದೀಶ್ ಸ್ವಾಗತಿಸಿದರು. ವೇಣುಗೋಪಾಲ ವಂದಿಸಿದರು. ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net