

ಮೂಲ್ಕಿ: ಜಿ.ಎಸ್.ಬಿ. ಸಭಾ ವತಿಯಿಂದ 12 ವರ್ಷಗಳಿಂದ ನಿರಂತರ ರಕ್ತದಾನ ಮಾಡುತ್ತಿರುವುದು ಎಲ್ಲರಿಗೂ ಮಾದರಿ ಎಂದು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಪ್ರಾದೇಶಿಕ ರಕ್ತ ನಿಧಿ ಕೇಂದ್ರದ ಮಂಗಳೂರು ವಿಭಾಗ ಮುಖ್ಯಸ್ಥ ಆ್ಯಂಟನಿ ಡಿಸೋಜ ಹೇಳಿದರು.
ಮೂಲ್ಕಿಯಲ್ಲಿ ಭಾನುವಾರ ಗೌಡ ಸಾರಸ್ವತ ಬ್ರಾಹ್ಮಣ ಸಭಾ ಮೂಲ್ಕಿ, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಪ್ರಾದೇಶಿಕ ರಕ್ತ ನಿಧಿ ಕೇಂದ್ರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಪ್ರಥಮ ರಕ್ತದಾನಿ ಮೂಲ್ಕಿ ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠ ಶಾಲೆ ಸಂಚಾಲಕ ಎಂ.ಪಾಂಡುರಂಗ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವನದ ಅತಿ ಶ್ರೇಷ್ಠ ದಾನವಾದ ರಕ್ತದಾನದಲ್ಲಿ ಭಾಗಿಗಳಾಗುವ ಮೂಲಕ ಇನ್ನೊಂದು ಜೀವಕ್ಕೆ ಸಹಾಯ ಹಾಗೂ ನಮ್ಮ ಆರೋಗ್ಯವರ್ಧನೆ ಸಾಧ್ಯವಿದೆ ಎಂದರು.
ಜಿ.ಎಸ್.ಬಿ. ಸಭಾ ಅಧ್ಯಕ್ಷ ಸತ್ಯೇಂದ್ರ ಶೆಣೈ, ಕಾರ್ಯದರ್ಶಿ ವಿಶ್ವನಾಥ ಶೆಣೈ, ಕೋಶಾಧಿಕಾರಿ ಪ್ರವೀಣ್ ಕಾಮತ್, ಪಂಡರಿನಾಥ ಶೆಣೈ, ವೆಂಕಟೇಶ್ ಕಾಮತ್, ಹರೀಶ್ ಡಿ.ಕಾಮತ್, ಅಶೋಕ್ ಕಾಮತ್, ಅಜಿತ್ ಶೆಣೈ, ವೆಂಕಟೇಶ್ ಶೆಣೈ ಉಪಸ್ಥಿತರಿದ್ದರು. ವಿಶ್ವನಾಥ ಶೆಣೈ ವಂದಿಸಿದರು.