

ಮೂಡುಬಿದಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಪತ್ರಿಕೋದ್ಯಮ ಹಾಗೂ ಬಿವೋಕ್ ವಿಭಾಗಗಳು ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಮಾಧ್ಯಮ ಪರ್ವ-2025ರಲ್ಲಿ ಆಳ್ವಾಸ್ ಸ್ವಾಯತ್ತ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಒಟ್ಟು 4 ವಿಭಾಗದಲ್ಲಿ ಪ್ರಥಮ, ಎರಡು ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ತಂಡ ಪಡೆದುಕೊಂಡಿದೆ. ವಿದ್ಯಾರ್ಥಿಗಳಾದ ಇಶಿತ್ ಹಾಗೂ ಅಶ್ವಿನ್ ಕ್ರೈಸಿಕ್ ಮ್ಯಾನೇಜ್ಮೆಂಟ್ನಲ್ಲಿ ಪ್ರಥಮ, ಪ್ರಧಾನ್ ಛಾಯಾಗ್ರಹಣದಲ್ಲಿ ಪ್ರಥಮ, ರುಧೀರ್ ಹಾಗೂ ಮಿಯಾರ ಅವರನ್ನು ಒಳಗೊಂಡ ತಂಡ ರಸಪ್ರಶ್ನೆಯಲ್ಲಿ ಪ್ರಥಮ, ರಚನ್, ಸರ್ವೇಶ್, ವಿಶಾಲ್, ದೀಕ್ಷಾ, ಸುರಕ್ಷಾ, ಆಕಾಶ್, ಸುಮಿತ್, ದಿಶಾ, ಪ್ರಗತಿ, ಸ್ವಾತಿ, ರಿಶಾಂತ್, ರಕ್ಷಿತಾ, ಶ್ರೀವಲ್ಲಿ ಅವರಿದ್ದ ತಂಡ ವೆರೈಟಿ ನೃತ್ಯ ಪ್ರದರ್ಶನದಲ್ಲಿ (ವೈವಿಧ್ಯಮಯ ನೃತ್ಯ) ಪ್ರಥಮ ಸ್ಥಾನ ಪಡೆಯಿತು. ವೀಕ್ಷಿತಾ ಹಾಗೂ ರಾಹುಲ್ ಕ್ರಮವಾಗಿ ವರದಿಗಾರಿಕೆ ಹಾಗೂ ರೀಲ್ಸ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಉಪನ್ಯಾಸಕ ಸುಧೀಂದ್ರ ಶಾಂತಿ ಹಾಗೂ ಉಪನ್ಯಾಸಕಿ ಹನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು.
ಸಾಧಕ ವಿದ್ಯಾರ್ಥಿಗಳನ್ನು ಆಳ್ವಾಸ್ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ.ಕುರಿಯನ್ ಅಭಿನಂದಿಸಿದ್ದಾರೆ.