ಬ್ಯಾಂಕ್​ ಮುಷ್ಕರ: ಕೇಂದ್ರ ಸರ್ಕಾರಕ್ಕೆ ಸಾರ್ವಜನಿಕ ವಲಯದ ಬ್ಯಾಂಕುಗಳು ಕೊಟ್ಟ ಎಚ್ಚರಿಕೆ ಎಂತದು?

ank Strike
ಬ್ಯಾಂಕ್‌ಗಳ ಸಾರ್ವತ್ರಿಕ ಮುಷ್ಕರ ಹಿನ್ನೆಲೆಯಲ್ಲಿ ದೇವದುರ್ಗದ ಜೆಪಿ ಸರ್ಕಲ್‌ನಲ್ಲಿರುವ ಎಸ್‌ಬಿಐ ಶಾಖೆ ಸೋಮವಾರ ಬಂದ್ ಮಾಡಲಾಗಿತ್ತು.
Published on

ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಎಸ್​ಬಿಐ ನೇತೃತ್ವದ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯುನಿಯನ್ಸ್​ ಕರೆ ನೀಡಿರುವ ಬ್ಯಾಂಕ್​ ಮುಷ್ಕರಕ್ಕೆ ರಾಷ್ಟ್ರವ್ಯಾಪಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮುಷ್ಕರದ ಎರಡನೇ ದಿನವಾದ ಇಂದು ಕೂಡ ಅನೇಕ ಬ್ಯಾಂಕುಗಳು ವಹಿವಾಟು ನಡೆಸಲಿಲ್ಲ.

ಮುಷ್ಕರಕ್ಕೆ ಕರೆ ನೀಡಿರುವ ಬ್ಯಾಂಕ್​ ಸಂಘಟನೆಗಳು, ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೇ ದೆಹಲಿಯಲ್ಲಿ ರೈತರು ನಿರಂತರವಾಗಿ ನಡೆಸುತ್ತಿರುವ ಪ್ರತಿಭಟನೆಯಂತೇ ನಾವು ಕೂಡ ಪ್ರತಿಭಟನೆಗೆ ಕೂರಬೇಕಾಗುತ್ತದೆ ಎಂದು ಎಚ್ಚರಿಸಿವೆ.

ಸೋಮವಾರದ ಮುಷ್ಕರದಲ್ಲಿ ಸುಮಾರು 10 ಲಕ್ಷ ಸಿಬ್ಬಂದಿ ಭಾಗಿಯಾಗಿದ್ದರು. ಈ ವೇಳೆ ಸಾರ್ವಜನಿಕವಲಯದ ಬ್ಯಾಂಕುಗಳನ್ನು ಉಳಿಸಿ, ಸಾಮಾಜಿಕ ಬ್ಯಾಂಕಿಗ್ ವ್ಯವಸ್ಥೆ ಉಳಿಸಿ, ನಾಗರಿಕರ ಉಳಿತಾಯ ಠೇವಣಿ ರಕ್ಷಿಸಿ ಎಂದು ಸ್ಲೋಗನ್​ಗಳನ್ನು ಮುಷ್ಕರನಿರತರು ಪ್ರದರ್ಶಿಸಿದ್ದಾರೆ. ಪ್ರಮುಖ ಬ್ಯಾಂಕುಗಳ ಈ ಎರಡು ದಿನದ ಮುಷ್ಕರದಿಂದ ಗ್ರಾಹಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಸರ್ಕಾರಕ್ಕೆ ಆದಾಯದ ಹರಿವು ಹೆಚ್ಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಲದ ಬಜೆಟ್​ನಲ್ಲಿ ಖಾಸಗೀಕರಣವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ. ಈ ದಿಸೆಯಲ್ಲಿ ಮತ್ತಷ್ಟು ಬ್ಯಾಂಕುಗಳನ್ನು ಹಾಗೂ ಒಂದು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಯನ್ನು ಖಾಸಗೀಕರಣಗೊಳಿಸುವ ಮಾತನ್ನಾಡಿದ್ದಾರೆ. ಇದನ್ನು ಖಂಡಿಸಿ ಬ್ಯಾಂಕುಗಳು ದೇಶ ವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿವೆ. (ಏಜೇನ್ಸಿಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net